ಆ ಕ್ಷಣದಲ್ಲಿ ಸುಂದರವಾಗಿ ಕಂಡ್ರೆ ಸಾಕು ಎಂದು ಬ್ಯೂಟಿ ಪಾರ್ಲರ್​ಗೆ ಹೋಗ್ತೀರಾ? ಪ್ರಾಣಕ್ಕೇ ಕುತ್ತಾಗಬಹುದು ಹುಷಾರ್​... ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ್ದಾರೆ ನೋಡಿ ಆರೋಗ್ಯ ಇಲಾಖೆ ಅಧಿಕಾರಿಗಳು. 

ಬ್ಯೂಟಿ ಪಾರ್ಲರ್​ ಎನ್ನೋದು ಈಗ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಗಲ್ಲಿಗಲ್ಲಿಗಳಿಗೂ ಹಲವು ಬ್ಯೂಟಿ ಪಾರ್ಲರ್​ ತಲೆ ಎತ್ತಿವೆ. ಗಂಡಸರ ಫ್ಯಾಷನ್​ ಪ್ರಜ್ಞೆ ಹೆಚ್ಚಾದಂತೆ ಪುರುಷರಿಗೂ ಈಗ ಬಲು ದುಬಾರಿಯ ಷೋರೂಮ್​ಗಳೇ ಎಲ್ಲೆಡೆ ಆರಂಭವಾಗಿವೆ. ಇನ್ನು ಮಹಿಳೆಯರ ಬ್ಯೂಟಿ ಪಾರ್ಲರ್​ ಕಥೆಯಂತೂ ಹೇಳುವುದೇ ಬೇಡ, ಚಿಕ್ಕ ಪುಟ್ಟ ಅಂಗಡಿಗಳಿಂದ ಹಿಡಿದು ಐಷಾರಾಮಿ ಪಾರ್ಲರ್​ಗಳು ವಿವಿಧ ರೀತಿಯ ಹೆಸರುಗಳಲ್ಲಿ ತಲೆ ಎತ್ತಿ ನಿಂತಿವೆ. ಎಷ್ಟೋ ಲಕ್ಷ ಬಾಡಿಗೆ ಕೊಟ್ಟು ಇಂಥ ಪಾರ್ಲರ್​ಗಳನ್ನು ಆರಂಭಿಸುವುದನ್ನು ನೋಡಿದರೆ ಅಬ್ಬಾ ನಿಜಕ್ಕೂ ಇಷ್ಟೊಂದು ಲಾಭ ಇದ್ಯಾ ಎಂದು ಎನ್ನಿಸದೇ ಇರಲಾರದು. 40-50 ರೂಪಾಯಿಗಳಲ್ಲಿ ಚಿಕ್ಕ ಬ್ಯೂಟಿ ಪಾರ್ಲರ್​ಗಳಲ್ಲಿ ಮಾಡುವ ಕೆಲಸವನ್ನೇ 5- 10 ಸಾವಿರದವರೆಗೂ ಪಡೆದು ಮಾಡುವ ಪಾರ್ಲರ್​ಗಳಿಗೂ ಹೋಗುವ ಮಂದಿಗೇನೂ ಕಮ್ಮಿ ಇಲ್ಲ ಬಿಡಿ.

ಆದರೆ ಇದೀಗ ಶಾಕಿಂಗ್​ ಎನ್ನುವಂಥ ವರದಿಯೊಂದು ಬಂದಿದೆ. ಅಷ್ಟಕ್ಕೂ ಸ್ಪಾ, ಬ್ಯೂಟಿ ಪಾರ್ಲರ್​ ಹೆಸರುಗಳಲ್ಲಿ ಒಳಗೆ ಬೇರೆಯದ್ದೇ ದಂಧೆ ನಡೆಯುವುದು ಮಾಮೂಲಾಗಿದೆ. ಅಂಥ ಜನರಿಗೆ ಮಾತ್ರ ಆ ಬಗ್ಗೆ ತಿಳಿದಿರುತ್ತದೆ. ಹೊರಗಡೆ ಬ್ಯೂಟಿ ಪಾರ್ಲರ್​ ಎನ್ನುವ ಬೋರ್ಡ್​, ಒಳಗಡೆ ಬೇರೆಯದ್ದೇ ಕೆಲಸ. ಆದರೆ ಇಲ್ಲಿ ಹೇಳಹೊರಟಿರುವುದು ಅದಕ್ಕಿಂತಲೂ ಭಯಾನಕವಾಗಿರುವ ವಿಷಯ. ಏಕೆಂದರೆ ಒಳಗಡೆ ಬೇರೆ ಕೆಲಸ ಮಾಡುವವರು ಇಷ್ಟಪಟ್ಟು ಅಲ್ಲಿಗೆ ಹೋಗುತ್ತದೆ. ಇಂಥ ಕಡೆ, ಇಂಥ ಕೆಲಸ ನಡೆಯುತ್ತಿರುವ ವಿಷಯ ಅವರಿಗೆ ತಿಳಿದಿರುತ್ತದೆ. ಆದರೆ ಕೇವಲ ಸೌಂದರ್ಯ ವರ್ಧನೆಗೆ ಹೋಗಿ ಪ್ರಾಣಕ್ಕೆ ಕಂಟಕ ತರುವಂಥ ಘಟನೆಗಳು ನಮ್ಮಲ್ಲಿಯೇ ನಡೆಯುತ್ತಿದೆ!

