MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Tejaswini Achar Weds Virat: ಸೀರಿಯಲ್​ನಲ್ಲಿ ಲವ್​- ರಿಯಲ್ಲಾಗಿ ಸಪ್ತಪದಿ ತುಳಿದ ತಾರಾ ಜೋಡಿ; ಸುಂದರ ಫೋಟೋಗಳು

Tejaswini Achar Weds Virat: ಸೀರಿಯಲ್​ನಲ್ಲಿ ಲವ್​- ರಿಯಲ್ಲಾಗಿ ಸಪ್ತಪದಿ ತುಳಿದ ತಾರಾ ಜೋಡಿ; ಸುಂದರ ಫೋಟೋಗಳು

ಕನ್ನಡ ಕಿರುತೆರೆ ನಟಿ ತೇಜಸ್ವಿನಿ ಆಚಾರ್ ಅವರು ಸಹನಟ ವಿರಾಟ್ ವತ್ಸಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 'ಸಂಘರ್ಷ' ಧಾರಾವಾಹಿಯ ಸೆಟ್‌ನಲ್ಲಿ ಪ್ರೀತಿಸಿ, ಇದೀಗ ದಾವಣಗೆರೆಯಲ್ಲಿ ವಿವಾಹವಾಗಿದ್ದಾರೆ. ಈ ಜೋಡಿ 'ರಾಧಿಕಾ' ಧಾರಾವಾಹಿಯಲ್ಲಿಯೂ ಒಟ್ಟಿಗೆ ನಟಿಸಿದ್ದರು.

1 Min read
Author : Suchethana D
Published : Feb 11 2026, 04:19 PM IST
Share this Photo Gallery
  • FB
  • TW
  • Linkdin
  • Whatsapp
16
ತೇಜಸ್ವಿನಿ ಆಚಾರ್​ ಮದುವೆ
Image Credit : Instagram

ತೇಜಸ್ವಿನಿ ಆಚಾರ್​ ಮದುವೆ

ಕನ್ನಡ ಕಿರುತೆರೆ ನಟಿ, ಮೈಸೂರಿನ ಬೆಡಗಿ ನಟಿ ತೇಜಸ್ವಿನಿ ಆಚಾರ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೀರಿಯಲ್​ ನಟ ವಿರಾಟ್ ವತ್ಸಲ್ ಜೊತೆ ನಿನ್ನೆ ಅಂದರೆ ಫೆಬ್ರುವರಿ 10ರಂದು ನಟಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

26
ಸಂಘರ್ಷದಿಂದ ಪ್ರೀತಿ
Image Credit : Instagram

ಸಂಘರ್ಷದಿಂದ ಪ್ರೀತಿ

ಸ್ಟಾರ್ ಸುವರ್ಣ ವಾಹಿನಿಯ ‘ಸಂಘರ್ಷ’ ಧಾರಾವಾಹಿಯಲ್ಲಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್‌ ವತ್ಸಲ್ ಜೊತೆಯಾಗಿ ನಟಿಸಿದ್ದರು. ಈ ಸೀರಿಯಲ್ ಶೂಟ್ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಈಗ ಈ ಜೋಡಿ ಸಪ್ತಪದಿ ತುಳಿದಿದೆ.

Related Articles

Related image1
ಲೈವ್​ಗೆ ಬಂದು ಫ್ಯಾನ್ಸ್​ಗೆ ಗುಡ್​​​ನ್ಯೂಸ್​ ಕೊಟ್ಟ Bigg Boss ರಿಷಾ ಗೌಡ: ಅಭಿಮಾನಿಗಳು ಫುಲ್​ ಖುಷ್​
Related image2
ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ Sonu Nigam​: ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ
36
ರಾಧಿಕಾದಲ್ಲಿಯೂ ಜೋಡಿಯ ನಟನೆ
Image Credit : Instagram

ರಾಧಿಕಾದಲ್ಲಿಯೂ ಜೋಡಿಯ ನಟನೆ

ಸಂಘರ್ಷದ ಬಳಿಕ, ‘ರಾಧಿಕಾ’ ಧಾರಾವಾಹಿಯಲ್ಲಿ ಜೋಡಿಯಾಗಿ ಮತ್ತೆ ನಟಿಸಿದರು. ಈ ಧಾರಾವಾಹಿ ಇಬ್ಬರ ನಡುವಿನ ಪ್ರೀತಿ, ಸ್ನೇಹ, ಬಾಂಧವ್ಯವನ್ನ ಮತ್ತಷ್ಟು ಗಟ್ಟಿಮಾಡಿತ್ತು. ಸೀರಿಯಲ್‌ ಜೊತೆ ಜೊತೆಗೆ ರಿಯಲ್‌ ಬದಕಿನಲ್ಲೂ ಜೊತೆಯಾದರು.

