ಸಿನಿಮಾದಲ್ಲಿ ಕುಡಿತದ ದೃಶ್ಯಗಳನ್ನು ತೋರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಗೆ, ಚಿತ್ರದಲ್ಲಿ ಹಳ್ಳಿಗಳ ನೈಜ ಚಿತ್ರಣವಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಮೊಸರಿನಲ್ಲಿ ಕಲ್ಲು ಹುಡುಕಬೇಡಿ ಎಂದೂ ಟೀಕಿಸಿದ್ದಾರೆ.
ಬೆಂಗಳೂರು: ರಾಜ್ ಬಿ. ಶೆಟ್ಟಿ ಮತ್ತು ಜೆ.ಪಿ.ತುಮಿನಾಡ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ Su From So ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ವೀಕ್ಷಕರು ತಮಗೆ ಇಷ್ಟವಾದ ಭಾಗ, ಡೈಲಾಗ್ ಮತ್ತು ಪಾತ್ರದ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಚಿತ್ರದ ಪ್ರತಿಯೊಂದು ಪಾತ್ರವನ್ನು ಜನರು ಇಷ್ಟಪಡುತ್ತಿದ್ದಾರೆ. ಸಿನಿಮಾದಲ್ಲಿ ಹೀಗೆ ಬಂದು ಹಾಗೆ ಹೋಗುವ ಪಾತ್ರ ನೋಡುಗರಿಗೆ ಇಷ್ಟವಾಗಿದೆ. ಇದೀಗ ಸೌಮ್ಯಾ ಕುಗ್ವೆ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸು ಫ್ರಂ ಸೋ ಸಿನಿಮಾದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಇನ್ನೂ ಕೆಲವರು. ಸಿನಿಮಾವೊಂದು ಎಲ್ಲರಿಗೂ ಇಷ್ಟವಾಗಬೇಕೆಂಬ ನಿಯಮವಿಲ್ಲ ಅಂತಾನೂ ಹೇಳಿದ್ದಾರೆ.
ಸೌಮ್ಯ ಕುಗ್ವೆ ಚಿತ್ರದ ಬಗ್ಗೆ ಹೇಳಿದ್ದೇನು?
ನಿನ್ನೆ 'ಸು ಫ್ರಂ ಸೋ' ಗೆ ಫ್ಯಾಮಿಲಿ ಸಹಿತ ಹೋಗಿದ್ದಾಯಿತು. ಸಿನಿಮಾ ಪೂರ್ಣ ಕುಡುಕರ ಸಾಮ್ರಾಜ್ಯ. ನಮ್ಮಂತವರಿಗಲ್ಲ ಇದು ಅನಿಸಿದ್ದಂತೂ ಸತ್ಯ. ಜೊತೆಗೆ ಮಕ್ಕಳನ್ನೂ ಕರೆದುಕೊಂಡು ಹೋಗಿ ಸಾಕು ಸಾಕಾಯಿತು. ಅಮ್ಮ ಅವರ ಕೈಲಿರುವ ಜ್ಯೂಸು ಕುಡಿದರೆ ಖುಷಿ ಬರುತ್ತಾ ಪ್ರಶ್ನೆಗೆ ಅದು ಒಳ್ಳೆಯದಲ್ಲ ಕೆಟ್ಟದು ಎಂದು ಸಮಜಾಯಿಷಿ ಕೊಟ್ಟರೆ ಮತ್ತೆ ಯಾಕಾಗಿ ಇಡೀ ಸಿನಿಮಾದಲ್ಲಿ ತೋರ್ಸಿದ್ದಾರೆ ಕೇಳಿದ್ದಕ್ಕೆ ಉತ್ತರ ಬರದೆ ಪರದಾಡಿದ್ದಾಯಿತು. ಹೊಟ್ಟೆ ಹುಣ್ಣಾಗುವಷ್ಟು ನಗಬೇಕು ಎಂದು ಎನಿಸಿದ್ದು ಕಷ್ಟಪಟ್ಟು ಟಿಕೆಟ್ ಬುಕ್ ಮಾಡಿ ಮಂಗವಾದ್ದಕ್ಕೆ.....ಛೇ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ Sada P ಎಂಬ ಹೆಸರಿನ ಖಾತೆಯಿಂದ, ಪಾಪ ಇವರಿಗೆಲ್ಲ ಕುಡಿತ ಸೀನ್ ತುಂಬಾ ಬೇಜಾರು ತಂದಿದೆ. ಯಾಕಂದ್ರೆ ಅದರಲ್ಲಿ ಬಟ್ಟೆ ಬಿಚ್ಚಿ ಹೆಣ್ಣಿನ ಅತ್ಯಾ*ಚಾರದ ಸೀನ್, ಹೀರೋ ಹೀರೋಯಿನ್ ಮುತ್ತು ಕೊಡೋದು, ಕಳ್ಳತನ ಸುಳಿಗೆ ಕೊ*ಲೆ, ಇನ್ನೊಬ್ಬರ ಮನೆ ಹಾಳ್ ಕೆಲಸ ರಾಜಕಾರಣಿಗಳು ರಾಜಕೀಯ ಬಂದೂಕುಗಳ ಶಬ್ದ ಲಾಂಗು ಬಟ್ಟೆ ಬಿಚ್ಚಿ ಕುಣಿಯೋ ಸೀನ್ ಯಾವುದೂ ಅಷ್ಟೊಂದು ಇದರಲ್ಲಿ ಇಲ್ಲದೇ ಇರೋದೇ ಕೆಲವರಿಗೆ ಇಷ್ಟ ಇಲ್ಲದೆ ಇರಬಹುದು. ಇದು ಪ್ರಚಲಿತ ಒಂದು ಹಳ್ಳಿಗಳಲ್ಲಿ ನಡೆಯುತ್ತಿರುವ ನೈಜತೆ ಅಷ್ಟೇ, ಇದು ಕಥೆಯಲ್ಲ ಜೀವನ, ಇನ್ನು ಯಾವ ರೀತಿಯ ಸಿನಿಮಾ ಬೇಕೋ ಗೊತ್ತಿಲ್ಲ. ನಂಗಂತೂ ನಮ್ಮ ಊರು ಸುತ್ತ ಮುತ್ತಲ ಚಿತ್ರಣ ಅಂಗಡಿ ರಿಕ್ಷಾ ಮದುವೆ ತಯಾರಿ ಎಲ್ಲಾ ನೆನಪುಗಳು ಮರುಕಳಿಸಿದ್ದಂತು ಸತ್ಯ ಎಂದು ಕಮೆಂಟ್ ಬಂದಿದೆ. ಈ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ ಸೌಮ್ಯ, ಭಾಷೆ ಬಳಕೆ ಬಗ್ಗೆ ಎಚ್ಚರವಿರಲಿ ಎಂದು ತಿರುಗೇಟು ನೀಡಿದ್ದಾರೆ.
ಗಾಯಕ ವಿಜಯ್ ಪ್ರಕಾಶ್ ಕುಡಿತ ಹಾಡು ಹೇಳಿಲ್ಲವೇ?
