- Home
- Entertainment
- TV Talk
- ತೆಲುಗು ಸ್ಟಾರ್ ಆಂಕರ್ ಉದಯಭಾನು ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯಲು ಕಾರಣವೇನು? ಕೊನೆಗೂ ಸತ್ಯ ಹೊರಬಿತ್ತು!
ತೆಲುಗು ಸ್ಟಾರ್ ಆಂಕರ್ ಉದಯಭಾನು ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯಲು ಕಾರಣವೇನು? ಕೊನೆಗೂ ಸತ್ಯ ಹೊರಬಿತ್ತು!
ಸ್ಟಾರ್ ಆಂಕರ್ ಉದಯಭಾನು ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯಲು ಕಾರಣವೇನು? ಅವರ ಕರಿಯರ್‌ಗೆ ಬ್ರೇಕ್ ಹಾಕಿದವರು ಯಾರು? ಈ ಬಗ್ಗೆ ಉದಯಭಾನು ಅವರೇ ಬಹಿರಂಗಪಡಿಸಿದ ಆ ಸ್ಫೋಟಕ ಸತ್ಯಗಳೇನು?

ಈಗ ಕಿರುತೆರೆಯಲ್ಲಿ ಸುಮ ಸ್ಟಾರ್ ಆಂಕರ್ ಆಗಿ ಮಿಂಚುತ್ತಿದ್ದಾರೆ. ಆದರೆ, ಸುಮಾಗಿಂತ ಮುಂಚೆಯೇ ಆ ಸ್ಥಾನದಲ್ಲಿದ್ದವರು ಉದಯಭಾನು. ಅವರ ಕಾರ್ಯಕ್ರಮಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ತೆರೆಮರೆಗೆ ಸರಿದರು. ಇದಕ್ಕೆ ಕಾರಣ ಯಾರು? ಇಂಡಸ್ಟ್ರಿಯಲ್ಲಿ ಅವರನ್ನು ತುಳಿಯಲಾಯಿತೇ? ಈ ಬಗ್ಗೆ ಉದಯಭಾನು ಅವರೇ ಮಾತನಾಡಿದ್ದಾರೆ.
ಒಂದು ಕಾಲದಲ್ಲಿ ಟಿವಿಯಲ್ಲಿ ಆಂಕರ್ ಎಂದರೆ ಉದಯಭಾನು ಮಾತ್ರ ಕಾಣಿಸುತ್ತಿದ್ದರು. ವೇಣುಮಾಧವ್ ಜೊತೆ ಅವರು ನಡೆಸಿಕೊಡುತ್ತಿದ್ದ 'ವನ್ಸ್ ಮೋರ್ ಪ್ಲೀಸ್' ಶೋ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು. 'ರೇಲಾ ರೆ ರೇಲಾ', 'ಢೀ', 'ಸಾಹಸಂ ಚೇಯರಾ ಡಿಂಭಕಾ' ದಂತಹ ಹಲವು ಹಿಟ್ ಶೋಗಳನ್ನು ಅವರು ನೀಡಿದ್ದಾರೆ. ಕೆಲವು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕರಿಯರ್‌ನ ಪೀಕ್‌ನಲ್ಲಿದ್ದಾಗಲೇ ಉದಯಭಾನು ಇದ್ದಕ್ಕಿದ್ದಂತೆ ಕಾಣೆಯಾದರು. ಅವರು ಎಲ್ಲಿಗೆ ಹೋದರು ಎಂದು ಅಭಿಮಾನಿಗಳು ಹುಡುಕಿದರೂ ಸಿಗಲಿಲ್ಲ. ನಂತರ ಸುಮ, ಪ್ರದೀಪ್, ಅನಸೂಯ, ಶ್ರೀಮುಖಿ, ರಶ್ಮಿ, ರವಿ, ಲಾಸ್ಯರಂತಹ ಅನೇಕ ಆಂಕರ್‌ಗಳು ಕಿರುತೆರೆಯನ್ನು ಆಳಲು ಆರಂಭಿಸಿದರು. ಆದರೆ ಉದಯಭಾನು ಮಾತ್ರ ಎಲ್ಲೂ ಕಾಣಿಸಲಿಲ್ಲ.
