- Home
- Entertainment
- TV Talk
- ಬಿಗ್ ಬಾಸ್ ಮನೆಗಿಂತ ಹೆಚ್ಚು ಸದ್ದು ಮಾಡ್ತಿದೆ ಸೀಕ್ರೆಟ್ ರೂಮ್, ವೀಕ್ಷಕರಿಗೆ ಇಷ್ಟವಾಗ್ತಿದೆ ರಕ್ಷಿತಾ – ಧ್ರುವಂತ್ ಕ್ಯೂಟ್ ಜಗಳ
ಬಿಗ್ ಬಾಸ್ ಮನೆಗಿಂತ ಹೆಚ್ಚು ಸದ್ದು ಮಾಡ್ತಿದೆ ಸೀಕ್ರೆಟ್ ರೂಮ್, ವೀಕ್ಷಕರಿಗೆ ಇಷ್ಟವಾಗ್ತಿದೆ ರಕ್ಷಿತಾ – ಧ್ರುವಂತ್ ಕ್ಯೂಟ್ ಜಗಳ
ಸೀಕ್ರೆಟ್ ರೂಮಿನಲ್ಲಿರುವ ಧ್ರುವಂತ್ ಹಾಗೂ ರಕ್ಷಿತಾ ಕಿತ್ತಾಟ ಅಭಿಮಾನಿಗಳಿಗೆ ಇಷ್ಟವಾಗ್ತಿದೆ. ಅವರಿಬ್ಬರ ಕ್ಯೂಟ್ ಗಲಾಟೆ ನೋಡಿ ವೀಕ್ಷಕರು ಎಂಜಾಯ್ ಮಾಡ್ತಿದ್ದಾರೆ. ಇರಿಟೇಟ್ ಇರಿಟೇಟ್ ಎನ್ನುತ್ತಲೇ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡ್ತಿದ್ದಾರೆ.

ಸೀಕ್ರೆಟ್ ರೂಮಿನಲ್ಲಿ ರಕ್ಷಿತಾ – ಧ್ರುವಂತ್
ಬಿಗ್ ಬಾಸ್ ಮನೆ ಈಗಾಗಲೇ ಸಿಕ್ರೇಟ್ ರೂಮ್ ನಲ್ಲಿರುವ ರಕ್ಷಿತಾ ಹಾಗೂ ಧ್ರವಂತ್ ಕೈನಲ್ಲಿದೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಯಾರು ಜೊತೆಯಾಗಿ ಆಡ್ಬೇಕು, ಯಾರು ಜೊತೆಯಾಗಿ ಆಡ್ಬಾರದು ಎನ್ನುವ ನಿರ್ಧಾರವನ್ನು ಧ್ರುವಂತ್ ಹಾಗೂ ರಕ್ಷಿತಾ ತೆಗೆದುಕೊಳ್ತಿದ್ದಾರೆ. ಇಂದು, ಇಡೀ ಮನೆ ಗಲೀಜು ಮಾಡಿ, ಸ್ಪರ್ಧಿಗಳ ರಿಯಾಕ್ಷನ್ ನೋಡಿ ರಕ್ಷಿತಾ ಹಾಗೂ ಧ್ರುವಂತ್ ಎಂಜಾಯ್ ಮಾಡ್ತಿದ್ದಾರೆ.
ಮನೆಗಿಂತ ಸೀಕ್ರೆಟ್ ರೂಮಿನಲ್ಲೇ ಗಲಾಟೆ ಹೆಚ್ಚು
ಬಿಗ್ ಬಾಸ್ ಮನೆ ಟಾಸ್ಕ್ ಬಿಟ್ಟು ಉಳಿದ ಟೈಂನಲ್ಲಿ ತಣ್ಣಗಾದಂತಿದೆ. ಆದ್ರೆ ಸೀಕ್ರೆಟ್ ರೂಮ್ ಮಾತ್ರ ಹೊತ್ತಿ ಉರಿಯುತ್ತಿದೆ. ಟಾಸ್ಕ್ ಇರ್ಲಿ, ಇಲ್ದೆ ಇರ್ಲಿ ರಕ್ಷಿತಾ ಹಾಗೂ ಧ್ರುವಂತ್ ಕಚ್ಚಾಟ ಮುಂದುವರೆದಿದೆ.
