ಗಿಣಿರಾಮ ಖ್ಯಾತಿಯ ನಯನಾ ನಾಗರಾಜ್, ಕುಕ್ಕಿಂಗ್ ಯೂಟ್ಯೂಬರ್ಸ್ ಗೆ ಸಲಹೆ ನೀಡಿದ್ದಾರೆ. ಅಡುಗೆ ಮಾಡುವಾಗ ಏನು ಮಾಡ್ಬೇಕು, ಏನು ಮಾಡ್ಬಾರದು, ಅದ್ರಿಂದ ವೀವರ್ಸ್ ಗೆ ಏನು ಸಮಸ್ಯೆ ಆಗುತ್ತೆ ಅನ್ನೋದನ್ನು ತಿಳಿಸಿದ್ದಾರೆ.
ಪಾಪಾ ಪಾಂಡು ಹಾಗೂ ಗಿಣಿರಾಮ ಸೀರಿಯಲ್ ಮೂಲಕ ಪ್ರಸಿದ್ಧಿಗೆ ಬಂದಿದ್ದ ನಟಿ ನಯನಾ ನಾಗರಾಜ್ (Nayana Nagaraj) ಈಗ ಬಣ್ಣದ ಬದುಕಿನಿಂದ ದೂರವಿದ್ದಾರೆ. ಸೀರಿಯಲ್ ಬದಲು ಸಂಗೀತದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಯನಾ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ಆಗಾಗ ಅನೇಕ ವಿಷ್ಯಗಳನ್ನು ಹಂಚಿಕೊಳ್ಳುವ ನಯನಾ ನಾಗರಾಜ್ ಈ ಬಾರಿ ಯೂಟ್ಯೂಬರ್ಸ್ ಗೆ ಮಹತ್ವದ ಸಲಹೆ ನೀಡಿದ್ದಾರೆ.
ಯೂಟ್ಯೂಬರ್ಸ್ ಗೆ ನಯನಾ ನಾಗರಾಜ್ ಹೇಳಿದ್ದೇನು?
ನಯನಾ ನಾಗರಾಜ್ ಕೂಡ ಎಲ್ಲರಂತೆ ಯೂಟ್ಯೂಬ್, ಇನ್ಸ್ಟಾಗ್ರಾಮ್ ನಲ್ಲಿ ಬರುವ ಅಡುಗೆಗಳನ್ನು ನೋಡ್ತಾರೆ. ಬರೀ ನೋಡೋದು ಮಾತ್ರವಲ್ಲ ಕೆಲ ರೆಸಿಪಿ ಟ್ರೈ ಕೂಡ ಮಾಡ್ತಾರೆ. ಆದ್ರೆ ಕುಕ್ಕಿಂಗ್ ಯೂಟ್ಯೂಬರ್ಸ್ ಮಾಡುವ ತಪ್ಪನ್ನು ಈ ಬಾರಿ ನಯನಾ ಎಲ್ಲರ ಮುಂದಿಟ್ಟಿದ್ದಾರೆ. ಅಲ್ದೆ ಇನ್ಮುಂದೆ ಅದನ್ನು ಮಾಡ್ಬೇಡಿ ಅಂತ ಸಲಹೆ ನೀಡಿದ್ದಾರೆ.
Bigg Boss: 'ಆಯ್ತಣ್ಣಾ, ಆಯ್ತಣ್ಣಾ' ಹೇಳಿ ರಘು ಸಿಟ್ಟು ನೆತ್ತಿಗೇರಿಸಿದ ಗಿಲ್ಲಿ ನಟ! ಬೆಂಕಿಗೆ ತುಪ್ಪ
ನಯನಾ ಪ್ರಕಾರ, ಯೂಟ್ಯೂಬ್ ನೋಡಿ ಜನ ಅಡುಗೆ ಮಾಡ್ತಾರೆ. ಯೂಟ್ಯೂಬರ್ಸ್ ಹೇಳಿದಷ್ಟೇ ಕ್ವಾಂಟಿಟಿಯಲ್ಲಿ ಅಡುಗೆ ಮಾಡುವವರೂ ಇದ್ದಾರೆ. ಅವರು ಬರೀ ಅಡುಗೆ ಮಾತ್ರ ಮಾಡೋದಿಲ್ಲ. ಯೂಟ್ಯೂಬರ್ಸ್ ಬಳಸಿದ ಪಾತ್ರೆ ಮೇಲೆಯೂ ಕಣ್ಣಿಟ್ಟಿರ್ತಾರೆ. ಈಗ ನಾನ್ ಸ್ಟಿಕ್ ಪಾತ್ರೆಗಳ ಬಳಕೆ ಸಾಮಾನ್ಯವಾಗಿದೆ. ಅದ್ರಲ್ಲಿ ಅಡುಗೆ ಅಂಟೋದಿಲ್ಲ, ಬೇಯಿಸೋದು ಸುಲಭ ಎನ್ನುವ ಕಾರಣಕ್ಕೆ ಬಹುತೇಕರು ನಾನ್ ಸ್ಟಿಕ್ ಬಳಸ್ತಾರೆ. ರೂಲ್ಸ್ ಪ್ರಕಾರ, ನಾನ್ ಸ್ಟಿಕ್ ಪಾತ್ರೆಗೆ ಸ್ಟೀಲ್ ಸೌಟ್ ಬಳಸುವಂತಿಲ್ಲ. ಸ್ಟೀಲ್ ಸೌಟ್, ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಗೀರುಂಟು ಮಾಡುತ್ತೆ. ಇದ್ರಿಂದ ಪಾತ್ರೆ ಹಾಳಾಗೋದಲ್ದೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತೆ. ಎಲ್ಲ ಹೊಸ ಪಾತ್ರೆ ಮೇಲೆ ಈ ಎಚ್ಚರಿಕೆ ಇದ್ದೇ ಇರುತ್ತೆ. ಆದ್ರೆ ನಯನಾ ಪ್ರಕಾರ, ಕೆಲ ಯೂಟ್ಯೂಬರ್ಸ್ ನಾನ್ ಸ್ಟಿಕ್ ಪಾತ್ರೆಗೆ ಸ್ಟೀಲ್ ಸೌಟ್ ಬಳಸ್ತಿದ್ದಾರೆ. ಇದನ್ನು ನೋಡಿದ ಫಾಲೋವರ್ಸ್ ಕೂಡ, ಅವರೇ ಬಳಸ್ತಾರೆ ಅಂದ್ಮೇಲೆ ಅದು ಸೇಫ್ ಇರ್ಬಹುದು ಅಂತ ಭಾವಿಸಿ, ತಾವೂ ನಾನ್ ಸ್ಟಿಕ್ ಪಾತ್ರೆಗೆ ಸ್ಟೀಲ್ ಸೌಟ್ ಬಳಸ್ತಾರೆ. ಅಡುಗೆ ರುಚಿಯಾಗಿ ಮಾಡುವ ಜೊತೆಗೆ ಶುಚಿತ್ವಕ್ಕೂ ಆದ್ಯತೆ ನೀಡಿದ್ರೆ ಒಳ್ಳೆಯದು. ಹಾಗಾಗಿ ನಾನ್ ಸ್ಟಿಕ್ ಪಾತ್ರೆಗೆ ಸ್ಟೀಲ್ ಸೌಟ್ ಬಳಸಿ ಅಡುಗೆ ಮಾಡ್ಬೇಡಿ ಅಂತ ಯೂಟ್ಯೂಬರ್ಸ್ ಗೆ ನಯನಾ ಸಲಹೆ ನೀಡಿದ್ದಾರೆ.
ಅಷ್ಟೇ ಅಲ್ಲ, ತರಕಾರಿ ಹೆಚ್ಚುವಾಗ ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್ ಬಳಸಬೇಡಿ ಅಂತಾನೂ ನಯನಾ ಸಲಹೆ ನೀಡಿದ್ದಾರೆ. ಕೆಲ ಯೂಟ್ಯೂಬರ್ಸ್ ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್ ಬಳಸ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕರ. ಲಕ್ಷಾಂತರ ವ್ಯೂವರ್ಸ್ ಹೊಂದಿರುವ ನೀವೇ ತಪ್ಪು ಮಾಡಿದ್ರೆ ನಿಮ್ಮ ಫಾಲೋವರ್ಸ್ ಕೂಡ ಇದನ್ನೇ ಮಾಡ್ಬಹುದು. ಹಾಗಾಗಿ ಸ್ಟೀಲ್ ಅಥವಾ ಮರದ ಚಾಪಿಂಗ್ ಬೋರ್ಡ್ ಬಳಸಿ ಅಂತ ನಯನಾ ನಾಗರಾಜ್ ವಿನಂತಿ ಮಾಡಿದ್ದಾರೆ. ನಯನಾ ನಾಗರಾಜ್ ಈ ಸಲಹೆಯನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಅನೇಕರು ಹೌದು ಎಂದಿದ್ದಲ್ದೆ, ಇಂದೇ ಚಾಪಿಂಗ್ ಬೋರ್ಡ್ ಬದಲಿಸೋದಾಗಿ ಆಶ್ವಾಸನೆ ನೀಡಿದ್ದಾರೆ.
ಹಾಡುಗಾರ್ತಿ ನಯನಾ, ಸುಹಾಸ್ ಶಿವಣ್ಣ ಎಂಬುವವರನ್ನು ಮದುವೆಯಾಗಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ಕಳೆದಿದೆ. ತಮ್ಮ ಪತಿ ಜೊತೆಗಿರುವ ಹಾಗೂ ಹಾಡಿನ ಅನೇಕ ವಿಡಿಯೋಗಳನ್ನು ನಯನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ. ಕಿರು ತೆರೆ ಮೇಲೆ ನಯನಾ ಆಕ್ಟಿಂಗ್ ಮಿಸ್ ಮಾಡಿಕೊಳ್ತಿರುವ ಅಭಿಮಾನಿಗಳು, ಆಕ್ಟಿಂಗ್ ಮಾಡುವಂತೆ ಒತ್ತಾಯ ಮಾಡೋದು ಕಾಮನ್ ಆಗಿದೆ.


