ರೈಲಿನ ಮೇಲ್ಭಾಗದ ಸೀಟ್‌ನಲ್ಲಿ ಕುಳಿತಿದ್ದ ಜೋಡಿಯೊಂದು ತಮ್ಮ ಸುತ್ತಲಿನ ಪ್ರಯಾಣಿಕರನ್ನು ಮರೆತು ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ಇಂದಿನ ಜನತೆಗೆ ಎಲ್ಲಿ ಹೇಗಿರಬೇಕು ಅನ್ನೋದು ತಿಳಿಯಲ್ಲ ಎಂಬುದಕ್ಕೆ ಮತ್ತೊಂದು ವಿಡಿಯೋ ಮುನ್ನಲೆಗೆ ಬಂದಿದೆ. ತಮ್ಮ ಸುತ್ತಲೂ ಜನರಿದ್ದಾರೆ ಅನ್ನೋದನ್ನು ಮರೆತು ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಇರೋದರಿಂದ ಜನರು ಇಂತಹ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಾರೆ. ಇಂತಹ ವಿಡಿಯೋಗಳು ಕಡಿಮೆ ಸಮಯದಲ್ಲಿ ವೈರಲ್ ಆಗುತ್ತವೆ. ಕೆಲವೊಮ್ಮೆ ತಮ್ಮದೇ ವೈರಲ್ ವಿಡಿಯೋ ಜನರು ಶಾಕ್ ಆಗಿ ಪ್ರತಿಕ್ರಿಯಿಸಿದ್ದುಂಟು. ಇಂದು ಇಂತಹುವುದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೋಡಿಯೊಂದು ತಾವು ರೈಲಿನಲ್ಲಿಯೇ ರೊಮ್ಯಾಂಟಿಕ್ ಮೂಡ್‌ಗೆ ಜಾರಿದೆ.
ಭಾರತೀಯ ರೈಲ್ವೆಯಲ್ಲಿ ಪ್ರತಿನಿತ್ಯ ಕೋಟ್ಯಂತರ ಜನರು ಪ್ರಯಾಣಿಸುತ್ತಾರೆ. ಅದರಲ್ಲಿಯೂ ಜನರಲ್ ಕೋಚ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಲಗೇಜ್ ಇರಿಸುವ ಸ್ಥಳದಲ್ಲಿಯೂ ಕುಳಿತು ಪ್ರಯಾಣಿಸುತ್ತಿರುತ್ತಾರೆ. ಈಗ ವೈರಲ್ ಆಗಿರುವ ಜೋಡಿ ಮೇಲ್ಭಾಗದ ಸೀಟ್‌ನಲ್ಲಿ ಕುಳಿತಿದ್ದು, ತಮ್ಮ ಸುತ್ತ ಪ್ರಯಾಣಿಕರಿರೋದನ್ನು ಮರೆತಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ವಿಂಡೋ ಸೀಟ್‌ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನ್ನು ರಾಜೈಸ್ ವ್ಲಾಗ್ (Rjais Vlogs) ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಹಂಚಿಕೊಂಡ ಈ ವಿಡಿಯೋಗೆ 7 ಲಕ್ಷಕ್ಕೂ ಅಧಿಕ ವ್ಯೂವ್‌ಗಳು (7,04,888 views) ಬಂದಿವೆ. ಈ ವಿಡಿಯೋವನ್ನು 30ನೇ ಸೆಪ್ಟೆಂಬರ್ 2022ರಂದು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮೇಲಿನ ಸೀಟ್‌ನಲ್ಲಿ ಕುಳಿತ ಜೋಡಿ ಮಹಾನ್ ಕೆಲಸ ಮಾಡುತ್ತಿದೆ. ಸಾರ್ವಜನಿಕವಾಗಿ ಈ ರೀತಿ ನಡೆದುಕೊಳ್ಳುವುದು ತಪ್ಪು ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಜೋಡಿಯೊಂದು ರೈಲಿನಲ್ಲಿ ಮೇಲಿನ ಸೀಟ್‌ನಲ್ಲಿ (Upper Berth) ಕುಳಿತಿದೆ. ಮಧ್ಯದ ಸೀಟ್‌ನಲ್ಲಿ ಮಕ್ಕಳು ಕುಳಿತಿರೋದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ. ಯುವತಿ ನಿಧಾನವಾಗಿ ತನ್ನ ಮುಖವನ್ನು ಯುವಕನ ಬಳಿ ತೆಗೆದುಕೊಂಡು ಬರುತ್ತಾಳೆ. ಒಂದು ಕ್ಷಣ ಇಬ್ಬರು ಬೇರೆಯದ್ದೇ ಲೋಕಕ್ಕೆ ಹೋದಂತೆ ಕಾಣಿಸುತ್ತದೆ. ಮರುಕ್ಷಣವೇ ಅಲರ್ಟ್ ಆದ ಜೋಡಿ ವಾಸ್ತವಿಕ ಜಗತ್ತಿಗೆ ಬಂದು ಮಾತನಾಡಲು ಶುರು ಮಾಡುತ್ತಾರೆ. ಇದು ಸೈಡ್ ಲೋವರ್ ಬರ್ತ್‌ನಲ್ಲಿ ಕುಳಿತಿದ್ದ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದೇ ವಿಡಿಯೋದಲ್ಲಿ ಟೀ ಮಾರಾಟ ಮತ್ತು ತಿಂಡಿ ಮಾರಾಟ ಮಾಡುವ ಜನರು ಜೋರಾಗಿ ಕೂಗುತ್ತಾ ಬರುತ್ತಿರೋದನ್ನು ಗಮನಿಸಬಹುದು. ಇಷ್ಟು ಗಲಾಟೆ, ಜನಸಂದಣಿ ಇದ್ರೂ ಜೋಡಿ ಮಾತ್ರ ಕೆಲ ಕ್ಷಣ ರೊಮ್ಯಾಂಟಿಕ್ ಮೂಡ್‌ಗೆ ಜಾರಿತ್ತು.
ಸಂಸ್ಕಾರ ಮರೆತ ಜೋಡಿ
ಈ ವಿಡಿಯೋ ನೋಡಿದ ಜೋಡಿ ಇಬ್ಬರು ಸಂಸ್ಕಾರ ಮರೆತವರು ಎಂದು ಕಮೆಂಟ್ ಮಾಡಿದ್ದಾರೆ. ಕೆಲ ನೆಟ್ಟಿಗರು ವಿಡಿಯೋ ಸೆರೆ ಹಿಡಿದವರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಅಲ್ಲಿಯೇ ಅ ಜೋಡಿಯನ್ನು ಎಚ್ಚರಿಸಬಹುದಿತ್ತು. ಆ ಕೆಲಸ ಮಾಡೋದು ಬಿಟ್ಟು ವಿಡಿಯೋ ರೆಕಾರ್ಡ್ ಮಾಡಿದ್ದು ತಪ್ಪು. ಕೊನೆಪಕ್ಷ ಇಬ್ಬರ ಮುಖವನ್ನು ಬ್ಲರ್ ಮಾಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ. ಈ ವಿಡಿಯೋ ಎಲ್ಲಿಯದ್ದು ಎಂದು ತಿಳಿದು ಬಂದಿಲ್ಲ.
ಮೆಟ್ರೋದಲ್ಲಿ ಜೋಡಿಯ ಅಸಭ್ಯ ವರ್ತನೆ
ಇತ್ತೀಚೆಗೆ ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಪ್ಲಾಟ್‌ಫಾರಂನಲ್ಲಿ ಜೋಡಿಯೊಂದು ಅಸಭ್ಯವಾಗಿ ವರ್ತನೆ ಮಾಡಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿತ್ತು. ದೆಹಲಿ ಮೆಟ್ರೋದಲ್ಲಿ ಇಂತಹ ದೃಶ್ಯಗಳನ್ನು ನೋಡುತ್ತಿದ್ದೇವು. ಇದೀಗ ಬೆಂಗಳೂರು ಮೆಟ್ರೋದಲ್ಲಿ ಇಂತಹ ಘಟನೆ ನಡೆಯುತ್ತಿರೋದು ದುರದೃಷ್ಟಕರ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು.