ಹಾವು – ಮುಂಗುಸಿ
ಹಿಂದಿನವಾರ ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಗಿತ್ತು. ಆದ್ರೆ ಇಬ್ಬರನ್ನೂ ಮನೆಗೆ ಕಳುಹಿಸಿರುವ ಬದಲು ಸೀಕ್ರೆಟ್ ರೂಮಿನಲ್ಲಿ ಇಡಲಾಗಿತ್ತು. ಧ್ರುವಂತ್ ನೋಡ್ತಿದ್ದಂತೆ ರಕ್ಷಿತಾ ಶಾಕ್ ಆಗಿದ್ದರು. ಧ್ರುವಂತ್ ಜೊತೆ ಇರ್ಬೇಕಾ, ತಲೆನೋವು ಗ್ಯಾರಂಟಿ ಅಂತ ಹೇಳಿದ್ದರು. ತಲೆನೋವು ಹೆಚ್ಚಾಗ್ಲಿ ಅಂತಾನೇ ನನ್ನ ಜೊತೆ ನಿಮ್ಮನ್ನು ಸೀಕ್ರೆಟ್ ರೂಮಿಗೆ ಹಾಕಿದ್ದು ಅಂತ ಧ್ರುವಂತ್ ಹೇಳಿದ್ದರು.
ಪ್ರತಿ ವಿಷ್ಯಕ್ಕೂ ಗಲಾಟೆ
ಧ್ರುವಂತ್ ಹಾಗೂ ರಕ್ಷಿತಾ ನಡುವೆ ಹೊಂದಾಣಿಕೆ ಬಹಳ ಕಷ್ಟ. ಇಬ್ಬರೂ ಸಣ್ಣ ಸಣ್ಣ ವಿಷ್ಯಕ್ಕೆ ಕಿತ್ತಾಡಿಕೊಳ್ತಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಟೈಂನಲ್ಲಿ ಇವರಿಬ್ಬರ ಗಲಾಟೆ ತಾರಕಕ್ಕೇರಿರುತ್ತದೆ. ನೀನು ಹೇಳ್ಬೇಡ, ನಾನು ಹೇಳ್ತೇನೆ, ನಂದೇ ಫೈನಲ್ ಎನ್ನುವ ಗಲಾಟೆ ಕಾಮನ್ ಆಗಿದೆ.
ಬಿಗ್ ಬಾಸ್ ಗೆ ದೊಡ್ಡ ತಲೆನೋವು
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳನ್ನು ಸಂಭಾಳಿಸೋದಕ್ಕಿಂತ ಸೀಕ್ರೆಟ್ ರೂಮಿನಲ್ಲಿರುವ ಇಬ್ಬರನ್ನು ಸಂಭಾಳಿಸೋದು ಬಿಗ್ ಬಾಸ್ ಗೆ ಕಷ್ಟವಾದಂತಿದೆ. ಆಗಾಗ ಜಗಳದ ಮಧ್ಯೆ ಪ್ರವೇಶ ಮಾಡುವ ಬಿಗ್ ಬಾಸ್, ಒಮ್ಮತದ ನಿರ್ಧಾರಕ್ಕೆ ಬನ್ನಿ ಅಂತ ಸೂಚನೆ ನೀಡ್ತಿರುತ್ತಾರೆ.
ಇಬ್ಬರ ಮಧ್ಯೆ ಇದೇ ವಿಶೇಷ ಬಾಂಡಿಂಗ್
ಧ್ರುವಂತ್ ಹಾಗೂ ರಕ್ಷಿತಾ ಎಷ್ಟೇ ಕಿತ್ತಾಡಿಕೊಳ್ಳಲಿ, ಕೂಗಾಡಿಕೊಳ್ಳಲಿ ಇಬ್ಬರ ಮಧ್ಯೆ ವಿಶೇಷ ಬಾಂಡಿಂಗ್ ಇದೆ. ಬಿಗ್ ಬಾಸ್ ನಿಮ್ಮ ಅಂತಿಮ ನಿರ್ಧಾರ ಹೇಳಿ ಎನ್ನುತ್ತಿದ್ದಂತೆ ಇಬ್ಬರಲ್ಲಿ ಒಬ್ಬರು ಕಾಂಪ್ರೋ ಆಗಿ, ಒಂದೇ ನಿರ್ಧಾರಕ್ಕೆ ಬರ್ತಾರೆ. ಅವರಿಬ್ಬರು ತೆಗೆದುಕೊಳ್ತಿರುವ ನಿರ್ಧಾರ ಅಭಿಮಾನಿಗಳಿಗೂ ಇಷ್ಟವಾಗ್ತಿದೆ.