ಲಕ್ಷ್ಮೀಶ್ರೀ ಉಪಾದ್ಯಯ ಎಂಬವರು ಕಮೆಂಟ್ ಮಾಡಿ, ಈಗ ಎಷ್ಟೋ ಸಿನಿಮಾ ದಲ್ಲಿ ಕುಡಿತದ ದೃಶ್ಯ ಕಾಮನ್ ಆಗಿದೆ. ಗಾಯಕ ವಿಜಯ್ ಪ್ರಕಾಶ್ ಎಷ್ಟು ಕುಡಿತದ ಹಾಡು ಹಾಡಿಲ್ಲ, city ಮಂದಿ ಕುಡಿದ್ರೆ status, ಹಳ್ಳಿ ಜನ ಕುಡಿತದ ದೃಶ್ಯ ಮಾಡಿದ್ರೆ ವ್ಯಾಕರಿಕೆ ಅನ್ನೋ ತರ ಇದೆ ಇಲ್ಲಿನ ಕೆಲವರ ಅಭಿಪ್ರಾಯ. ಈ ಸಿನಿಮಾದಲ್ಲಿ ಕುಡಿತದಿಂದ ಏನೆಲ್ಲಾ ಪಜೀತಿ ಆಗಿದೆ ಅಂತ ಕೂಡ ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಕನ್ನಡದ ಸಿನಿಮಾ ಬಗ್ಗೆ ಬಂದ ಮೊದಲ ನೆಗೆಟಿವ್ ರಿವ್ಯೂ ನಿಮ್ಮದು
ತಾವು ಯಾವುದೋ ಒಂದು ಕಲ್ಪನಾ ಲೋಕದಲ್ಲಿ ಜೀವನ ಮಾಡ್ತ ಇದೀರಾ ಅನ್ಸುತ್ತೆ . ಡ್ರಿಂಕ್ಸ್ ಅನ್ನೋದು ಈ ಸಿನಿಮಾದಲ್ಲಿ ಮಾತ್ರ ನೋಡಿದ್ದ ನಿಮ್ಮ ಮಗು ಅದು ಅಲ್ಲದೆ ಜ್ಯೂಸ್ ಅಂತ ಕೇಳಿತ. 6 ರಿಂದ 60 ರ ವರೆಗೂ ನಗು ಬರಿಸುವ ನಮ್ಮಕನ್ನಡದ ಸಿನಿಮಾ ಬಗ್ಗೆ ಬಂದ ಮೊದಲ ನೆಗೆಟಿವ್ ರಿವ್ಯೂ ನಿಮ್ಮದು . ನಿಮಗೆ ಇದೆಲ್ಲ ಸರಿ ಬರಲ್ಲ OTT ಆ್ಯಪ್ ಲೀ ಸಿನಿಮಾ ನೋಡಿದ್ರೆ ಸಾಕು ಎಂಬ ಕಮೆಂಟ್ ಮದಕರಿ ನಾಯಕ್ ಹೆಸರಿನ ಖಾತೆಯಿಂದ ಬಂದಿದೆ.
ಇಷ್ಟ ಇಲ್ಲ ಅಂದ್ರೆ ಬಿಟ್ಬಿಡಿ
ಇನ್ನುಳಿದಂತೆ ಮೊಸರಲ್ಲಿ ಕಲ್ಲು ಹುಡುಕುಡೋ ಅಂತಾ ಒಂದ್ ಮಾತು ಇದೆ ಅದು ನಿಮಗೆ ಅಂತಾ ಇರಬೇಕು. ಸಿನಿಮಾ ಅದ್ಭುತವಾಗಿತ್ತು. ಇರಲಿ ಇದು ನಿಮ್ಮ ಅನಿಸಿಕೆ. ಆದ್ರೆ ಇಡೀ ರಾಜ್ಯದ ಜನ ಎಂಜಾಯ್ ಮಾಡುತಿದ್ದಾರೆ. ಇಷ್ಟ ಇಲ್ಲ ಅಂದ್ರೆ ಬಿಟ್ಬಿಡಿ. ಕೆಲವರು ಹೇಳುವುದನ್ನು ಕೇಳಿದರೆ ಸಿನಿಮಾ ನೋಡಬೇಕು ಎಂದು ಅನಿಸಿತು. ಈಗ ಹೇಳುವ ಕಾಮೆಂಟ್ಸ್ ನೋಡಿದರೆ ಬೇಡ ಅಂತ ಆಗುತ್ತೆ ಎಂಬ ಹಲವು ಕಮೆಂಟ್‌ಗಳು ಬಂದಿವೆ. ಈವರೆಗೆ ಈ ಪೋಸ್ಟ್‌ಗೆ 600ಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ.