ಹೌದು. ಬೆಳಗಾವಿಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸ್​ ಅಧಿಕಾರಿಗಳು ಜನರಿಗೆ ಜಾಗೃತೆ ಮೂಡಿಸುತ್ತಿದ್ದಾರೆ. ಇದು ಬೆಳಗಾವಿಯ ವಿಷಯವಲ್ಲ. ಪ್ರತಿ ಊರುಗಳಲ್ಲಿಯೂ ಈ ಘಟನೆ ಆಗುತ್ತಿರಲು ಸಾಕು. ಮುಖದ ಕಾಂತಿ ಹೆಚ್ಚಿಸಲು ಕೆಮಿಕಲ್ಸ್​, ಸ್ಟಿರಿಯಾಯ್ಡ್​ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆ ಕ್ಷಣದಲ್ಲಿ ಸುಂದರವಾಗಿ ಕಂಡರೆ ಸಾಕು ಎಂದುಕೊಳ್ಳುವ ಮಹಿಳೆಯರು ಕ್ರಮೇಣ ಚರ್ಮ ರೋಗಕ್ಕೆ ತುತ್ತಾಗಿ ಪ್ರಾಣಕ್ಕೂ ಸಂಕಷ್ಟ ತಂದುಕೊಳ್ಳುತ್ತಿರುವುದು ತಿಳಿದಿದೆ.

30 ಬ್ಯೂಟಿ ಪಾರ್ಲರ್​ಗಳ ಮೇಲೆ ಆರೋಗ್ಯ ಇಲಾಖೆ ದಾಳಿ ಮಾಡಿದ್ದು, ಶಾಕಿಂಗ್​ ವಿಷಯ ರಿವೀಲ್​ ಆಗಿದೆ. ಇದು ಸದ್ಯ ಬೆಳಗಾವಿಯಲ್ಲಿ ಮಾತ್ರ ಪಬ್ಲಿಕ್​ ಆಗಿದೆ. ಆದರೆ ಇನ್ನು ಅದೆಷ್ಟೋ ಊರುಗಳಲ್ಲಿ, ನಿಮ್ಮದೇ ಏರಿಯಾಗಳಲ್ಲಿ ಇಂಥ ಪಾರ್ಲರ್​ಗಳು ಇದ್ದಿರಲು ಸಾಕು. ಹರ್ಬಲ್​ ಎಂದೆಲ್ಲಾ ಬೋರ್ಡ್​ ನೋಡಿಕೊಂಡು ನಿಜಕ್ಕೂ ಅದು ಹರ್ಬಲ್​ ಎಂದು ತಪ್ಪು ತಿಳಿದುಕೊಳ್ಳುವ ಸಂಖ್ಯೆ ಹೆಚ್ಚಾಗುತ್ತಿದೆ. ಆ ಕ್ಷಣದಲ್ಲಿ ಸುಂದರವಾಗಿ ಕಂಡರೆ ಸಾಕು, ಮದುವೆಗೋ, ಫಂಕ್ಷನ್​ಗೋ ಹೋಗುವ ಸಮಯದಲ್ಲಿ ಆ ಕ್ಷಣದಲ್ಲಿ ಸುಂದರವಾಗಿ ಕಂಡ್ರೆ ಸಾಕು ಎಂದುಕೊಂಡು ಕೊನೆಗೆ ಜೀವನ ಪರ್ಯಂತ ನರಳುವ ಕೇಸ್​ಗಳ ಬಗ್ಗೆ ಆರೋಗ್ಯ ಇಲಾಖೆ ಎಚ್ಚರ ನೀಡಿದೆ. 

ಇನ್ನು ಬೆಳಗಾವಿಯ ವಿಷಯಕ್ಕೆ ಬರುವುದಾದರೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಅವರಿಗೆ ಸಾರ್ವಜನಿಕರು ಲಿಖಿತರೂಪದಲ್ಲಿ ದೂರು ನೀಡಿದ್ದರು. ಅದರ ಆಧಾರದ ಮೇಲೆ ಡಿಸಿ ಮೊಹಮ್ಮದ್ ರೋಷನ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಡಿಎಚ್‌ಒ ಡಾ. ಈಶ್ವರ ಗಡಾದಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು 30 ಪಾರ್ಲರ್‌ಗಳ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಸಾಕಷ್ಟು ಕೆಮಿಕಲ್ ವಸ್ತುಗಳು, ಸಿರೈಡ್‌ನಂತಹ ಔಷಧಿಗಳು ಪತ್ತೆಯಾದವು. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು 10 ಬ್ಯೂಟಿ ಪಾರ್ಲರ್​ಗಳನ್ನು ಜಪ್ತಿ ಮಾಡಿದ್ದು, 20 ಬ್ಯೂಟಿ ಪಾರ್ಲರ್​ಗಳಿಗೆ ನೋಟಿಸ್​ ನೀಡಿದ್ದಾರೆ.

ಇಲ್ಲಿದೆ ನೋಡಿ ಅದರ ಸ್ಟೋರಿ...

YouTube video player