04:06 PM (IST) Dec 16

Karnataka News Live 16 December 2025ಮುಡಾ ಹಗರಣದಲ್ಲಿ ಕೋರ್ಟ್ ಹೊಸ ಆದೇಶ, ಜೈಲಲ್ಲಿದ್ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಮತ್ತೆ ಪೊಲೀಸ್‌ ಕಸ್ಟಡಿಗೆ!

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ, ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 24 ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೋರಿದ್ದು, ಡಿ.18 ರಂದು ಅಂತಿಮ ತನಿಖಾ ವರದಿ ಸಲ್ಲಿಕೆಯಾಗಲಿದೆ. 

Read Full Story
03:55 PM (IST) Dec 16

Karnataka News Live 16 December 2025ಲೋಕಾಯುಕ್ತ ದಾಳಿ - ₹50 ಸಾವಿರ ಹಣ ಟಾಯ್ಲಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ ಕೃಷಿ ಅಧಿಕಾರಿ!

ಬೆಳಗಾವಿ ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜಶೇಖರ ಬಿಜಾಪುರ ಅವರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ವೇಳೆ ಸಾಕ್ಷ್ಯ ನಾಶಪಡಿಸಲು ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಫ್ಲಶ್ ಮಾಡಲು ಯತ್ನಿಸಿದ್ದು, ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ.
Read Full Story
03:38 PM (IST) Dec 16

Karnataka News Live 16 December 2025ಕೊಪ್ಪಳದ ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿ ಹುಳು ಪತ್ತೆ; ಸಚಿವರೇನ್ ನಿದ್ದೆ ಮಾಡ್ತಿದ್ದಾರಾ?

ಕೊಪ್ಪಳ ತಾಲೂಕಿನ ಬಿಸರಹಳ್ಳಿ ಮತ್ತು ಹೊಸಲಿಂಗಾಪುರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಮತ್ತು ನುಶಿಗಳು ಪತ್ತೆಯಾಗಿವೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Read Full Story
02:53 PM (IST) Dec 16

Karnataka News Live 16 December 2025ಮೆಜೆಸ್ಟಿಲ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಬಾಲಕಿ; ದೆಹಲಿ, ಬೆಂಗಳೂರು ಸೇರಿ 2 ವರ್ಷ ವೇಶ್ಯಾವಾಟಿಕೆ ನರಕ ದರ್ಶನ!

ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿಯ ರಕ್ಷಣೆಯಿಂದ, ದೆಹಲಿ ಮತ್ತು ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಜಾಲವೊಂದು ಬಯಲಾಗಿದೆ. ದೆಹಲಿ ಹಾಗೂ ಬೆಂಗಳೂರಿನ ಸ್ಪಾದಲ್ಲಿ ಬಾಲಕಿಯನ್ನು ಕೂಡಿಹಾಕಿ ದಂಧೆ ನಡೆಸಿದ್ದಾರೆ.

Read Full Story
02:44 PM (IST) Dec 16

Karnataka News Live 16 December 2025BBK 12 - ಅಯ್ಯೋ ಭಗವಂತ ಇದೇನಿದು? ಮನದಲ್ಲಿದ್ದ ಮಾತು ಬಿಚ್ಚಿಟ್ಟ ಚೈತ್ರಾ; ರಜತ್ ಶಾಕ್!

ಬಿಗ್‌ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಡುವೆ ತೀವ್ರ ಜಗಳ ನಡೆದಿದೆ. ಆಟದ ವೇಳೆ ರಜತ್ 'ಸುಳ್ಳಿ' ಎಂದಿದ್ದಕ್ಕೆ ಕೆರಳಿದ ಚೈತ್ರಾ, ಅವರ ಕುಟುಂಬದ ಬಗ್ಗೆ ಮಾತನಾಡಿದ್ದು, ಇದು ದೊಡ್ಡ ಮಾತಿನ ಚಕಮಕಿಗೆ ಕಾರಣವಾಯಿತು.
Read Full Story
02:23 PM (IST) Dec 16

Karnataka News Live 16 December 2025ಡಿಜಿಟಲ್ ಅರೆಸ್ಟ್‌ಗೆ ಹೆದರಿ ಕೋಟಿಗಟ್ಟಲೆ ಬೆಲೆಬಾಳುವ ಸೈಟ್, ಮನೆ ಮಠ ಮಾರಿದ ಬೆಂಗಳೂರು ಮಹಿಳಾ ಟೆಕ್ಕಿ!

ಬೆಂಗಳೂರಿನಲ್ಲಿ "ಡಿಜಿಟಲ್ ಅರೆಸ್ಟ್" ಎಂಬ ಹೊಸ ಸೈಬರ್ ವಂಚನೆಗೆ ಮಹಿಳಾ ಟೆಕ್ಕಿಯೊಬ್ಬರು ಬಲಿಯಾಗಿದ್ದಾರೆ. ಮುಂಬೈ ಪೊಲೀಸರ ಸೋಗಿನಲ್ಲಿ ಬೆದರಿಸಿದ ಸೈಬರ್ ಖದೀಮರು, ಆಕೆಯಿಂದ ಫ್ಲಾಟ್ ಮತ್ತು ಸೈಟ್‌ಗಳನ್ನು ಮಾರಾಟ ಮಾಡಿಸಿ ಹಂತ ಹಂತವಾಗಿ ಸುಮಾರು ₹2 ಕೋಟಿ ಹಣವನ್ನು ದೋಚಿದ್ದಾರೆ.
Read Full Story
01:38 PM (IST) Dec 16

Karnataka News Live 16 December 2025ಮೂಡಿಗೆರೆ - ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಮನೆ ಭೋಗ್ಯದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಮನೆ ಖಾಲಿ ಮಾಡುವಂತೆ ಕೇಳಿದ್ದಕ್ಕೆ ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟಿದ್ದು, ಇದು ಗಲಾಟೆಗೆ ಕಾರಣವಾಗಿದೆ. ಈ ವೇಳೆ ಯುವಕನೊಬ್ಬ ಮಹಿಳೆಯ ಜಡೆ ಹಿಡಿದು ಎಳೆದು ಹಲ್ಲೆ ನಡೆಸಿದ್ದಾನೆ ಎಂದು ಆರೋಪ.

Read Full Story
01:30 PM (IST) Dec 16

Karnataka News Live 16 December 2025ಮೆಸ್ಸಿ ಹೈದರಾಬಾದ್ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿಯನ್ನು ಪ್ರಧಾನಿ ಎಂದು ಕರೆದ ಟ್ರಾನ್ಸ್‌ಲೇಟರ್! ವಿಡಿಯೋ ವೈರಲ್

ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ತಮ್ಮ ಭಾರತ ಪ್ರವಾಸದ ವೇಳೆ ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಅವರ ಸ್ಪ್ಯಾನಿಶ್ ಭಾಷಣವನ್ನು ಭಾಷಾಂತರಿಸುವಾಗ, ಭಾಷಾಂತರಕಾರರೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು 'ಪ್ರಧಾನ ಮಂತ್ರಿ' ಎಂದು ತಪ್ಪಾಗಿ ಉಲ್ಲೇಖಿಸಿದ್ದು ವೈರಲ್ ಆಗಿದೆ.

Read Full Story
01:19 PM (IST) Dec 16

Karnataka News Live 16 December 2025Bengaluru - ಹಾರ್ಟ್‌ ಅಟ್ಯಾಕ್‌ ಆಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿ, ಪತ್ನಿಯ ಗೋಳಾಟ ಕೇಳಿಯೂ ನೆರವಿಗೆ ಬಾರದ ಜನ!

ಬೆಂಗಳೂರಿನ ಬನಶಂಕರಿ ಬಳಿ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ 34 ವರ್ಷದ ವ್ಯಕ್ತಿಗೆ ಹೃದಯಾಘಾತವಾಗಿದೆ. ಪತ್ನಿ ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಮುಂದೆ ಬಾರದ ಕಾರಣ, ಅವರು ರಸ್ತೆಯಲ್ಲಿಯೇ ಪ್ರಾಣ ಬಿಟ್ಟ ದಾರುಣ ಘಟನೆ ನಡೆದಿದೆ.
Read Full Story
01:15 PM (IST) Dec 16

Karnataka News Live 16 December 2025ಮಗಳಿಗಾಗಿ ಸೀರಿಯಲ್ ನಟಿಯಾಗಿರೋ ಪತ್ನಿಯನ್ನೇ ಕಿಡ್ನಾಪ್ ಮಾಡಿದ ನಿರ್ಮಾಪಕ - ಅತ್ತೆಗೆ ಬೆದರಿಕೆ

ಕೌಟುಂಬಿಕ ಕಲಹದಿಂದ ಬೇರ್ಪಟ್ಟಿದ್ದನಿರ್ಮಾಪಕ ಹರ್ಷವರ್ಧನ್, ತನ್ನ ಮಗಳಿಗಾಗಿ ಕಿರುತೆರೆ ನಟಿ ಪತ್ನಿ ಚೈತ್ರಾಳನ್ನು ಅಪಹರಿಸಿದ್ದಾರೆ. ಸೀರಿಯಲ್ ಶೂಟಿಂಗ್ ನೆಪದಲ್ಲಿ ಮೈಸೂರಿಗೆ ಕರೆಸಿ, ಪತ್ನಿಯನ್ನು ಬಿಡುಗಡೆ ಮಾಡಲು ಮಗಳನ್ನು ತನಗೆ ನೀಡುವಂತೆ ಬೇಡಿಕೆಯಿಟ್ಟ ಘಟನೆ ನಡೆದಿದೆ. 

Read Full Story
01:08 PM (IST) Dec 16

Karnataka News Live 16 December 2025Darshan ಅರೆಸ್ಟ್‌ ಆದ್ರು; ಮಗ ವಿನೀಶ್‌ ಹ್ಯಾಂಡಲ್‌ ಮಾಡೋದು ಮಾತ್ರ...; ನೈಜ ಘಟನೆ ತಿಳಿಸಿದ Vijayalakshmi

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ತೂಗುದೀಪ ಅವರು ಸದ್ಯ ಜೈಲಿನಲ್ಲಿದ್ದಾರೆ. ಇವರು ಅರೆಸ್ಟ್‌ ಆದಾಗ ಮಗನನ್ನು ಹ್ಯಾಂಡಲ್‌ ಮಾಡೋದು ತುಂಬ ಕಷ್ಟ ಆಗಿತ್ತು ಎಂದು ವಿಜಯಲಕ್ಷ್ಮೀ ಅವರು ನಟಿ ರಚನಾ ರೈ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

Read Full Story
01:02 PM (IST) Dec 16

Karnataka News Live 16 December 2025ಮಾರತಹಳ್ಳಿ ಹೊಟೇಲ್ ಕಟ್ಟಡದಿಂದ ಯುವತಿ ಜಿಗಿತ ಪ್ರಕರಣ, ಪೊಲೀಸರ ಮೇಲೆ ಕಮಿಷನರ್‌ಗೆ ಮೂಡಿದ ಅನುಮಾನ?

ಬೆಂಗಳೂರಿನ ಮಾರತ್ ಹಳ್ಳಿ ಹೋಟೆಲ್‌ನಿಂದ ಯುವತಿ ಜಿಗಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರ ಆಗಮನದ ನಂತರ ಈ ಘಟನೆ ನಡೆದಿದ್ದು, ಅವರ ಪಾತ್ರದ ಬಗ್ಗೆಯೇ ಗಂಭೀರ ಅನುಮಾನಗಳು ಮೂಡಿವೆ. ಈ ಹಿನ್ನೆಲೆಯಲ್ಲಿ, ಪೊಲೀಸ್ ಕಮಿಷನರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

Read Full Story
12:47 PM (IST) Dec 16

Karnataka News Live 16 December 2025ಜನ್ಮದಿನದಂದೇ ಹೆಚ್‌ಡಿಕೆ ತೋಳಿಗೆ ಬಂತು ದೈವಿ ಶಕ್ತಿ! 'ಶಿವ ತಾಯತ' ಕಟ್ಟಿದ ಬಿಜೆಪಿ ಕಾರ್ಯಕರ್ತರು!

