ಭಾಗ್ಯಳ ತಂಗಿ ಪೂಜಾಳ ವಿವಾಹಕ್ಕೆ ಬಂದ ಹುಡುಗನ ಪ್ರಾಮಾಣಿಕತೆಗೆ ಭಾಗ್ಯ ಮೆಚ್ಚುಗೆ ವ್ಯಕ್ತಪಡಿಸಿದಳು. ಆದರೆ, ಭಾಗ್ಯಳನ್ನು ತಾಂಡವ್‌ ಬಿಟ್ಟಿದ್ದಾನೆಂದು ತಿಳಿದ ಹುಡುಗನ ಕಡೆಯವರು ಸಂಬಂಧ ತಿರಸ್ಕರಿಸಿದರು. ತಾಂಡವ್‌ ಭಾಗ್ಯಳನ್ನು ಅವಮಾನಿಸಿ, ಪೂಜಾಳ ಮದುವೆಗೆ ಅಡ್ಡಿಪಡಿಸಿದನು. ಪೂಜಾ ಸಹ ಸಂಬಂಧ ತಿರಸ್ಕರಿಸಿದಳು.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳ ತಂಗಿ ಪೂಜಾಳನ್ನು ನೋಡಲು ಹುಡುಗನೊಬ್ಬ ಬಂದಿದ್ದನು. ಆ ಹುಡುಗ ಹೇಗೆ ಅಂತ ಚೆಕ್‌ ಮಾಡಿದ ಬಳಿಕವೇ ಮದುವೆಗೆ ಒಪ್ಪಿಗೆ ಕೊಡಬೇಕು ಅಂತ ಭಾಗ್ಯ ಹೇಳಿದ್ದಳು. ಹುಡುಗನ ಮನೆಯವರ ಮುಂದೆ ಭಾಗ್ಯ ಎಲ್ಲವನ್ನು ಹೇಳಿದ್ದನು. ಅಷ್ಟೇ ಅಲ್ಲದೆ ಹುಡುಗ ಕೂಡ “ತಾನು ಸ್ಟಾರ್ಟಪ್‌ನಲ್ಲಿ ಕೆಲಸ ಮಾಡ್ತೀನಿ, ನಮ್ಮ ಮನೆಯಲ್ಲಿ ಆಸ್ತಿ ಇದೆ” ಎಂದು ಪ್ರಾಮಾಣಿಕವಾಗಿ ಹೇಳಿದ್ದನು. ಈ ಹುಡುಗನ ಪ್ರಾಮಾಣಿಕತೆಗೆ ಭಾಗ್ಯ 100ಕ್ಕೆ 100 ಮಾರ್ಕ್ಸ್‌ ಕೊಟ್ಟು ಮದುವೆಗೆ ಒಪ್ಪಿಗೆ ಸೂಚಿಸಿದ್ದಳು.

ಪೂಜಾ ಜೊತೆ ಮದುವೆ ಬೇಡ! 
ಅದೇ ಸಮಯಕ್ಕೆ ಹುಡುಗನ ಸೋದರಮಾವ ಎಂಟ್ರಿ ಕೊಟ್ಟಿದ್ದಾನೆ. “ಈ ಮದುವೆ ಬೇಡ. ಮಾತುಕತೆಯನ್ನು ಅರ್ಧಕ್ಕೆ ನಿಲ್ಲಿಸೋಣ. ಅಕ್ಕ ಭಾಗ್ಯ ಗಂಡನನ್ನು ಬಿಟ್ಟಿದ್ದಾಳೆ. ಈಗ ಇವಳ ತಂಗಿಯನ್ನು ನಾವು ನಮ್ಮ ಮನೆಗೆ ಸೊಸೆಯಾಗಿ ಕರೆತರೋದು ಬೇಡ” ಎಂದು ಹೇಳಿದ್ದನು.

ಬಾಯಿಗೆ ಬಂದಹಾಗೆ ಮಾತಾಡಿದ ತಾಂಡವ್!‌ 
ಇಂಥ ಸಂದರ್ಭಕ್ಕೆ ತಾಂಡವ್‌ ಸದಾ ಕಾಲ ಕಾಯುತ್ತಿರುತ್ತಾನೆ. ಆಗ ಭಾಗ್ಯಳ ಗಂಡ ತಾಂಡವ್‌ ಅಲ್ಲಿಗೆ ಬಂದಿದ್ದಲ್ಲದೆ, “ನಾನೇ ಭಾಗ್ಯಳ ಗಂಡ. ನಾನು ಭಾಗ್ಯ ದೂರ ಆಗಿದ್ದೇವೆ. ನನಗೆ ಬೇರೆ ಮದುವೆ ಆಗಿದೆ. ನಾನು ತಾಳಿದ ಕಟ್ಟಿಯನ್ನು ಎಲ್ಲರ ಮುಂದೆ ತೆಗೆದು ನನ್ನ ಕೈಯಲ್ಲಿಟ್ಟು ಹೊರಟು ಹೋದಳು. ನಾವು ದೂರ ಆಗೋದಿಕ್ಕೆ ಭಾಗ್ಯಳೇ ಕಾರಣ. ಭಾಗ್ಯ ಎಲ್ಲರ ತಲೆಯಲ್ಲಿಯೂ ವಿಷ ತುಂಬಿಸಿ, ಎಲ್ಲವನ್ನು ಎಲ್ಲರನ್ನು ಕಂಟ್ರೋಲ್‌ಗೆ ತಗೊಳ್ತಾಳೆ” ಎಂದು ಅವನು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. 

