Indian Railways: ವಿಡಿಯೋಗೆ ಈವರೆಗೆ 8 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಗೂಡ್ಸ್ ರೈಲು ರಿಪೇರಿಗೆ 5 ಗಂಟೆ ಬೇಕೆಂದ ಅಧಿಕಾರಿಗಳಿಗೆ ನಾಚಿಕೆ ಆಗಬೇಕು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಕಾನ್ಪುರ: ಕೆಟ್ಟು ನಿಂತು ಗೂಡ್ಸ್ ರೈಲಿನ ರಿಪೇರಿಯನ್ನು ಸಾಮಾನ್ಯ ವ್ಯಕ್ತಿಯೊಬ್ಬರು ಕೇವಲ 10 ನಿಮಿಷದಲ್ಲಿಯೇ ಮಾಡಿದ್ದಾರೆ. ಗೂಡ್ಸ್ ರೈಲು ಕ್ರಾಸಿಂಗ್ ರಸ್ತೆಯಲ್ಲಿ ನಿಂತಿದ್ದರಿಂದ ಎರಡು ಬದಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದೀಗ ರೈಲು ರಿಪೇರಿ ಮಾಡಿ ಅಧಿಕಾರಿಗಳನ್ನು ಚಕಿತಗೊಳಿಸಿರುವ ವ್ಯಕ್ತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರೈಲು ರಿಪೇರಿ ಮಾಡಿರುವ ವ್ಯಕ್ತಿ ಯಾವುದೇ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿರುವ ಮೆಕ್ಯಾನಿಕಲ್ ಎಂಜಿನಿಯರ್ ಅಲ್ಲ. ಸದ್ಯ 'ಲೋಕಲ್ ಚಾಚಾ' ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದು, ಸಾರ್ವಜನಿಕರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ರೈಲಿನಿಂದಾಗಿ ಟ್ರಾಫಿಕ್ ದಟ್ಟಣೆ

ಉತ್ತರ ಪ್ರದೇಶದ ಕಾನ್ಪುರ ನಗರದ ವಿಡಿಯೋ ದೊಡ್ಡ ದೊಡ್ಡ ಪದವಿ ಜೊತೆ ತರಬೇತಿ ಪಡೆದುಕೊಂಡವರನ್ನು ಅಚ್ಚರಿಗೊಳಿಸುತ್ತಿದೆ. ಗೂಡ್ಸ್ ರೈಲು ಕ್ರಾಸಿಂಗ್ ರಸ್ತೆಯಲ್ಲಿ ನಿಂತಿದ್ದು, ಎರಡೂ ಬದಿ ಟ್ರಾಫಿಕ್ ಜಾಮ್ ಆಗಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. ರೈಲಿನ ಒಂದು ಡಬ್ಬಿಯಲ್ಲಿ (wagon) ಹೊಗೆ ಕಾಣಿಸಿಕೊಂಡಿದ್ದರಿಂದ ಲೋಕೋಪೈಲಟ್ ಟ್ರೈನ್ ನಿಲ್ಲಿಸಿದ್ದರು. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಕೂಡಲೇ ರೈಲ್ವೆ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಲಾಗಿತ್ತು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರೈಲ್ವೆ ಇಲಾಖೆಯ ನುರಿತ ಇಂಜಿನೀಯರ್ ಮತ್ತು ಇತರೆ ಸಿಬ್ಬಂದಿ ಪರಿಶೀಲನೆ ನಡೆಸಿ ರಿಪೇರಿಗೆ ಸುಮಾರು 5 ಗಂಟೆಗಳು ಬೇಕಾಗುತ್ತದೆ ಎಂದು ಹೇಳಿದ್ದರು. 5 ಗಂಟೆ ರೈಲು ನಿಂತುಕೊಂಡ್ರೆ ಕಾನ್ಪುರದ ಎಲ್ಲಾ ರಸ್ತೆಗಳಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗುವ ಆತಂಕ ಎದುರಾಗಿತ್ತು. ಈ ಸಂದರ್ಭದಲ್ಲಿ ಆಪತ್ಭಾಂದವನಾಗಿ ಬಂದ ವ್ಯಕ್ತಿಯೊಬ್ಬರು ಈ ಸಮಸ್ಯೆಯನ್ನು ಕೇವಲ 10 ನಿಮಿಷದಲ್ಲಿ ಪರಿಹರಿಸಿದ್ದಾರೆ. ಯಾರು ಈ ವ್ಯಕ್ತಿ ಎಂದು ನೋಡೋಣ ಬನ್ನಿ.