ರಕ್ಷಿತಾ – ಧ್ರುವಂತ್ ಜಗಳ ಎಂಜಾಯ್ ಮಾಡ್ತಿರುವ ವೀಕ್ಷಕರು
ಆರಂಭದಲ್ಲಿ ಇವರಿಬ್ಬರನ್ನು ಒಂದೇ ರೂಮಿನಲ್ಲಿ ಹೇಗಪ್ಪ ನೋಡೋದು ಅಂದ್ಕೊಂಡಿದ್ದ ವೀಕ್ಷಕರು ಈಗ ಇಬ್ಬರ ಕಿತ್ತಾಟಕ್ಕೆ ಅಡ್ಜೆಸ್ಟ್ ಆಗಿದ್ದಾರೆ. ಅವರಿಬ್ಬರ ಸ್ವಭಾವ ವೀಕ್ಷಕರಿಗೆ ಅರ್ಥ ಆದಂತಿದೆ. ಒಂದು ಕ್ಷಣ ಜೋರಾಗಿ ಕಿರುಚಾಡುವ ರಕ್ಷಿತಾ ಅರೆ ಕ್ಷಣಕ್ಕೆ ಧ್ರುವಂತ್ ಜೊತೆ ನಗ್ತಾ ಮಾತನಾಡ್ತಿರುತ್ತಾರೆ. ನನ್ನ ಭಾವನೆಗಳನ್ನು ಧ್ರುವಂತ್ ಬಳಿ ಹೇಳಿ ಕೊಳ್ತಾರೆ. ಅದೇ ರೀತಿ ಧ್ರುವಂತ್ ಕೂಡ ಅನೇಕ ಬಾರಿ ರಕ್ಷಿತಾ ನಿರ್ಧಾರಕ್ಕೆ ಓಕೆ ಎಂದಿದ್ದಾರೆ. ಅವರ ಕ್ಯೂಟ್ ಜಗಳ ವೀಕ್ಷಕರಿಗೆ ಇಷ್ಟವಾಗಿದೆ. ಬಿಗ್ ಬಾಸ್ ಮನೆ ಸ್ಪರ್ಧಿಗಳಿಗಿಂತ ಸೀಕ್ರೆಟ್ ರೂಮ್ ಸ್ಪರ್ಧಿಗಳಿಗಾಗಿ ನಾವು ಬಿಗ್ ಬಾಸ್ ನೋಡ್ತಿದ್ದೇವೆ ಎನ್ನುವ ಕಮೆಂಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದೆ.
ಅಣ್ಣ – ತಂಗಿಯಂತಿದ್ದರು
ಆರಂಭದಲ್ಲಿ ಧ್ರುವಂತ್ ಹಾಗೂ ರಕ್ಷಿತಾ ಬಾಂಡಿಂಗ್ ಉತ್ತಮವಾಗಿತ್ತು. ಅಣ್ಣ – ತಂಗಿಯಂತೆ ವರ್ತನೆ ಮಾಡ್ತಿದ್ದರು. ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೋಗ್ತಿದ್ದಂತೆ ಎಲ್ಲ ಬದಲಾಗಿತ್ತು. ಧ್ರುವಂತ್, ರಕ್ಷಿತಾ ವಿರುದ್ಧ ತಿರುಗಿ ಬಿದ್ದಿದ್ದರು. ಇಬ್ಬರ ಮಧ್ಯೆ ಒಂದಲ್ಲ ಒಂದು ವಿಷ್ಯಕ್ಕೆ ಗಲಾಟೆ ಸಾಮಾನ್ಯವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

