ಹೌದು ದರ್ಶನ್ ನಟನೆಯ ಜಗ್ಗುದಾದ ಸಿನಿಮಾದಲ್ಲಿ ದರ್ಶನ್ ಧಂ ಬೇಕಲೇ ಅನ್ನೋ ಡೈಲಾಗ್ ಹೊಡೆದಿದ್ರು. ಇಲ್ಲಿ ನೋಡಿದ್ರೆ ಕಿಚ್ಚ "ಧಂ ಹೊಡೆಯೋದು ಕಮ್ಮಿ ಮಾಡ್ಬೇಕಲೇ ಅಂತಿದ್ದಾರೆ. ದಾಸ-ಕಿಚ್ಚನ ಫ್ಯಾನ್ಸ್ ಎರಡಕ್ಕೂ ತಾಳೆ ಹಾಕ್ತಾ ಇದ್ದಾರೆ.
ದರ್ಶನ್-ಸುದೀಪ್ ಡೈಲಾಗ್ ವಾರ್?
ಕಿಚ್ಚ ಸುದೀಪ್ (Kichcha Sudeep) ನಟನೆಯ ಬಹುನಿರೀಕ್ಷೆಯ ಮಾರ್ಕ್ ಸಿನಿಮಾದ ಟ್ರೈಲರ್ ಹೊರಬಂದಿದೆ. ಟ್ರೈಲರ್ನ ಕೊನೆಯಲ್ಲಿರೋ ಡೈಲಾಗ್ ವೊಂದು ದಾಸನಿಗೆ (Darshan Thoogudeepa) ಹೇಳಿದಂತಿದೆ. "ಧಂ ಹೊಡೆಯೋದು ಕಮ್ಮಿ ಮಾಡ್ಬೇಕಲೇ" ಅಂತ ಮಾಜಿ ಕುಚಿಕು ದರ್ಶನ್ಗೆ ಕಿಚ್ಚ ಸಂದೇಶ ಕೊಟ್ರಾ..? ಈ ಬಗ್ಗೆ ಕಿಚ್ಚ-ದಾಸನ ಫ್ಯಾನ್ಸ್ ಅಡ್ಡಾದಲ್ಲಿ ಏನೆಲ್ಲಾ ಚರ್ಚೆ ನಡೀತಿದೆ ಗೊತ್ತಾ..? ಈ ಸ್ಟೋರಿ ನೋಡಿ..
"ಧಂ ಹೊಡೆಯೋದು ಕಮ್ಮಿ ಮಾಡ್ಬೇಕಲೇ".. ಮಾಜಿ ಕುಚಿಕುವಿನ ಕಾಲೆಳೆದರಾ ಕಿಚ್ಚ..?
ಯೆಸ್ ಮಾರ್ಕ್ ಸಿನಿಮಾದ ಟ್ರೈಲರ್ ಔಟ್ ಆಗಿದೆ. ಪಂಚಭಾಷೆಗಳಲ್ಲಿ ಬಂದಿರೋ ಬಂದಿರೋ ಟ್ರೈಲರ್ ಫುಲ್ ಟ್ರೆಂಡಿಂಗ್ನಲ್ಲಿದೆ. ಆದ್ರೆ ಕನ್ನಡ ಟ್ರೈಲರ್ನಲ್ಲಿರೋ ಒಂದು ಡೈಲಾಗ್ ಫುಲ್ ಬಿರುಗಾಳಿ ಎಬ್ಬಿಸಿದೆ.
ಮಾಸ್ ಆಕ್ಷನ್ ತುಣುಕುಗಳು ತುಂಬಿರೋ ಟ್ರೈಲರ್ನ ಕೊನೆಗೆ ಕಿಚ್ಚ "ಧಂ ಹೊಡೆಯೋದು ಕಮ್ಮಿ ಮಾಡ್ಬೇಕಲೇ" ಅಂತ ಡೈಲಾಗ್ ಹೊಡೀತಾರೆ. ಇದನ್ನ ನೋಡಿದವರಿಗೆ ದಾಸನ ಜಗ್ಗುದಾದಾ ಟ್ರೈಲರ್ ನೆನಪಾಗಿದೆ.
‘ಧಂ ಬೇಕಲೇ..’ ಎಂದಿದ್ದ ದರ್ಶನ್ಗೆ ಟಾಂಗ್..?
ಹೌದು ದರ್ಶನ್ ನಟನೆಯ ಜಗ್ಗುದಾದ ಸಿನಿಮಾದಲ್ಲಿ ದರ್ಶನ್ ಧಂ ಬೇಕಲೇ ಅನ್ನೋ ಡೈಲಾಗ್ ಹೊಡೆದಿದ್ರು. ಇಲ್ಲಿ ನೋಡಿದ್ರೆ ಕಿಚ್ಚ "ಧಂ ಹೊಡೆಯೋದು ಕಮ್ಮಿ ಮಾಡ್ಬೇಕಲೇ ಅಂತಿದ್ದಾರೆ. ದಾಸ-ಕಿಚ್ಚನ ಫ್ಯಾನ್ಸ್ ಎರಡಕ್ಕೂ ತಾಳೆ ಹಾಕ್ತಾ ಇದ್ದಾರೆ.
