ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ₹661 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಯಂಗ್ ಇಂಡಿಯನ್ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.

ನವದೆಹಲಿ (ಏ.15): ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ರಾಜ್ಯಸಭಾ ಸಂಸದೆ ಹಾಗೂ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಲೋಕಸಭೆಯ ವಿಪಕ್ಷ ನಾಯಕ ಕಾಂಗ್ರೆಸ್ನ್ ರಾಹುಲ್‌ ಗಾಂಧಿ ವಿರುದ್ಧ ಮಂಗಳವಾರ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ರೋಸ್‌ ಅವೆನ್ಯೂ ಕೋರ್ಟ್‌ಗೆ ಇಡಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಸೋನಿಯಾ ಗಾಂಧಿ ಎ1 ಆರೋಪಿ ಆಗಿದ್ದರೆ, ರಾಹುಲ್‌ ಗಾಂಧಿ ಎ2 ಆರೋಪಿಯಾಗಿದ್ದಾರೆ.

ಇದಕ್ಕೂ ಮುನ್ನ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ದೆಹಲಿ, ಮುಂಬೈ ಮತ್ತು ಲಕ್ನೋದಲ್ಲಿರುವ 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ನೋಟಿಸ್ ಕೂಡ ಜಾರಿ ಮಾಡಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವ ಎಜೆಎಲ್ ಮತ್ತು ಪತ್ರಿಕೆಯ ಮಾಲೀಕತ್ವದ ಯಂಗ್ ಇಂಡಿಯನ್ ವಿರುದ್ಧದ ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ) ಪ್ರಕರಣದಲ್ಲಿ ಇಡಿ ಈ ಹಿಂದೆ ತಾತ್ಕಾಲಿಕ ಜಪ್ತಿ ಆದೇಶವನ್ನು ಹೊರಡಿಸುವ ಮೂಲಕ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಏನಿದು ವಿವಾದ: ಇಲ್ಲಿದೆ ಡೀಟೇಲ್ಸ್‌

ಏನಿದು ನ್ಯಾಷನಲ್ ಹೆರಾಲ್ಡ್ ಪತ್ರಿಕೆ: 1937ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭವಾಗಿತ್ತು. ಸ್ವಾತಂತ್ರ್ಯ ಯೋಧರ ಜತೆ ಸೇರಿ ಜವಹರಲಾಲ್ ನೆಹರು ಆರಂಭಿಸಿದ್ದ ಪತ್ರಿಕೆ ಇದು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿಯಿಂದ ಪತ್ರಿಕೆ ಪ್ರಕಟಣೆ ಆಗುತ್ತಿತ್ತು. ಎಜಿಎಲ್‌ಗೆ 5000 ಸ್ವಾತಂತ್ರ್ಯ ಹೋರಾಟಗಾರರು ಹೂಡಿಕೆ ಮಾಡಿದ್ದರು. 2008ರಲ್ಲಿ ನಷ್ಟದಿಂದ ಪತ್ರಿಕೆ ಮುದ್ರಣ ನಿಲ್ಲಿಸಿದಾಗ 90 ಕೋಟಿ ನಷ್ಟದಲ್ಲಿತ್ತು. ಈ ವೇಳೆ AJLನಲ್ಲಿ ಕಂಪನಿಯ ಮಾಲೀಕತ್ವ ಯಾವುದೇ ವ್ಯಕ್ತಿಗೆ ಸೇರಿದ್ದಾಗಿರಲಿಲ್ಲ. 2010ರಲ್ಲಿ 1057 ಷೇರುದಾರರು AJLನಲ್ಲಿ ಪಾಲುದಾರರಾಗಿದ್ದರು.

