- Home
- Entertainment
- TV Talk
- ಪ್ರಿಯತಮನ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸೌಮ್ಯಾ; ಹುಡುಗ ಕೂಡ ನಟ!
ಪ್ರಿಯತಮನ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸೌಮ್ಯಾ; ಹುಡುಗ ಕೂಡ ನಟ!
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಮಗಳು ವಸು ಪಾತ್ರದಲ್ಲಿ ನಟಿಸುತ್ತಿರುವ ಸೌಮ್ಯಾ ಮೆಂಡನ್ ಅವರು ನಿಶ್ಚಿತಾರ್ಥಕ್ಕೆ ಕಾಲಿಟ್ಟಿದ್ದಾರೆ.

ವಸು ಪಾತ್ರಧಾರಿ ಸೌಮ್ಯಾ ಮೆಂಡನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸೌಮ್ಯಾ ಮೆಂಡನ್ ಅವರು ಈ ಹಿಂದೆ ಗೀತಾ, ಕಾವೇರಿ ಕನ್ನಡ ಮೀಡಿಯಂ, ಪಾರು ಸೇರಿದಂತೆ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದರು.
ಪಾರು ಧಾರಾವಾಹಿ ನಟಿ ಸಿತಾರಾ ಕೂಡ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನವಜೋಡಿಗೆ ಶುಭ ಹಾರೈಸಿದ್ದಾರೆ.
ಕನ್ನಡ ಧಾರಾವಾಹಿ, ಸಿನಿಮಾ, ತುಳು ರಂಗದಲ್ಲಿಯೂ ಸಕ್ರಿಯವಾಗಿರುವ ಸೌಮ್ಯಾ ಮೆಂಡನ್ ಅವರು ಸುವೇದ್ ದಾಸ್ ಜೊತೆ ಎಂಗೇಜ್ ಆಗಿದ್ದಾರೆ.
ಸೌಮ್ಯಾ ಮೆಂಡನ್ ಅವರು ಮದುವೆ ಆಗಲಿರುವ ಸುವೇದ್ ದಾಸ್ ಅವರು ಕೂಡ ನಟ. ಈ ಹಿಂದೆ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸಿದ್ದರು.
ಸುವೇದ್ ದಾಸ್ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಜೋಡಿ ಎರಡು ವರ್ಷಗಳ ಹಿಂದೆಯೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