ಪೂಜಾಳನ್ನು ಹೀಯಾಳಿಸಿದ ಗಂಡಿನ ಕಡೆಯವರು! 
ಅಕ್ಕನೇ ಹೀಗೆ, ತಂಗಿ ಹೇಗೋ ಎಂದು ಪೂಜಾಳನ್ನು ಗಂಡಿನ ಕಡೆಯವರು ಅನುಮಾನದಿಂದ ನೋಡಿದ್ದಾರೆ. ಯಾರು ಎಷ್ಟೇ ಹೇಳಿದರೂ ಕೂಡ ಗಂಡಿನ ಮನೆಯವರು ಪೂಜಾ ಸಂಬಂಧವನ್ನು ತಿರಸ್ಕರಿಸಿದ್ದಾರೆ. ಹುಡುಗನಿಗೆ ಪೂಜಾಳನ್ನು ಮದುವೆ ಆಗೋ ಆಸೆಯಿದ್ದರೂ ಕೂಡ ಅವನ ತಂದೆ-ತಾಯಿ ಮಾತ್ರ ಈ ಸಂಬಂಧ ಒಪ್ಪಲು ರೆಡಿಯೇ ಇರಲಿಲ್ಲ. “ನನ್ನ ಅಕ್ಕಳಿಗೆ ಗೌರವ ಕೊಡದವರು ನನಗೆ ಬೇಕಾಗಿಲ್ಲ. ನನಗೆ ಈ ಮದುವೆ ಬೇಡ. ನನ್ನ ಅಕ್ಕನಿಗೆ ಎಲ್ಲಿ ಮರ್ಯಾದೆ ಇಲ್ಲವೋ, ಅಲ್ಲಿ ನನ್ನ ಚಪ್ಪಲಿಯನ್ನು ಬಿಡೋದಿಲ್ಲ” ಎಂದು ಪೂಜಾ ಕೂಡ ಗಟ್ಟಿಯಾಗಿ ಹೇಳಿದ್ದಾಳೆ. 

ತಾಂಡವ್‌ ಹೇಳೋದೇನು? 
“ನಿನ್ನನ್ನು ಗಂಡ ಬಿಟ್ಟವಳು ಅಂತ ಎಲ್ಲರೂ ಬೈದು ಹೋದ್ರು. ಈಗಲಾದರೂ ಅರ್ಥ ಮಾಡಿಕೋ, ನನಗೆ ಕ್ಷಮೆ ಕೇಳು. ಗಂಡ ಇಲ್ಲದೆ ಬದುಕೋಕೆ ಆಗೋದಿಲ್ಲ ಎಂದು ನಾನು ಸಾಬೀತುಮಾಡುವೆ” ಎಂದು ತಾಂಡವ್‌ ಇನ್ನೊಂದಿಷ್ಟು ಹಾರಾಡಿ ಮಾತಾಡಿದ್ದಾನೆ. 

ಪೂಜಾ ಕಥೆ ಏನು?
ಸದ್ಯ ತನ್ನ ಕಾಲೇಜು ಸೀನಿಯರ್‌ ಕಟ್ಟಿದ ಕಂಪೆನಿಯಲ್ಲಿ ಪೂಜಾ ಕೆಲಸ ಮಾಡುತ್ತಿದ್ದಾಳೆ. ಇವರಿಬ್ಬರ ನಡುವೆ ಆಗಾಗ ಹಾವು-ಮುಂಗುಸಿ ಜಗಳ ನಡೆಯುತ್ತಿರುತ್ತದೆ. ಮುಂದೆ ಇವರಿಬ್ಬರೇ ಪ್ರೀತಿಸಿ ಮದುವೆಯಾಗೋ ಚಾನ್ಸ್‌ ಇದೆ.

ಧಾರಾವಾಹಿ ಕಥೆ ಏನು?
ತಾಂಡವ್-ಭಾಗ್ಯಳಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಯಾವಾಗಲೂ ಭಾಗ್ಯಳನ್ನು ಹೀಯಾಳಿಸೋ ತಾಂಡವ್‌ ಈಗ ಇನ್ನೊಂದು ಹುಡುಗಿ ಶ್ರೇಷ್ಠಳನ್ನು ಮದುವೆ ಆಗಿದ್ದಾನೆ. ಭಾಗ್ಯ ಹಾಳಾಗಬೇಕು, ಅವಳಿಗೆ ಅವಮಾನ ಆಗಬೇಕು ಎನ್ನೋದು ಅವನ ಉದ್ದೇಶ. ಭಾಗ್ಯ ಸೋಲಬೇಕು ಅಂತ ಅವನು ಏನು ಬೇಕಿದ್ರೂ ಮಾಡ್ತಾನೆ. ಈಗ ಭಾಗ್ಯಳ ತಂಗಿ ಪೂಜಾ ಮದುವೆಗೆ ಕಲ್ಲು ಹಾಕುತ್ತಿದ್ದಾನೆ.

ಪಾತ್ರಧಾರಿಗಳು
ತಾಂಡವ್-‌ ಸುದರ್ಶನ್‌ ರಂಗಪ್ರಸಾದ್‌
ಭಾಗ್ಯ- ಸುಷ್ಮಾ ಕೆ ರಾವ್‌
ಪೂಜಾ- ಆಶಾ ಅಯ್ಯನರ್‌
ಶ್ರೇಷ್ಠ- ಕಾವ್ಯ ಗೌಡ