- Home
- Entertainment
- TV Talk
- Mirai Movie OTT Release: ಭರ್ಜರಿ ಆಕ್ಷನ್, ದೈವತ್ವದ ನಡುವಿನ ಘರ್ಷಣೆಯ ಸಿನಿಮಾ ಒಟಿಟಿಗೆ ಬಂತು!
Mirai Movie OTT Release: ಭರ್ಜರಿ ಆಕ್ಷನ್, ದೈವತ್ವದ ನಡುವಿನ ಘರ್ಷಣೆಯ ಸಿನಿಮಾ ಒಟಿಟಿಗೆ ಬಂತು!
ಫ್ಯಾಂಟಸಿ ಆಕ್ಷನ್ ಜಾನರ್‌ನ ಮಿರಾಯ್ ಸಿನಿಮಾವು ಜಿಯೋಹಾಟ್‌ಸ್ಟಾರ್‌ನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಸ್ಟ್ರೀಮ್ ಆಗಲಿದೆ. ಈ ಸಿನಿಮಾದಲ್ಲಿ ಏನು ವಿಶೇಷತೆಗಳು ಇವೆ? ಯಾರಿದ್ದಾರೆ? ಈ ಸಿನಿಮಾದ ಕಥೆ ಏನು? ಮುಂತಾದ ವಿಚಾರಗಳು ಇಲ್ಲಿವೆ.

ಯೋಧನ ಕಥೆ ಈ ಸಿನಿಮಾದಲ್ಲಿದೆ
ವಿಧಿ ಮತ್ತು ದೈವತ್ವ ನಡುವಿನ ಘರ್ಷಣೆ ಇರುವ ಜಗತ್ತಿನಲ್ಲಿ, ಮಿರಾಯ್ ಸಿನಿಮಾವು ಮಾನವೀಯತೆಗೆ ಸಮತೋಲನ, ಭರವಸೆಯನ್ನು ಪುನಃಸ್ಥಾಪಿಸಲು ಎಲ್ಲ ಪ್ರತಿಕೂಲಗಳ ವಿರುದ್ಧ ಹೋರಾಡುವ ಯೋಧನ ಕಥೆ ಈ ಸಿನಿಮಾದಲ್ಲಿದೆ.
ಮಿರಾಯ್ ಸಿನಿಮಾದಲ್ಲಿ ಏನಿದೆ?
ಬೆರಗುಗೊಳಿಸುವ ದೃಶ್ಯಗಳು, ಸಿಕ್ಕಾಪಟ್ಟೆ ಫೈಟ್, ನಿಜಕ್ಕೂ ವೀಕ್ಷಕರನ್ನು ತಲ್ಲೀನಗೊಳಿಸುವ ನಿರೂಪಣೆ ಮಿರಾಯ್ ಸಿನಿಮಾದಲ್ಲಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ಈ ವರ್ಷದ ಅತಿದೊಡ್ಡ ಪ್ಯಾನ್-ಸೌತ್ ಡಿಜಿಟಲ್ ಬಿಡುಗಡೆಗಳಲ್ಲಿ ಒಂದಾಗಿದೆ.
ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ
ವೈಭವದ ದೃಶ್ಯಗಳು, ತೀವ್ರವಾದ ಕಥೆ ಹೇಳುವಿಕೆ ಈ ಸಿನಿಮಾದಲ್ಲಿದೆ. ಹೀಗಾಗಿ ಇದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಒಟ್ಟಿನಲ್ಲಿ ಈ ಸಿನಿಮಾವನ್ನು ನೋಡಲು ವೀಕ್ಷಕರು ಕೂಡ ಕುತೂಹಲದಿಂದ ಇದ್ದಾರೆ.
U/A ಪ್ರಮಾಣಪತ್ರ
ಈ ಸಿನಿಮಾಕ್ಕೆ CBFC ದಿಂದ U/A ಪ್ರಮಾಣಪತ್ರ ಸಿಕ್ಕಿದೆ. “ಮಕ್ಕಳು, ಫ್ಯಾಮಿಲಿ ಮತ್ತು ಎಲ್ಲ ವಯೋಮಾನದವರು ಈ ಸಿನಿಮಾವನ್ನು ನೋಡಬಹುದು” ಎಂದು ತೇಜ್ ಸಜ್ಜಾ ಹೇಳಿದ್ದರು.
ಸಿನಿಮಾ ರಿಲೀಸ್ ಆಗೋದು ಯಾವಾಗ?
2025ರ ಸೆಪ್ಟೆಂಬರ್ 12 ರಂದು ಈ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ಕಾರ್ತಿಕ್ ಗಟ್ಟಮನೇನಿ ಅವರು ನಿರ್ದೇಶನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

