ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಟ್ರ್ಯಾಕ್‌ಗೆ ಬೀಳದಂತೆ ಪಕ್ಕಕ್ಕೆ ಸರಿಸಿ ಎಚ್ಚರಿಕೆ ನೀಡುವ ಭದ್ರತಾ ಸಿಬ್ಬಂದಿಯೇ ಆಯತಪ್ಪಿ ಟ್ರ್ಯಾಕ್‌ಗೆ ಬಿದ್ದಂತಹ ಘಟನೆಯೊಂದು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಟ್ರ್ಯಾಕ್‌ಗೆ ಬೀಳದಂತೆ ಪಕ್ಕಕ್ಕೆ ಸರಿಸಿ ಎಚ್ಚರಿಕೆ ನೀಡುವ ಭದ್ರತಾ ಸಿಬ್ಬಂದಿಯೇ ಆಯತಪ್ಪಿ ಟ್ರ್ಯಾಕ್‌ಗೆ ಬಿದ್ದಂತಹ ಘಟನೆಯೊಂದು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಈ ದೃಶ್ಯ ಮೆಟ್ರೋ ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿತ್ತು. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ನಿನ್ನೆ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಕೂಡಲೇ ಅಲ್ಲೇ ಇದ್ದ ಪ್ರಯಾಣಿಕರೊಬ್ಬರು, ಸೆಕ್ಯೂರಿಟಿ ಗಾರ್ಡ್‌ ಅವರ ರಕ್ಷಣೆಗೆ ಧಾವಿಸಿ ಬಂದಿದ್ದಾರೆ. ಪ್ರಯಾಣಿಕರೊಬ್ಬರ ಸಹಾಯದಿಂದಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅನಾಹುತದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ನಡೆದಿರುವುದನ್ನು ಬಿಎಂಆರ್ ಸಿಎಲ್ ಮೂಲಗಳು ಖಚಿತಪಡಿಸಿವೆ.

ಹಾಗೆಯೇ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಭದ್ರತಾ ಸಿಬ್ಬಂದಿಯ ಕೆಲಸದ ಅವಧಿ ಹಾಗೂ ಅವರ ಆರೋಗ್ಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ಆತ ನಿದ್ದೆ ಮಂಪರಿನಲ್ಲಿದ್ದ ಎಂದು ಹೇಳಿದ್ದು, ಭದ್ರತಾ ಸಿಬ್ಬಂದಿ 16 ರಿಂದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುತ್ತಾರೆ ಇದೇ ಕಾರಣಕ್ಕೆ ಆತ ನಿದ್ರೆ ಮಂಪರಿನಲ್ಲಿ ಇದ್ದಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Scroll to load tweet…