ಯಾರು ಈ ಆಪತ್ಭಾಂದವ?

ಮನೋಜ್ ಶುಕ್ಲಾ ಎಂಬವರು ರೈಲು ರಿಪೇರಿ ಮಾಡುವ ಮೂಲಕ ಅಧಿಕಾರಿಗಳನ್ನು ಅಚ್ಚರಿಗೊಳಿಸಿದ್ದಾರೆ. ಸ್ಥಳದಲ್ಲಿದ್ದ ಮನೋಜ್ ಶುಕ್ಲಾ, ರೈಲಿನಲ್ಲಾಗುತ್ತಿರುವ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ನಂತರ ಅಧಿಕಾರಿಗಳ ಬಳಿ ಬಂದ ಮನೋಜ್ ಶುಕ್ಲಾ,ಈ ಸಮಸ್ಯೆಯನ್ನು ನಾನು ಸರಿ ಮಾಡುವೆ ಎಂದು ಅವರ ಬಳಿಯಲ್ಲಿದ್ದ ಸುತ್ತಿಗೆ ತೆಗೆದುಕೊಂಡು ರೈಲಿನ ಕಳೆಗೆ ಹೋಗಿ 10 ನಿಮಿಷದ ನಂತರ ಹೊರಗೆ ಬಂದು ಸಮಸ್ಯೆ ಪರಿಹಾರವಾಗಿದೆ ಎಂದು ಹೇಳಿದ್ದಾರೆ. ನಂತರ ನುರಿತ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಮಸ್ಯೆ ಸರಿಯಾಗಿರೋದನ್ನು ಕಂಡು ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ.

8 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದ ವಿಡಿಯೋ

ಈ ವಿಡಿಯೋವನ್ನು memes.himmu ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ವಿಡಿಯೋಗೆ ಈವರೆಗೆ 8 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, ಸಾವಿರಾರು ಕಮೆಂಟ್‌ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ಹಾಗಾದ್ರೆ ಜನರು ಹೇಳಿದ್ದೇನು ಅಂತ ನೋಡೋಣ ಬನ್ನಿ.

ಇದನ್ನೂ ಓದಿ: ಸ್ನಾನದ ವಿಡಿಯೋ ಶೇರ್​ ಮಾಡಿ ಹಲ್​ಚಲ್​ ಸೃಷ್ಟಿಸಿದ ನಟಿ ಸೋನಂ! ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಶಾಕ್​

ರೈಲ್ವೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಲಕ್ಷಾಂತರ ಸಂಬಳ ಪಡೆಯುವ ಈ ರೈಲಿನ ನುರಿತ ಎಂಜಿನಿಯರ್‌ಗಳನ್ನು ಮನೋಶ್ ಶುಕ್ಲಾ ಅವರ ಬಳಿ ತರಬೇತಿಗೆ ಕಳುಹಿಸಬೇಕು. ಡಿಗ್ರಿ ಪಡೆದು ನೌಕರಿ ಪಡೆದುಕೊಂಡ್ರೆ ಏನು ಪ್ರಯೋಜನ? ಸಮಸ್ಯೆಯನ್ನು ತಿಳಿದುಕೊಂಡು ಪರಿಹರಿಸುವ ತಿಳುವಳಿಕೆಯನ್ನು ಹೊಂದಿರಬೇಕಾಗುತ್ತದೆ. ಆ ವ್ಯಕ್ತಿಯ ಅನುಭವ ಇಲ್ಲಿ ಕೆಲಸ ಮಾಡಿದೆ. ರಿಪೇರಿಗೆ 5 ಗಂಟೆ ಬೇಕೆಂದ ಅಧಿಕಾರಿಗಳಿಗೆ ನಾಚಿಕೆ ಆಗಬೇಕು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಇವ್ರು ಭಾರತದ Gen Zಗಳು! ನಡುರಾತ್ರಿ ಕ್ಲಬ್​ನಲ್ಲಿ ಏನ್​ ಮಾಡ್ತಿದ್ದಾರೆ ಗೊತ್ತಾ? ವೈರಲ್​ ವಿಡಿಯೋ ನೋಡಿ ಅಬ್ಬಾ ಎಂದ ನೆಟ್ಟಿಗರು

View post on Instagram