- Home
- Entertainment
- TV Talk
- Bigg Boss: ರಕ್ಷಿತಾ ಮೇಲೆ ಸುದೀಪ್ ತೋರಿದ ಸಿಟ್ಟು ಅಶ್ವಿನಿ ಮೇಲೆ ಯಾಕಿಲ್ಲ? ವಿನಯ್ ಗೌಡ ಓಪನ್ನಾಗಿ ಹೇಳಿದ್ದೇನು?
Bigg Boss: ರಕ್ಷಿತಾ ಮೇಲೆ ಸುದೀಪ್ ತೋರಿದ ಸಿಟ್ಟು ಅಶ್ವಿನಿ ಮೇಲೆ ಯಾಕಿಲ್ಲ? ವಿನಯ್ ಗೌಡ ಓಪನ್ನಾಗಿ ಹೇಳಿದ್ದೇನು?
ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿ ಅವರ ಮೇಲೆ ಸುದೀಪ್ ಗರಂ ಆಗಿದ್ದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಆರೋಪಗಳಿಗೆ ಇದೀಗ ಮಾಜಿ ಸ್ಪರ್ಧಿ ವಿನಯ್ ಗೌಡ ಪ್ರತಿಕ್ರಿಯಿಸಿದ್ದು, ಸುದೀಪ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ರಕ್ಷಿತಾ ಶೆಟ್ಟಿ ಬಗ್ಗೆ ಸುದೀಪ್
ಕೆಲವು ವಾರಗಳ ಹಿಂದೆ ರಕ್ಷಿತಾ ಶೆಟ್ಟಿ (Bigg Boss Rakshita Shetty) ವಿಷಯದಲ್ಲಿ ಸುದೀಪ್ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಅಶ್ವಿನಿ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಅಶ್ವಿನಿ ತಂಡದಲ್ಲಿ ರಕ್ಷಿತಾ ಇದ್ದರು. ಆದರೆ ಟಾಸ್ಕ್ ವೇಳೆ ಗಿಲ್ಲಿ ಮತ್ತು ರಕ್ಷಿತಾ ಪರಸ್ಪರ ಗುಟ್ಟಾಗಿ ಮಾತನಾಡಿದ್ದರು. ಇದು ಅಶ್ವಿನಿಗೆ ಸಿಟ್ಟು ತರಿಸಿತ್ತು. ರಕ್ಷಿತಾ ತಂಡದ ವಿರುದ್ಧವೇ ಗಿಲ್ಲಿ ನಟ (Gilli Nata) ಎತ್ತಿ ಕಟ್ಟಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಸುದೀಪ್ ಅವರು ರಕ್ಷಿತಾ ವಿರುದ್ಧ ಗರಂ ಆಗಿದ್ದರು.
ರಕ್ಷಿತಾ ವಿರುದ್ಧ ಗರಂ
ನೀವು ನನ್ನ ಪಿತ್ತವನ್ನು ನೆತ್ತಿಗೇರಿಸುತ್ತಾ ಇದ್ದೀರಿ ಎಂದಿದ್ದರು. ರಕ್ಷಿತಾ ಶೆಟ್ಟಿ ನಾನ್ಯಾವಾಗ ಇರಿಟೇಟ್ ಮಾಡಿದ್ದೆ ಎಂದು ಗೊತ್ತಿಲ್ಲದೇ ಮರು ಪ್ರಶ್ನೆ ಮಾಡಿದಾಗ ಸುದೀಪ್ ಏಕಾಏಕಿ ಹೀಗೆ ಗರಂ ಆಗಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.
ಕೆಟ್ಟ ಕಮೆಂಟ್ಸ್
ಅಶ್ವಿನಿ ಗೌಡ ಅವರು ಬರೀ ಜಗಳದಿಂದಲೇ ಕಿತ್ತಾಡುತ್ತಿದ್ದರೂ ಸುದೀಪ್ ಅವರ ಬಗ್ಗೆ ಸಾಫ್ಟ್ ಕಾರ್ನರ್ ಆಗಿದ್ದು, ರಕ್ಷಿತಾ ಶೆಟ್ಟಿ ಬಡವಳು ಎನ್ನುವ ಕಾರಣಕ್ಕೆ ಪಿತ್ತ ನೆತ್ತಿಗೆ ಏರಿಸಿಕೊಂಡರು. ಅಶ್ವಿನಿ ಗೌಡ (Bigg Boss Ashwini Gowda) ವಿರುದ್ಧ ಕಿಚ್ಚನ ಪಿತ್ತ ನೆತ್ತಿಗೆ ಏರೋದಿಲ್ಲ ಯಾಕೆ ಎಂಬೆಲ್ಲಾ ಕಮೆಂಟ್ಸ್ ಹರಿದಾಡಿದವು.
ವಿನಯ್ ಗೌಡ ಏನಂದ್ರು?
ಇದಾದ ಮರು ವಾರವೇ ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತು. ಇದೀಗ ಈ ಬಗ್ಗೆ ಕಳೆದ ಬಿಗ್‌ಬಾಸ್ 10ರ ಸ್ಪರ್ಧಿಯಾಗಿದ್ದ ವಿನಯ್ ಗೌಡ (Bigg Boss Vinay Gowda) ಅವರು ಮಾಧ್ಯಮದ ಜೊತೆ ಮಾತನಾಡಿ, ಇದರ ಬಗ್ಗೆ ಉತ್ತರಿಸಿದ್ದಾರೆ.
ಸುದೀಪ್ಗೆ ಗೊತ್ತಿದೆ
ಸುದೀಪ್ ಸರ್ ಅವರಿಗೆ ಯಾರಿಗೆ, ಯಾವಾಗ, ಏನು ಹೇಳಬೇಕು ಎನ್ನುವುದು ಗೊತ್ತಿದೆ. ಅದಕ್ಕಾಗಿಯೇ ಅವರು ಇಷ್ಟೂ ಷೋಗಳನ್ನು ನಡೆಸಿಕೊಂಡು ಬಂದಿದ್ದಾರೆ. ರಕ್ಷಿತಾ ಶೆಟ್ಟಿಯೇ ತಾವು ಮಾಡಿದ್ದು ತಪ್ಪಾಯ್ತು ಎಂದು ಕೊನೆಗೆ ಒಪ್ಪಿಕೊಂಡು ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.. ಆದರೆ ಆ ಬಗ್ಗೆ ಯಾರೂ ಮಾತನಾಡದೇ ಸುಖಾಸುಮ್ಮನೇ ಏನೇನೋ ಆರೋಪ ಹೊರಿಸುತ್ತಾರೆ ಎಂದರು.
ಇವೆಲ್ಲಾ ನಿಜವಲ್ಲ
ಸುದೀಪ್ ಅವರಿಗೆ, ಯಾರಿಗೆ ಏನು ಹೇಳಬೇಕು ಎನ್ನೋದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಅವರು ಸಂದರ್ಭ, ಸಮಯ ಎಲ್ಲವನ್ನೂ ಮ್ಯಾನೇಜ್ ಮಾಡಿ, ಸರಿಯಾದ ನಿರ್ಧಾರವನ್ನೇ ಮಾಡುತ್ತಾರೆ. ಸೋಷಿಯಲ್ಮೀಡಿಯಾದಲ್ಲಿ ಯಾರೋ ಏನೋ ಹೇಳ್ತಾರೆ ಎನ್ನುವ ಮಾತ್ರಕ್ಕೆ ಅದೆಲ್ಲಾ ನಿಜವಾದದ್ದಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