ಏನಿದು ನ್ಯಾಷನಲ್ ಹೆರಾಲ್ಡ್ ಹಗರಣ: 2010ರಲ್ಲಿ 5 ಲಕ್ಷ ಬಂಡವಾಳದೊಂದಿಗೆ ಯಂಗ್ ಇಂಡಿಯನ್ ಲಿಮಿಟೆಡ್ ಆರಂಭವಾಗಿತ್ತು. ಯಂಗ್ ಇಂಡಿಯನ್ ಕಂಪನಿಯಲ್ಲಿ ಸೋನಿಯಾ & ರಾಹುಲ್ ಶೇ.76ರಷ್ಟು ಷೇರು ಹೊಂದಿದ್ದಾರೆ. ಅವರೊಂದಿಗೆ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್ ಶೇ.24ರಷ್ಟು ಷೇರು ಹೊಂದಿದ್ದಾರೆ.

2011ರಲ್ಲಿ ಕಾಂಗ್ರೆಸ್‌ನಿಂದ AJL ಕಂಪನಿಗೆ ಬಡ್ಡಿಯಿಲ್ಲದೆ 90 ಕೋಟಿ ರೂ ಸಾಲ ನೀಡಲಾಗಿತ್ತು. ನಷ್ಟದಲ್ಲಿದ್ದ ಪತ್ರಿಕೆ ಉಳಿಸಿಕೊಳ್ಳಲು AJL ಕಂಪನಿಗೆ 90 ಕೋಟಿ ರೂ ಸಾಲ ನೀಡಿತ್ತು. ಈ ವೇಳೆ ಯಂಗ್ ಇಂಡಿಯನ್ ಲಿಮಿಟೆಡ್‌ನಿಂದ ಕಾಂಗ್ರೆಸ್‌ಗೆ 50 ಲಕ್ಷ ರೂ ಸಂದಾಯ ಮಾಡಲಾಗಿತ್ತು. ಇದರಿಂದಾಗಿ AJL ಕಂಪನಿಗೆ ಕಾಂಗ್ರೆಸ್​ ಕೊಟ್ಟ ಸಾಲ ವಸೂಲಿ ಹಕ್ಕನ್ನು ಯಂಗ್ ಇಂಡಿಯನ್ ಪಡೆದುಕೊಂಡಿತ್ತು.

89.5 ಕೋಟಿ ಸಾಲ ವಸೂಲಿ ಮಾಡುವ ಹಕ್ಕು ಯಂಗ್ ಇಂಡಿಯನ್‌ಗೆ ಕಾಂಗ್ರೆಸ್ ನೀಡಿತ್ತು. ಇದರಿಂದಾಗಿ ಯಂಗ್ ಇಂಡಿಯನ್‌ AJL ಕಂಪನಿಯ ಷೇರುಗಳ ಖರೀದಿ ಮಾಡಿತ್ತು. 90 ಕೋಟಿ ಸಾಲಕ್ಕೆ ಪ್ರತಿಯಾಗಿ AJL ಕಂಪನಿಯನ್ನೇ ಯಂಗ್ ಇಂಡಿಯನ್ ಖರೀದಿ ಮಾಡಿತ್ತು.
5 ಸಾವಿರ ಕೋಟಿ ಆಸ್ತಿಯ ಕಂಪನಿ 90 ಕೋಟಿ ರೂಗೆ ಮಾರಾಟ ಮಾಡಲಾಗಿತ್ತು. ಷೇರುದಾರರಿಗೆ ಮಾಹಿತಿ ನೀಡದೇ ಕಂಪನಿ ಮಾಲಿಕತ್ವ ವರ್ಗಾವಣೆ ಆರೋಪ ಮಾಡಲಾಗಿದೆ. ಯಂಗ್ ಇಂಡಿಯನ್‌ ಪ್ರತಿ ಷೇರಿಗೆ 10 ರೂನಂತೆ 9 ಕೋಟಿ ಷೇರು ಖರೀದಿ ಮಾಡಿತ್ತು. 2011ರಲ್ಲಿ ಅಸೋಸಿಯೇಟ್ಸ್ ಜರ್ನಲ್ಸ್ ಮಾಲೀಕತ್ವ ಯಂಗ್ ಇಂಡಿಯನ್ಸ್‌ಗೆ ವರ್ಗಾವಣೆ ಮಾಡಲಾಗಿತ್ತು.

