- Home
- Entertainment
- TV Talk
- Naa Ninna Bidalaare: ಶರತ್- ದುರ್ಗಾ ಮೊದಲ ರಾತ್ರಿ ಸಂಭ್ರಮ- ಹಾಲಿನ ಬದಲು ನೀರು; ಇದೇನಾಗೋಯ್ತು?
Naa Ninna Bidalaare: ಶರತ್- ದುರ್ಗಾ ಮೊದಲ ರಾತ್ರಿ ಸಂಭ್ರಮ- ಹಾಲಿನ ಬದಲು ನೀರು; ಇದೇನಾಗೋಯ್ತು?
'ನಾ ನಿನ್ನ ಬಿಡಲಾರೆ' ಸೀರಿಯಲ್‌ನಲ್ಲಿ ಅಡೆತಡೆಗಳ ನಡುವೆಯೂ ಶರತ್ ಮತ್ತು ದುರ್ಗಾ ಮದುವೆ ನಡೆದಿದೆ. ಆದರೆ, ಮೊದಲ ರಾತ್ರಿಯಂದು ಶರತ್, ದುರ್ಗಾಳಿಂದ ದೂರ ಉಳಿದಿದ್ದು, ಅದೇ சமயம் ದುರ್ಗಾಗೆ ಅಕ್ಕ ಅಂಬಿಕಾಳ ಆತ್ಮ ಕಾಣಿಸಿಕೊಂಡು ಕಥೆಗೆ ಹೊಸ ತಿರುವು ನೀಡಿದೆ.

ಶರತ್-ದುರ್ಗಾ ಮದುವೆ
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್‌ನಲ್ಲಿ ಸದ್ಯ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಳವಿಕಾ ಶತಾಯುಗತಾಯು ಪ್ರಯತ್ನ ಮಾಡಿದ್ರೂ ಶರತ್ ಮತ್ತು ದುರ್ಗಾ ಮದುವೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ದುರ್ಗಾಳನ್ನು ಕೂಡಿ ಹಾಕಲಾಗಿತ್ತು. ಬ್ರಹ್ಮಗಂಟು ಚಿರು ಹೋಗಿ ಬಿಡಿಸಿಕೊಂಡು ಬಂದಿದ್ದ. ದೈವಿ ಕೃಪೆಯಿಂದ ಇಬ್ಬರ ಮದುವೆ ನೆರವೇರಿದೆ.
ಹಿತಾಳ ಒಪ್ಪಿಗೆ
ದುರ್ಗಾಳನ್ನು ಅಮ್ಮ ಎಂದು ಒಪ್ಪಿಕೊಳ್ಳಲು ಹಿತಾ ತಯಾರು ಇರಲಿಲ್ಲ. ಆದರೆ ದೀಪಾಳ ಮಾತು ಆಕೆಯ ಮನಸ್ಸನ್ನು ತಿರುಗಿಸಿದೆ. ತನ್ನ ಪಾಲಿಗೆ ದುರ್ಗಾನೇ ಅಮ್ಮನ ಸ್ಥಾನದಲ್ಲಿ ಇರುವುದು ಆಕೆಗೆ ತಿಳಿದು ಮದುವೆಗೂ ಒಪ್ಪಿಕೊಂಡದ್ದು ಆಗಿದೆ.
ಕಾಣಿಸಿಕೊಂಡ ಅಂಬಿಕಾ
ಮರು ಮಾಂಗಲ್ಯಧಾರಣೆ ಆಗುತ್ತಿದ್ದಂತೆಯೇ ದುರ್ಗಾಗೆ ಅಕ್ಕ ಅಂಬಿಕಾ ಕೂಡ ಕಾಣಿಸಿಕೊಳ್ಳಲು ಶುರು ಮಾಡಿದ್ದಾಳೆ. ದೆವ್ವ ದೆವ್ವ ಎಂದು ಹೆದರುತ್ತಿದ್ದ ದುರ್ಗಾ, ಅಂಬಿಕಾಳನ್ನು ಈಗ ನೋಡಿ ಕಣ್ಣೀರು ಸುರಿಸಿದ್ದಾಳೆ.
ಫಸ್ಟ್ ನೈಟ್ ಅರೇಂಜ್
ಇದರ ನಡುವೆ ಮನೆಯವರು ಸೇರಿ ಫಸ್ಟ್ ನೈಟ್ ಅರೇಂಜ್ ಮಾಡಿದ್ದಾರೆ. ದುರ್ಗಾ ಮತ್ತು ಶರತ್ ಬೇಡ ಬೇಡ ಎಂದರೂ ಕೇಳಲಿಲ್ಲ. ಆದರೆ ಇವರಿಬ್ಬರೂ ಕೇಳಬೇಕಲ್ಲ?
ಶಾಕ್ ತಗುಲಿತು ಶರತ್ಗೆ
ನೀರು ಕುಡಿಯಲು ಶರತ್ ಹತ್ತಿರ ಹೋದಾಗ ಶಾಕ್ ತಗಲಿದವನಂತೆ ಶರತ್ ದೂರ ಹೋಗಿದ್ದಾನೆ. ನಾನು ನೀರು ಕುಡಿಯಲು ಬಂದಿದ್ದು ಎಂದು ಹೇಳಿದಾಗ, ಅವಳೆಲ್ಲಿ ಹತ್ತಿರ ಬಂದು ಬಿಡುತ್ತಾಳೋ ಎಂದು ತಾನೇ ಎದ್ದು ಹೋಗಿ ನೀರನ್ನು ತಂದುಕೊಟ್ಟಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