46
ಹೆಸರು ಬದಲಾವಣೆ
Image Credit : Asianet News

ಹೆಸರು ಬದಲಾವಣೆ

ಶ್ರುತಿ ನಾಯ್ಡು ಅವರು ನಿರ್ಮಿಸಿದ 'ಮಹಾನದಿ' ಧಾರಾವಾಹಿ ಮೂಲಕ ನಟಿ ತೇಜಸ್ವಿನಿ ಜನಪ್ರಿಯತೆ ಪಡೆದರು. ಅಲ್ಲಿಂದ ಅವರು ತಮ್ಮ ಹೆಸರನ್ನು ತೇಜಸ್ವಿನಿ ಶೇಖರ್​ರಿಂದ ತೇಜಸ್ವಿನಿ ಆಚಾರ್ ಎಂದು ಬದಲಾಯಿಸಿಕೊಂಡರು.

56
ವಿವಿಧ ಭಾಷೆಗಳಲ್ಲಿ ನಟಿ ನಟನೆ
Image Credit : Instagram

ವಿವಿಧ ಭಾಷೆಗಳಲ್ಲಿ ನಟಿ ನಟನೆ

ಅಂದಹಾಗೆ ನಟಿ, ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಗಳ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರೆ, ವಿರಾಟ್‌ ಕೂಡ ಸಂಘರ್ಷ, ರಾಧಿಕಾ, ನನ್ನ ದೇವರು ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಟನೆ ಜೊತೆಗೆ ಡ್ಯಾನ್ಸ್‌ ಕೊರಿಯೋಗ್ರಫಿ ಮಾಡುತ್ತಾರೆ. ರಂಗಭೂಮಿ ಹಿನ್ನಲೆಯ ಕುಟುಂಬದಿಂದ ಬಂದ ವಿರಾಟ್ ಅವರು ಅಭಿನಯದ ಜೊತೆಗೆ ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

66
ಹಲವರು ಸಾಕ್ಷಿ
Image Credit : Instagram

ಹಲವರು ಸಾಕ್ಷಿ

ವಿರಾಟ್‌ ಅವರ ಊರಾದ ದಾವಣಗೆರೆಯಲ್ಲಿ ಮದುವೆ ನಡೆದಿದೆ. ಇವರ ಮದುವೆಗೆ ಕಿರುತೆರೆ ನಟರು ಸೇರಿದಂತೆ ಹಲವು ಬಂದು ಆಶೀರ್ವದಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ಟಿವಿ ಶೋ
ಮದುವೆ
ಸಂಬಂಧಗಳು
ಮನರಂಜನಾ ಸುದ್ದಿ

Latest Videos
Recommended Stories
Recommended image1
ರೀಲ್ಸ್, ಫೋಟೋ ಹಾಕೋದಕ್ಕೇ ಚಂದನ್ ಶೆಟ್ಟಿ ಡಿವೋರ್ಸ್ ಕೊಟ್ರಾ? ನಿವೇದಿತಾ ಗೌಡ ಹೇಳಿದ್ದೇನು ನೋಡಿ!
Recommended image2
ಅರ್ಧಕ್ಕೆ ಪ್ರಸಾರ ನಿಲ್ಲಿಸಿದ ಜನಪ್ರಿಯ ಸೀರಿಯಲ್... ಶೀಘ್ರದಲ್ಲಿ ಮುಚ್ಚುತ್ತಾ ಈ Kannada Channel?
Recommended image3
ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡೋದು ಹೇಗೆ? Karna Serial ಈ ದೃಶ್ಯಕ್ಕೆ ಭಾರಿ ಆಕ್ರೋಶ
Related Stories
Recommended image1
ಲೈವ್​ಗೆ ಬಂದು ಫ್ಯಾನ್ಸ್​ಗೆ ಗುಡ್​​​ನ್ಯೂಸ್​ ಕೊಟ್ಟ Bigg Boss ರಿಷಾ ಗೌಡ: ಅಭಿಮಾನಿಗಳು ಫುಲ್​ ಖುಷ್​
Recommended image2
ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ Sonu Nigam​: ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved