Gokarna Temple: ಗೋಕರ್ಣದ ಆತ್ಮಲಿಂಗ ಮಹಾಬಲೇಶ್ವರ ದೇವಸ್ಥಾನದ ದರ್ಶನವನ್ನು ಪಡೆದು ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಅಸು ನೀಗಿದ್ದಾರೆ. ಹೌದು, ಈ ಬಗ್ಗೆ ವರದಿಯಾಗಿದೆ. ಹಾಗಾದರೆ ಅವರಿಗೆ ಏನಾಗಿತ್ತು? 

ಉತ್ತರ ಕನ್ನಡ: ಜಿಲ್ಲೆಯ ಗೋಕರ್ಣದಲ್ಲಿ ಆತ್ಮಲಿಂಗ ದರ್ಶನ ಪಡೆದು, ಕೆಲವೇ ನಿಮಿಷಗಳಲ್ಲಿ ಭಕ್ತರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಡೀ ನಾಡು ಶಿವರಾತ್ರಿ ಆಚರಣೆ ಮಾಡುತ್ತಿತ್ತು. ಎಲ್ಲ ದೇವಸ್ಥಾನಗಳಲ್ಲಿಯೂ ಜನಸಾಗರ ನೆರೆದಿತ್ತು. ಹಾಗೆಯೇ ಗೋಕರ್ಣದಲ್ಲಿ ಕೂಡ ಲಕ್ಷಾಂತರ ಜನರು ನೆರೆದಿದ್ದರು.

ಆತ್ಮಲಿಂಗದ ದರ್ಶನ ಆಗಿತ್ತು

ಗೋಕರ್ಣದಲ್ಲಿ ಸಾಮಾನ್ಯವಾಗಿ ಜನಸಮೂಹ ನೆರೆದಿರುತ್ತದೆ. ಆದರೆ ಶಿವರಾತ್ರಿಯಂದು ಮಾತ್ರ ಲಕ್ಷಾಂತರ ಜನರು ಬರುತ್ತಾರೆ. ಇನ್ನು ವಿಶೇಷವಾಗಿ ಪೂಜೆ ಕೂಡ ಇರುವುದು. ಹಾಗೆಯೇ ಮೃತರಾದ ರತ್ನಾಕರ ಕೂಡ ದೇವರ ದರ್ಶನಕ್ಕೆಂದು ಬಂದಿದ್ದಾರೆ, ಆತ್ಮಲಿಂಗದ ದರ್ಶನ ಬಳಿಕ ನಿಧನರಾಗಿದ್ದಾರೆ.

ಮೃತರಾದವರಿಗೆ ಏನಾಗಿತ್ತು?

ಮೃತರನ್ನು ಗೋವಾದ ರತ್ನಾಕರ ಎನ್ನಲಾಗಿದೆ. ಇವರಿಗೆ 76 ವರ್ಷ ವಯಸ್ಸು ಎನ್ನಲಾಗಿದೆ. ಶಿವರಾತ್ರಿ ನಿಮಿತ್ತ ಭಕ್ತರು, ಆತ್ಮಲಿಂಗ ದರ್ಶನ ಪಡೆಯಲು ಗೋಕರ್ಣಕ್ಕೆ ಬಂದಿದ್ದರು. ಆತ್ಮಲಿಂಗ ದರ್ಶನ ಪಡೆದು ದೇವಸ್ಥಾನದಿಂದ ಹೊರಗಡೆ ಬಂದಿದ್ದಾರೆ. ಆಗ ಅವರಿಗೆ ಹೃದಯಾಘಾತವಾಗಿದೆ. ಆಮೇಲೆ ಪೊಲೀಸರು ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗಿಲ್ಲ. ಅವರು ನಿಧನರಾಗಿದ್ದಾರೆ ಎನ್ನಲಾಗಿದೆ. ಅವರಿಗೆ ಬೈಪಾಸ್‌ ಸರ್ಜರಿ ಆಗಿತ್ತು. ಈಗ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗಲಿಲ್ಲ.