ಇತ್ತೀಚೆಗೆ ಉದಯಭಾನು ಮತ್ತೆ ಸಕ್ರಿಯರಾಗಿದ್ದಾರೆ. ಟಿವಿ ಶೋ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಅನುಪಸ್ಥಿತಿಯ ಬಗ್ಗೆ ಅವರು, 'ಪ್ರಶ್ನಿಸುವ ಧ್ವನಿಗಳನ್ನು ಯಾವಾಗಲೂ ಹತ್ತಿಕ್ಕಲಾಗುತ್ತದೆ ಅನ್ನೋದಕ್ಕೆ ನಾನೇ ಉದಾಹರಣೆ. ನಾನು ನೇರವಾಗಿ ಮಾತನಾಡುತ್ತೇನೆ, ಅದಕ್ಕಾಗಿಯೇ ನನ್ನನ್ನು ಇಂಡಸ್ಟ್ರಿಯಲ್ಲಿ ತುಳಿದರು. ಆದರೆ, ಎಷ್ಟು ತುಳಿದರೂ ಅಷ್ಟು ಸ್ಪೀಡ್ ಆಗಿ ಮೇಲೆ ಬರುತ್ತೇನೆ' ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಇತ್ತೀಚೆಗೆ 'ತ್ರಿಬಾಣಧಾರಿ ಬಾರ್ಬರಿಕ್' ಸಿನಿಮಾ ಮೂಲಕ ಉದಯಭಾನು ಬೆಳ್ಳಿತೆರೆಗೆ ರೀ-ಎಂಟ್ರಿ ನೀಡಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ, 'ಇಂಡಸ್ಟ್ರಿಯಲ್ಲಿ ಆಂಕರ್‌ಗಳನ್ನು ತುಳಿಯಲಾಗುತ್ತಿದೆ ಎಂದು ನೀವು ಹೇಳಿದ್ದು ನಿಜವೇ?' ಎಂದು ಪತ್ರಕರ್ತರೊಬ್ಬರು ಕೇಳಿದರು. ಅದಕ್ಕೆ ಉತ್ತರಿಸಿದ ಉದಯಭಾನು, 'ಅದು ಖಂಡಿತಾ ನಿಜ. ನಾನು ಸತ್ಯವನ್ನೇ ಮಾತನಾಡುತ್ತೇನೆ. ಈ ವಿಷಯ ಪ್ರತಿಯೊಬ್ಬ ಆಂಕರ್‌ಗೂ ಗೊತ್ತು. ಆದರೆ ಈಗ ಅದರ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ' ಎಂದು ಹೇಳಿದರು.
ಈ ದಿನಗಳಲ್ಲಿ ಆಂಕರ್‌ಗಳು ಹೀರೋಯಿನ್‌ಗಳಿಗಿಂತ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಸದ್ಯ ಕಿರುತೆರೆಯಲ್ಲಿ ಸುಮ ಕನಕಾಲ, ಅನಸೂಯ, ರಶ್ಮಿ, ಶ್ರೀಮುಖಿ, ಸ್ರವಂತಿ, ಪ್ರದೀಪ್, ರವಿ, ಸುಡಿಗಾಲಿ ಸುಧೀರ್‌ರಂತಹ ಹಲವು ಆಂಕರ್‌ಗಳು ಜನಪ್ರಿಯರಾಗಿದ್ದಾರೆ. ಆದರೆ ಇವರೆಲ್ಲರಿಗಿಂತ ಹೆಚ್ಚು ಹೆಸರು ಮಾಡಿದ್ದ ಉದಯಭಾನು ಮಾತ್ರ ಕರಿಯರ್‌ನಲ್ಲಿ ಹಿಂದೆ ಉಳಿದರು.
ವೈಯಕ್ತಿಕ ಜೀವನದ ವಿವಾದಗಳು ಮತ್ತು ವೃತ್ತಿ ಜೀವನದ ಪೈಪೋಟಿಯಿಂದಾಗಿ ಉದಯಭಾನು ಅವರ ಕರಿಯರ್‌ಗೆ ಹಿನ್ನಡೆಯಾಯಿತು. ಸದ್ಯ ಅವರು ಯೂಟ್ಯೂಬ್ ಚಾನೆಲ್ ತೆರೆದು, ಅದರಲ್ಲಿ ತಮ್ಮ ಕುಟುಂಬ, ಮಕ್ಕಳು ಮತ್ತು ಅಡುಗೆಗೆ ಸಂಬಂಧಿಸಿದ ವ್ಲಾಗ್‌ಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ. ಈಗ ನಿಧಾನವಾಗಿ ಮತ್ತೆ ಇಂಡಸ್ಟ್ರಿಯಲ್ಲಿ ಸಕ್ರಿಯರಾಗುತ್ತಿದ್ದಾರೆ.
ಸದ್ಯ ತೆಲುಗುರಂಗದ ಕಿರುತೆರೆಯಲ್ಲಿ ಈ ಸಂಗತಿ ಸಾಕಷ್ಟು ಸೌಂಡ್ ಮಾಡತೊಡಗಿದೆ. ಚರ್ಚೆಮ ವಾದ-ವಿವಾದಗಳಿಗೆ ಕಾರಣವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