HD Kumaraswamy birthday in Mandya: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕರ್ತರೊಬ್ಬರು ಅವರಿಗೆ ವಿಶೇಷ 'ಶಿವ ತಾಯತ'ವನ್ನು ಉಡುಗೊರೆಯಾಗಿ ನೀಡಿದರು.

Read Full Story
12:36 PM (IST) Dec 16

Karnataka News Live 16 December 2025ಪರಭಾಷೆಗೆ ಹಾವಳಿ ಕೊಡೋ ಹಾಗೆ ರೆಡಿಯಾದ ಕನ್ನಡದ 45 Movie - ಕೆಲವೇ ಗಂಟೆಗಳಲ್ಲಿ ಯುಟ್ಯೂಬ್‌ ತತ್ತರ; ಕಥೆ ಏನು?

45 Movie Trailer: ನಟ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ, ಎಂ. ರಮೇಶ್ ರೆಡ್ಡಿ ಅವರು ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ‘45’ ಸಿನಿಮಾ ಸದ್ದು ಮಾಡುತ್ತಿದೆ. ಡಿಸೆಂಬರ್ 25 ರಂದು ತೆರೆಗೆ ಬರುತ್ತಿದೆ. 

Read Full Story
12:09 PM (IST) Dec 16

Karnataka News Live 16 December 2025ಸಿಎಂ ಸ್ಥಾನದ ಜಟಾಪಟಿ - 'ಉರಿತೀರೋದಕ್ಕೆ ಉಪ್ಪು ಹಾಕಬೇಡ' ಎಂದ ಸಿಎಂ, 'ಹಾಗಾದ್ರೆ ಉರೀತಿದೆಯಾ?' - ಅಶೋಕ್..

ವಿಧಾನಸಭೆಯಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ಸ್ವಪಕ್ಷೀಯ ಶಾಸಕ ಕುಣಿಗಲ್ ರಂಗನಾಥ್ ಅವರೇ ಸರ್ಕಾರದ ವಿರುದ್ಧ ಅಸಮಾಧಾನ.. ಈ ಚರ್ಚೆಯು ಮುಖ್ಯಮಂತ್ರಿ ಸ್ಥಾನದ ಜಟಾಪಟಿಯಾಗಿ ಮಾರ್ಪಟ್ಟಾಗ, 'ಐದು ವರ್ಷ ನಾನೇ ಸಿಎಂ' ಎಂದು ಸಿದ್ದರಾಮಯ್ಯ ವಿಪಕ್ಷಗಳಿಗೆ ಸ್ವಪಕ್ಷೀಯರಿಗೆ ಸ್ಪಷ್ಟ ಸಂದೇಶ ರವಾನಿಸಿದರು.

Read Full Story
11:58 AM (IST) Dec 16

Karnataka News Live 16 December 2025ಧರ್ಮಸಂಕಟದಲ್ಲಿ Bigg Boss; ಸೀಕ್ರೇಟ್‌ ರೂಮ್‌ಗೆ ಹಾಕಿದ್ಯಾಕೆ? ಸತ್ಯ ಧ್ರುವಂತ್‌ಗೆ ಗೊತ್ತಾಯ್ತು!

BBK 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಧ್ರುವಂತ್‌, ರಕ್ಷಿತಾ ಶೆಟ್ಟಿ ಮಧ್ಯೆ ಮೊದಲಿನಿಂದಲೂ ಜಗಳ ಆಗುತ್ತಲೇ ಇದೆ. ಈಗ ಸೀಕ್ರೆಟ್‌ ರೂಮ್‌ನಲ್ಲಿ ಇವರು ಕಿತ್ತಾಡುತ್ತಲೇ ಇದ್ದಾರೆ. ಇವರು ಸೀಕ್ರೆಟ್‌ ರೂಮ್‌ಗೆ ಹೋಗಿದ್ದು ಯಾಕೆ? ಇನ್ನು ಬಿಗ್‌ ಬಾಸ್‌ಗೆ ಧರ್ಮ ಸಂಕಟ ಆಗಿದ್ದು ಯಾಕೆ?

