Gadag Pakistan flag incident: ಈದ್ ಮಿಲಾದ್‌ನಂದು ಕಾರಿನಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶಿಸಿದ ಇಬ್ಬರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗದಗ ಜಿಲ್ಲಾ ವಕೀಲರ ಸಂಘವು ಆರೋಪಿಗಳ ಪರ ವಕಾಲತ್ತು ವಹಿಸದಿರಲು ತೀರ್ಮಾನಿಸಿದೆ.
ಗದಗ (ಸೆ.12): ಈದ್ ಮಿಲಾದ್ ದಿನದಂದು ಕಾರ್ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶಿಸಿ ಉದ್ಧಟತನ ಮೆರೆದ ಇಬ್ಬರು ಅಪ್ರಾಪ್ತರ ವಿರುದ್ಧ ವಕಾಲತ್ತು ವಹಿಸದಿರಲು ಗದಗ ಜಿಲ್ಲಾ ವಕೀಲರ ಸಂಘ ಒಮ್ಮತದ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ಕಲ್ಲೂರು ಏಷ್ಯನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದು, ಇದೇ ಸೆಪ್ಟೆಂಬರ್ 5, 2025 ರಂದು ನಡೆದ ಈ ಘಟನೆಯಲ್ಲಿ, ಇಬ್ಬರು ಅಪ್ರಾಪ್ತರು ತಮ್ಮ ಕಾರಿನ ನಂಬರ್ ಪ್ಲೇಟ್‌ಗೆ ಪಕ್ಕದಲ್ಲಿ 5/9/25 ದಿನಾಂಕ ನಮೂದಿಸಿ ಪಾಕ್ ಧ್ವಜವನ್ನು ಪ್ರದರ್ಶಿಸಿದ್ದರು. ಈ ಘಟನೆಯ ಫೋಟೋವನ್ನು 'ತಹಸೀಮ್' ಎಂಬ ಇನ್‌ಸ್ಟಾಗ್ರಾಮ್ ಐಡಿಯಿಂದ ಹಂಚಿಕೆ ಮಾಡಲಾಗಿದ್ದು, 'ಅಬ್ದುಲ್' ಎಂಬ ಮತ್ತೊಂದು ಖಾತೆಯಿಂದಲೂ ಶೇರ್ ಮಾಡಲಾಗಿತ್ತು.

ಫೋಟೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಗದಗ ಶಹರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ, ಗದಗ ಜಿಲ್ಲಾ ವಕೀಲರ ಸಂಘವು ಆರೋಪಿಗಳ ಪರ ವಕಾಲತ್ತು ವಹಿಸದಿರಲು ತೀರ್ಮಾನಿಸಿದ್ದು, ಈ ಘಟನೆಯು ಜಿಲ್ಲೆಯಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