ಜೈಲಿನಲ್ಲಿ ಧಂ ಹೊಡೆದು ಎತ್ತಂಗಡಿ ಆಗಿದ್ದ ದಾಸ
ಹೌದು ಕಳೆದ ವರ್ಷ ಪರಪ್ಪನ ಅಗ್ರಹಾರದಲ್ಲಿ, ದರ್ಶನ್ ರೌಡಿಗಳ ಜೊತೆಗೆ ಕುಳಿತು ಧಂ ಹೊಡೀತಾ ಪೋಸ್ ಕೊಟ್ಟಿದ್ರು. ಇದರ ಫೋಟೋಗಳು ವೈರಲ್ ಆದ ಮೇಲೆ ದಾಸನನ್ನ ಬಳ್ಳಾರಿ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು.
ಇದನ್ನೇ ಇಟ್ಟುಕೊಂಡು ಮಾಜಿ ಕುಚಿಕುಗೆ ಧಂ ಹೊಡೆಯೋದು ಕಮ್ಮಿ ಮಾಡು ಅನ್ನೋ ಸಂದೇಶ ಕೊಟ್ರಾ ಸುದೀಪ್..? ಗೊತ್ತಿಲ್ಲ.. ಆಧ್ರೆ ದಾಸನ ಫ್ಯಾನ್ಸ್ಗಂತೂ ಇದು ಟಾಂಗ್ ತರಹ ಕಾಣ್ತಾರೆ.
ಮ್ಯಾಕ್ಸ್ ಗೆದ್ದಾಗ ನಡೆದಿತ್ತು ‘ಬಾಸ್’ ಕಲಹ..!
ಹೌದು ಕಳೆದ ತೆರೆಗೆ ಬಂದಿದ್ದ ಕಿಚ್ಚನ ಮ್ಯಾಕ್ಸ್ ದೊಡ್ಡ ಸಕ್ಸಸ್ ಆಗಿತ್ತು. ಆಗ ಸುದೀಪ್ ತಮ್ಮ ಆಪ್ತ ಪ್ರದೀಪ್ ತಂದ ಒಂದು ಕೇಕ್ನ ಕತ್ತರಿಸಿದ್ರು. ಆ ಕೇಕ್ ಮೇಲೆ 'ಬಾಸಿಸಂಕಾಲ ಮುಗಿಯಿತು, ಮ್ಯಾಕ್ಸಿಮಮ್ ಮಾಸ್ಕಾಲ ಶುರುವಾಯ್ತು' ಅಂತ ಬರೆಯಲಾಗಿತ್ತು. ಇದು ದರ್ಶನ್ ಫ್ಯಾನ್ಸ್ ಕಣ್ಣು ಕೆಂಪಗಾಗಿಸಿತ್ತು.
ದರ್ಶನ್ ಅವರನ್ನ ಅವರ ಅಭಿಮಾನಿಗಳು ಡಿ ಬಾಸ್ ಅಂತ ಕರೀತಾರೆ. ಅದಕ್ಕೆ ಟಾಂಗ್ ಕೊಡಲಿಕ್ಕೆ ಬಾಸಿಂಸಂ ಕಾಲ ಮುಗೀತು ಅಂತ ಕಿಚ್ಚನ ಗ್ಯಾಂಗ್ ಬರೆಸಿದೆ ಅಂತ ಕಿಡಿ ಕಿಡಿಯಾಗಿದ್ರು. ಈ ವಿಚಾರವಾಗಿ ಭರ್ತಿ ಫ್ಯಾನ್ ವಾರ್ ನಡೆದಿದ್ವು.
ಈಗ ನೋಡಿದ್ರೆ ಮಾರ್ಕ್ ಟ್ರೈಲರ್ನಲ್ಲೇ ದಾಸನಿಗೆ ಟಾಂಗ್ ಕೊಟ್ಟಂತಿದೆ. ಸೋ ಮತ್ತೆ ಫ್ಯಾನ್ ವಾರ್ ಶುರುವಾಗಿದೆ. ಇನ್ನೂ ಇದೇ ತಿಂಗಳಲ್ಲೇ ದರ್ಶನ್ ನಟನೆಯ ಡೆವಿಲ್ ಕೂಡ ಬರ್ತಾ ಇದೆ. ಆದ್ರೆ ಡೆವಿಲ್ ಡಿಸೆಂಬರ್ 11ಕ್ಕೆ ಬಂದ್ರೆ ಮಾರ್ಕ್ ಡಿಸೆಂಬರ್ 25ಕ್ಕೆ ಬರ್ತಾ ಇದೆ. ಸೋ ಬಾಕ್ಸಾಫೀಸ್ನಲ್ಲಂತೂ ದಾಸ-ಕಿಚ್ಚನ ನಡುವೆ ವಾರ್ ನಡೆಯೋದಿಲ್ಲ. ಆದ್ರೆ ಡೈಲಾಗ್ ವಾರ್, ಫ್ಯಾನ್ಸ್ ವಾರ್ ಅಂತೂ ಮಾರ್ಕ್ ಟ್ರೈಲರ್ನಿಂದ ಆರಂಭಗೊಂಡಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...