ಯಂಗ್ ಇಂಡಿಯನ್ ಮಾಲೀಕತ್ವ

ಸೋನಿಯಾ ಗಾಂಧಿ38%
ರಾಹುಲ್ ಗಾಂಧಿ 38%
ಮೋತಿ ಲಾಲ್ ವೋರಾ (2020ರಲ್ಲಿ ನಿಧನ)12%
ಆಸ್ಕರ್ ಫರ್ನಾಂಡಿಸ್ (2020ರಲ್ಲಿ ನಿಧನ) 12%


5 ಸಾವಿರ ಕೋಟಿ ಹಗರಣ ಸುಬ್ರಹ್ಮಣ್ಯಸ್ವಾಮಿ ಕೇಸ್: ಈ ವಿಚಾರವಾಗಿ 2012ರಲ್ಲಿ ಸುಬ್ರಹ್ಮಣ್ಯಸ್ವಾಮಿ ದೆಹಲಿ ಕೋರ್ಟ್‌ನಲ್ಲಿ ಕೇಸ್‌ ದಾಖಲು ಮಾಡಿದ್ದರು. ಅಕ್ರಮವಾಗಿ ಅಸೊಸಿಯೇಟ್ ಜರ್ನಲ್ಸ್ ಕಂಪನಿ ಸ್ವಾಧೀನ ಆರೋಪ ಮಾಡಿದ್ದರು. ಸಾರ್ವಜನಿಕವಾಗಿ ಪಕ್ಷಕ್ಕಾಗಿ ಸಂಗ್ರಹಿಸಿದ್ದ ಹಣ ಕೊಟ್ಟು ಕಂಪನಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ದೂರಿದ್ದರು.

ನ್ಯಾಷನಲ್‌ ಹೆರಾಲ್ಡ್‌ ಕೇಸ್‌, ಕಾಂಗ್ರೆಸ್‌ ನಾಯಕ ಪವನ್‌ ಬನ್ಸಾಲ್‌ ವಿಚಾರಣೆ ನಡೆಸಿದ ಇಡಿ!

ವಾಣಿಜ್ಯ ಉದ್ದೇಶಕ್ಕಾಗಿ ರಾಜಕೀಯ ಪಕ್ಷದಿಂದ ಸಾಲ ನೀಡಲಾಗಿದೆ. ಕಾಂಗ್ರೆಸ್‌ 90 ಕೋಟಿ ಬಳಸಿಕೊಂಡು 5 ಸಾವಿರ ಕೋಟಿ ಆಸ್ತಿ ಗುಳುಂ ಮಾಡಿದೆ. ಈ ವೇಳೆ 2015ರಲ್ಲಿ ಸೋನಿಯಾ, ರಾಹುಲ್ ವಿರುದ್ಧ ಇ.ಡಿಯಿಂದ ಅಕ್ರಮ ವರ್ಗಾವಣೆ ಕೇಸ್ ಮಾಡಿತ್ತು. 2015 ಡಿಸೆಂಬರ್‌ನಲ್ಲಿ ಪಾಟಿಯಾಲ ಕೋರ್ಟ್‌ ಸೋನಿಯಾ, ರಾಹುಲ್‌ಗೆ ಬೇಲ್ ನೀಡಿತ್ತು. 2019ರಲ್ಲಿ 64 ಕೋಟಿ ಮೌಲ್ಯದ ನ್ಯಾಷನಲ್ ಹೆರಾಲ್ಡ್ ಆಸ್ತಿಯನ್ನು ಇಡಿ ಜಪ್ತಿ ಮಾಡಿದ್ದರೆ, 2022ರಲ್ಲಿ ಖರ್ಗೆ, ಸೋನಿಯಾ, ರಾಹುಲ್ ಗಾಂಧಿ, ಡಿಕೆಶಿ ಬ್ರದರ್ಸ್​ ವಿಚಾರಣೆ ಮಾಡಿತ್ತು. 2023, ನವೆಂಬರ್ 22 ರಂದು 751 ಕೋಟಿ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು.

ಡಿಕೆಶಿ ಮೇಲಿನ ಖಾಸಗಿ ದೂರು ವಜಾಗೊಳಿಸಿದ ಹೈಕೋರ್ಟ್‌

Scroll to load tweet…