ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಿಂದ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಆಂಧ್ರ ಪ್ರದೇಶ ಗಡಿಯಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. 

ಬೆಂಗಳೂರು (ಆ.03) ಭಾರತದ ನಾಗರೀಕರ ವಿಮಾನ ಸೇವೆ ತೀವ್ರ ಸವಾಲುಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ವಿಮಾನದ ತಾಂತ್ರಿಕ ದೋಷ, ಹಾರಾಟದಲ್ಲಿನ ಸಮಸ್ಯೆ ಆತಂಕ ಸೃಷ್ಟಿಸುತ್ತಿದೆ. ಮುಖ್ಯವಾಗಿ ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಆತಂಕ ಪರಿಸ್ಥಿತಿ ಹೆಚ್ಚಾಗಿದೆ. ಇದೀಗ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಘಟನೆ ನಡೆದಿದೆ. ಬೆಂಗಳೂರು ಕೋಲ್ಕತಾ ಏರ್ ಇಂಡಿಯಾ ವಿಮಾನ ಆಂಧ್ರ ಪ್ರದೇಶ ಗಡಿಯಲ್ಲಿ ಸಾಗುತ್ತಿದ್ದಂತೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಘಟನೆ ನಡೆದಿದೆ. ಇದೀಗ ವಿಮಾನ ತುರ್ತು ಭೂಸ್ಪರ್ಶಗೊಂಡಿದೆ.

ಏರ್ ಕಂಟ್ರೋಲ್‌ಗೆ ಮಾಹಿತಿ ರವಾನೆ

ಕೋಲ್ಕತಾಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರು ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬೋರ್ಡಿಂಗ್ ಮಾಡಿತ್ತು. ತಕ್ಕ ಸಮಯದಲ್ಲಿ ವಿಮಾನ ಟೇಕ್ ಆಫ್ ಆಗಿತ್ತು. ಬೆಂಗಳೂರಿನಿಂದ ಟೇಕ್ ಆಫ್ ಆದ ವಿಮಾನ ಬೆಂಗಳೂರು ದಾಡಿ ಆಂಧ್ರ ಪ್ರದೇಶ ಗಡಿ ಪ್ರವೇಶಿಸುತ್ತಿದ್ದಂತೆ ತಾಂತ್ರಿಕ ದೋಷ ಎದುರಾಗಿದೆ. ತಕ್ಷಣವೇ ಪೈಲೆಟ್ ಹಾಗೂ ಕೋ ಪೈಲೆಟ್ ಕಾರ್ಯಪ್ರವೃತ್ತರಾಗಿದ್ದಾರೆ. ಎರ್ ಕಂಟ್ರೋಲ್ ರೂಂಗೆ ತುರ್ತು ಮಾಹಿತಿ ರವಾನಿಸಿದ್ದಾರೆ.

ಅರ್ಧ ಗಂಟೆ ಬಳಿಕ ತುರ್ತು ಭೂಸ್ಪರ್ಶ

ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷದ ಮಾಹಿತಿ ಸಿಕ್ಕ ಕಂಟ್ರೋಲ್ ರೂಂ ವಿಮಾನ ತುರ್ತು ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಿತ್ತು. ಏರ್ ಇಂಡಿಯಾ ವಿಮಾನ ಸುಮಾರು ಅರ್ಧ ಗಂಟೆ ಕಾಲ ಆಗಸದಲ್ಲಿ ಸುತ್ತಾಡಿ ಇಂಧನ ಖಾಲಿ ಮಾಡುವ ಪ್ರಯತ್ನ ಮಾಡಿತ್ತು. ಬಳಿಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ಪ್ರಯಾಣಿಕರು, ಸಿಬ್ಬಂದಿಗಳು ಸುರಕ್ಷಿತ

ಏರ್ ಇಂಡಿಯಾ ವಿಮಾನ ಸುರಕ್ಷಿತವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಎಲ್ಲಾ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.

ವೈದ್ಯಕೀಯ ಕಾರಣದಿಂದ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್

ಕೋಲ್ಕತಾ ಚೆನ್ನೈ ನಡುವಿನ ವಿಮಾನದಲ್ಲಿ ಪ್ರಯಾಣಿಕನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಚೆನ್ನೈ ವಿಮಾನದಲ್ಲಿ ಇಂಡಿಗೋ ವಿಮಾನ ಶೀಘ್ರವಾಗಿ ಲ್ಯಾಂಡಿಂಗ್ ಮಾಡಲು ಎಲ್ಲಾ ವ್ಯವಸ್ಥೆ ಮಾಡಿದ ಘಟನೆ ಇತ್ತೀಚೆಗೆ ನಡೆದಿತ್ತು.

ಟರ್ಬುಲೆನ್ಸ್‌ನಿಂದ ಡೆಲ್ಟಾ ಪ್ರಯಾಣಿಕರು ಅಸ್ವಸ್ಥ

ಕಳೆದೆರಡು ದಿನಗಳ ಹಿಂದೆ ಅಮರಿಕದ ಡೆಲ್ಟಾ ವಿಮಾನ ಟರ್ಬುಲೆನ್ಸ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ತೀವ್ರ ಟರ್ಬುಲೆನ್ಸ್ ಕಾರಣದಿಂದ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಆದರೆ 25ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆ ದಾಖಲಾಗಿದ್ದರು.