Read Full Story
11:36 AM (IST) Dec 16

Karnataka News Live 16 December 2025ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ - ಇಮೇಲ್‌ನಲ್ಲಿ ಡಿಎಂಕೆ ವಿರುದ್ಧ ಅಸಂಬದ್ಧ ಆರೋಪ

ಮಂಗಳವಾರ ಬೆಳಗ್ಗೆ ಭಟ್ಕಳ ತಹಶೀಲ್ದಾರ್ ಕಚೇರಿಗೆ ಈಮೇಲ್ ಮೂಲಕ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಬಂದಿದ್ದು, ಆವರಣದಲ್ಲಿ ಆತಂಕ ಸೃಷ್ಟಿಯಾಗಿದೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಈಮೇಲ್‌ನಲ್ಲಿ ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ಧವೂ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ.
Read Full Story
10:31 AM (IST) Dec 16

Karnataka News Live 16 December 202545 Movie Trailer - ಚೆಲುವೆಯ ನೋಟ ಚೆನ್ನ..ಸಿನಿಮಾ ನೋಡಲೇಬೇಕು ಎಂದು ಸೈಕ್‌ ಮಾಡಿದ ಕಾರಣಗಳಿವು!

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ 45 ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಇಷ್ಟುದಿನಗಳ ಸಂಗೀತ ನಿರ್ದೇಶನ ಮಾಡುತ್ತಿದ್ದ ಅರ್ಜುನ್‌ ಜನ್ಯ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಈ ಸಿನಿಮಾ ಟ್ರೇಲರ್‌ ನೋಡಿ ಅನೇಕರು ಖುಷಿಪಟ್ಟಿದ್ದು, ಶಿವರಾಜ್‌ಕುಮಾರ್‌ ಲುಕ್‌ಗೆ ಕಳೆದು ಹೋಗಿದ್ದಾರೆ. 

Read Full Story
10:26 AM (IST) Dec 16

Karnataka News Live 16 December 2025ಆರ್‌ಸಿಬಿ ಫ್ಯಾನ್ಸ್ ಗುಡ್ ನ್ಯೂಸ್! ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ? KCSA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸುಳಿವು!

ಈ ಬಾರಿಯ IPL ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಬಿಸಿಸಿಐ ಜೊತೆ ಮಾತುಕತೆ ನಡೆಸುತ್ತಿದೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಪ್ರಕಾರ, ರಾಜ್ಯ ಸರ್ಕಾರದಿಂದಲೂ ಇದಕ್ಕೆ ಹಸಿರು ನಿಶಾನೆ ದೊರೆತಿದ್ದು, ಶೀಘ್ರ ದಿನಾಂಕ ನಿಗದಿಯಾಗುವ ನಿರೀಕ್ಷೆ

Read Full Story
09:54 AM (IST) Dec 16

Karnataka News Live 16 December 2025The Devil Movie ಶೋಗೆ ಚಪ್ಪಲಿ ಹಾಕ್ಬೇಡ ಅಂತ ಮಗ ವಿನೀಶ್‌ಗೆ ಹೇಳೋಕೆ ಕಾರಣವಿದೆ - Vijayalakshmi Darshan

Darshan Thoogudeepa Wife Vijayalakshmi: ನಟ ದರ್ಶನ್‌ ತೂಗುದೀಪ ‘ದಿ ಡೆವಿಲ್’‌ ಸಿನಿಮಾ ರಿಲೀಸ್‌ ಆಗಿದೆ. ಒಂದು ಕಡೆ ಅಭಿಮಾನಿಗಳು, ಇನ್ನೊಂದು ಕಡೆ ನೆಗೆಟಿವ್‌ ಪ್ರತಿಕ್ರಿಯೆ ಬಗ್ಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಮಾತನಾಡಿದ್ದಾರೆ.

Read Full Story