ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರದ ಮೇಲೆ ಪರಮಾಣು ದಾಳಿ ಎಚ್ಚರಿಕೆ ನೀಡಿದರೂ ಭಾರತ ಬೆಚ್ಚಿ ಬೀಳಲೇ ಇಲ್ಲ. ಮುನೀರ್ ಮಾತನ್ನೂ ಭಾರತ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದ ಕೆರಳಿದ ಆಸೀಮ್ ಮನೀರ್ ಇದೀಗ ಮುಕೇಶ್ ಅಂಬಾನಿಯ ರಿಫೈನರಿ ಘಟಕದ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿದ್ದಾರೆ

ನವದೆಹಲಿ (ಆ.12) ಪಹೆಲ್ಗಾಂ ದಾಳಿ ಬಳಿಕ ಭಾರತದ ಪ್ರತಿ ದಾಳಿ, ತೆಗೆದುಕೊಂಡ ನಿರ್ಣಯಗಳು ಪಾಕಿಸ್ತಾನದ ನಿದ್ದೆ ಹಾಳು ಮಾಡಿದೆ. ದಾಳಿಯಿಂದ ಹಾನಿಗೊಳಗಾದ ಪ್ರದೇಶ ಸರಿಪಡಿಸುವುದೇ ಪಾಕಿಸ್ತಾನಕ್ಕೆ ಸವಾಲಾಗಿದೆ. ಇತ್ತ ಸಿಂಧೂ ನದಿ ಒಪ್ಪಂದ ರದ್ದು ಮಾಡಿರುವುದು ಪಾಕಿಸ್ತಾನಿಯರ ಜೀವವನ್ನೇ ಮತ್ತಷ್ಟು ದುಸ್ತರ ಮಾಡಿದೆ. ಇತ್ತ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಬೆನ್ನಲ್ಲೇ ಭಾರತದ ವಿರುದ್ಧ ಬೆದರಿಕೆ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ನಿಂತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರತದ ಮೇಲೆ ಪರಮಾಣು ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಮುನೀರ್ ಮಾತಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಈ ಪರಮಾಣು ಗೊಡ್ಡು ಬೆದರಿಕೆಗೆ ಭಾರತ ಜಗ್ಗುವುದಿಲ್ಲ ಎಂದಿದೆ. ಇದೇ ವೇಳೆ ಅಸೀಮ್ ಮುನೀರ್, ಮುಕೇಶ್ ಅಂಬಾನಿಯ ಇಂಧನ ರಿಫೈನರಿ ಘಟಕದ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿರುವುದಾಗಿ ವರದಿಯಾಗಿದೆ.

ಜಾಮ್‌ನಗರ ರಿಫೈನರ್ ಮೇಲೆ ದಾಳಿ ಎಚ್ಚರಿಕೆ

ಗುಜರಾತ್‌ನ ಜಾಮ್‌ನಗರದಲ್ಲಿ ಮುಕೇಶ್ ಅಂಬಾನಿ ಮಾಲೀಕತ್ವದ ಅತೀ ದೊಡ್ಡ ಆಯಿಲ್ ರಿಫೈನರಿ ಘಟಕವಿದೆ. ಇದು ಕರಾವಳಿ ತೀರ ಪ್ರದೇಶದಲ್ಲಿದೆ. ಈ ರಿಫೈನರಿ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಮುಂದೆ ಗಡಿಯಲ್ಲಿ ಕಿರಿಕ್ ಮಾಡಿದರೆ ಪಾಕಸ್ತಾನ ಭಾರತದ ಮೇಲೆ ನೇರ ದಾಳಿ ಮಾಡಲಿದೆ. ಭಾರತದ ಪೂರ್ವದಿಂದ ದಾಳಿ ಆರಂಭಿಸುತ್ತೇವೆ. ಇಲ್ಲಿ ಭಾರತದ ಅತ್ಯಂತ ಬೆಲೆ ಬಾಳುವ ಸಂಪನ್ಮೂಲವಿದೆ ಎಂದು ಅಸೀಮ್ ಮನೀರ್ ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ. ಭಾರತದ ಪೂರ್ವದಲ್ಲಿರುವ ಅತ್ಯಂತ ಮಹತ್ವಜ ಸಂಪನ್ಮೂಲ ಎಂದರೆ ಅದು ಮುಕೇಶ್ ಅಂಬಾನಿಯ ಜಾಮ್‌ನಗರ ರಿಫೈನರಿ ಘಟಕ.

ಭಾರತದ ಆರ್ಥಿಕ ಸಂಪನ್ಮೂಲ ಟಾರ್ಗೆಟ್ ಮಾಡಿದ ಪಾಕಿಸ್ತಾನ

ಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾರತದ ಆರ್ಥಿಕ ಸಂಪನ್ಮೂಲದ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದೆ. ಭಾರತದ ಹಾಗೂ ಅಮೆರಿಕ ಸಂಬಂಧ ಹಳಸಿದೆ. ಇಷ್ಟೇ ಅಲ್ಲ ಭಾರತದ ಮೇಲೆ ಹಿಡಿತ ಸಾಧಿಸುವ, ಭಾರತದ ಆರ್ಥಿಕತೆಯನ್ನು ಸಂಕುಚಿತಗೊಳಿಸುವ ಅಮೆರಿಕ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಪಾಕಿಸ್ತಾನವನ್ನು ದಾಳವಾಗಿ ಬಳಸಿಕೊಳ್ಳಲು ಅಮೆರಿಕ ಮುಂದಾಗಿತ್ತು. ಇತ್ತ ಭೀಕ್ಷೆ ಬೇಡುತ್ತಿರುವ ಪಾಕಿಸ್ತಾನಕ್ಕೆ ಯಾರಾದರೂ ಕೈಹಿಡಿದರೆ ಸಾಕು ಅನ್ನೋ ಪರಿಸ್ಥಿತಿ ಎದುರಾಗಿದೆ. ಇದರಂತೆ ಡೋನಾಲ್ಡ್ ಟ್ರಂಪ್ ಪಾಕಿಸ್ತಾನದ ಜೊತೆ ಇಂಧನ ಒಪ್ಪಂದ ಸೇರಿದಂತೆ ಹಲವು ಒಪ್ಪಂದ ಮಾಡಿಕೊಂಡಿದ್ದಾರೆ. ಇತ್ತ ಭಾರತದ ವಿರುದ್ಧ ದುಬಾರಿ ತೆರಿಗೆ ವಿಧಿಸಿದ್ದಾರೆ.

ಅಮೆರಿಕ ಬೆಂಬಲ ಪಡೆದಿರುವ ಪಾಕಿಸ್ತಾನ ಇದೀಗ ಸತತವಾಗಿ ಭಾರತದ ವಿರುದ್ಧ ಎಚ್ಚರಿಕೆ ಮಾತುಗಳನ್ನಾಡುತ್ತಿದೆ. ಇಷ್ಟೇ ಅಲ್ಲ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ.