- Home
- Entertainment
- TV Talk
- ಸಿಂಗಾಪುರದಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಜೊತೆ ಸಮಯ ಕಳೆದ Naa Ninna Bidalaare ಹಿತಾ; Photos
ಸಿಂಗಾಪುರದಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಜೊತೆ ಸಮಯ ಕಳೆದ Naa Ninna Bidalaare ಹಿತಾ; Photos
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಹಿತಾ ಪಾತ್ರ ಮಾಡುತ್ತಿರುವ ಪುಟಾಣಿ ಈಗ ಸೀರಿಯಲ್‌ನಿಂದ ಬ್ರೇಕ್ ಪಡೆದು, ಸಿಂಗಾಪುರಕ್ಕೆ ಹೋಗಿದ್ದಾರೆ. ಅಲ್ಲಿ madame tussaudsಗೆ ಭೇಟಿ ನೀಡಿದ್ದು, ಭಾರತೀಯ ಚಿತ್ರರಂಗ, ಕ್ರೀಡಾ ರಂಗದ ದಿಗ್ಗಜರ ಮೇಣದ ಪ್ರತಿಮೆಗಳ ಜೊತೆ ಸೆಲ್ಫಿ ತಗೊಂಡಿದ್ದಾರೆ. ಈ ಸುಂದರ ಫೋಟೋಗಳಿವು

ಬಹುಮುಖ ಪ್ರತಿಭೆ
ಈಗಾಗಲೇ ರಿಯಾಲಿಟಿ ಶೋ, ಸೀರಿಯಲ್, ಗಾಯನ ಎಂದು ಖ್ಯಾತಿ ಪಡೆದಿರೋ ಮಹಿತಾ ಅವರು ಬಹುಮುಖ ಪ್ರತಿಭೆ.
ರಣಬೀರ್ ಕಪೂರ್
ಮಹಿತಾ ಅವರು ನಟ ರಣಬೀರ್ ಕಪೂರ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿರುವ ರಣಬೀರ್ ಕಪೂರ್, ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಮಹೇಶ್ ಬಾಬು
ಮಹೇಶ್ ಬಾಬು ಅವರು ದಕ್ಷಿಣ ಭಾರತದಲ್ಲಿ ದೊಡ್ಡ ಸೂಪರ್ ಸ್ಟಾರ್. ಈಗ ಅವರು ರಾಜಮೌಳಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. 50 ವರ್ಷದಲ್ಲಿಯೂ ಅವರು ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಶಾರುಖ್ ಖಾನ್
ಬಾಲಿವುಡ್‌ನ ಕಿಂಗ್ ಖಾನ್ ಈ ವಯಸ್ಸಿನಲ್ಲಿಯೂ ಸಿಕ್ಸ್ ಪ್ಯಾಕ್ ಮೆಂಟೇನ್ ಮಾಡುತ್ತಿದ್ದಾರೆ. King ಸಿನಿಮಾದಲ್ಲಿಯೂ ಅವರು ನಟಿಸುತ್ತಿದ್ದಾರೆ. ಈಗ ಅವರ ಮಗ ನಿರ್ದೇಶನಕ್ಕಿಳಿದಿದ್ದಾರೆ.
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ ಅವರು ಈಗ ನಟನೆಯಿಂದ ದೂರ ಇದ್ದಾರೆ, ಅಪರೂಪಕ್ಕೆ ಅವರು ಸಿನಿಮಾ ನಿರ್ಮಾಣಗಳನ್ನು ಮಾಡುತ್ತಾರೆ.
ಕಾಜೋಲ್
ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಾಜೋಲ್ ಅವರು ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಂಟೆಂಟ್ ಆಧಾರಿತ ಸಿನಿಮಾಗಳತ್ತ ಅವರು ಮುಖ ಮಾಡಿದ್ದಾರೆ.
ರಾಮ್ ಚರಣ್ ತೇಜ
ಸೂಪರ್ ಹಿಟ್ ಸಿನಿಮಾ ನೀಡಿರುವ ರಾಮ್ ಚರಣ್ ತೇಜ ಅವರು Paddy ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರೀಗ ಕ್ಲಿಂಕಾರಾ ಎಂಬ ಮುದ್ದಾದ ಮಗಳ ತಂದೆಯೂ ಹೌದು.
ಮೈಕಲ್ ಜಾಕ್ಸನ್
ಡ್ಯಾನ್ಸ್ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಮೈಕಲ್ ಜಾಕ್ಸನ್ ಇಂದಿಗೂ ಕೂಡ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ.
ವಿರಾಟ್ ಕೊಹ್ಲಿ
ಕ್ರಿಕೆಟ್ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ವಿರಾಟ್ ಕೊಹ್ಲಿ ಅವರು ರಿಲೇಶನ್‌ಶಿಪ್ ವಿಚಾರದಲ್ಲಿಯೂ ಕೂಡ ಅನೇಕರಿಗೆ ಮಾದರಿ.
ಪ್ರಿಯಾಂಕಾ ಚೋಪ್ರಾ
ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ ಜೋನಾಸ್ ಅವರನ್ನು ಮದುವೆಯಾಗಿರೋ ಪ್ರಿಯಾಂಕಾ ಈಗ ಮಾಲ್ತಿ ಮೇರಿ ತಾಯಿ ಕೂಡ ಹೌದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

