- Home
- Entertainment
- TV Talk
- Bigg Boss: 'ಆಯ್ತಣ್ಣಾ, ಆಯ್ತಣ್ಣಾ' ಹೇಳಿ ರಘು ಸಿಟ್ಟು ನೆತ್ತಿಗೇರಿಸಿದ ಗಿಲ್ಲಿ ನಟ! ಬೆಂಕಿಗೆ ತುಪ್ಪ ಸುರಿದ ರಜತ್
Bigg Boss: 'ಆಯ್ತಣ್ಣಾ, ಆಯ್ತಣ್ಣಾ' ಹೇಳಿ ರಘು ಸಿಟ್ಟು ನೆತ್ತಿಗೇರಿಸಿದ ಗಿಲ್ಲಿ ನಟ! ಬೆಂಕಿಗೆ ತುಪ್ಪ ಸುರಿದ ರಜತ್
ಬಿಗ್‌ಬಾಸ್ ಮನೆಯ ಅಡುಗೆ ಕೋಣೆಯಲ್ಲಿ ರಘು ಅಡುಗೆ ಮಾಡುತ್ತಿದ್ದಾಗ, 'ಗಿಲ್ಲಿ ನಟ' ಪದೇ ಪದೇ 'ಆಯ್ತಾ' ಎಂದು ಕೇಳಿ ಅವರನ್ನು ಕೆರಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಘು, 'ಗಿಲ್ಲಿ ನಟ'ನ ಮೇಲೆ ತೀವ್ರವಾಗಿ ರೇಗಾಡಿದ್ದು, ಈ ಜಗಳಕ್ಕೆ ರಜತ್ ಕೂಡ ಸಾಕ್ಷಿಯಾಗಿದ್ದಾರೆ.

ಜಟಾಪಟಿ
ಬಿಗ್‌ಬಾಸ್ ಮನೆಯಲ್ಲಿ ರಘು ಮತ್ತು ಗಿಲ್ಲಿ ನಟನಿಗೆ (Bigg Boss Gilli Nata) ಆಗಾಗ್ಗೆ ಜಟಾಪಟಿ ನಡೆಯುತ್ತಲೇ ಇರುತ್ತದೆ. ಅದರಲ್ಲಿಯೂ ಗಿಲ್ಲಿ ನಟ ಕೆಲವೊಮ್ಮೆ ತಮಾಷೆ ಮಾಡುವ ಮೂಲಕವೇ ರಘುನ ಸಿಟ್ಟು ನೆತ್ತಿಗೇರುವುದು ಇದೆ.ಇದೀಗ ರಘು ಅವರು ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ, ಗಿಲ್ಲಿ ನಟ ಆಯ್ತಾ ಎಂದು ಕೇಳಿದ್ದಾರೆ. ಅದಕ್ಕೆ ಸ್ವಲ್ಪ ತಡಿ ಎಂದು ರಘು ಹೇಳಿದ್ದಾರೆ.
ಆಯ್ತಣ್ಣ ಎಂದ ರಘು
ಸುಖಾಸುಮ್ಮನೆ ರೇಗಿಸುವುದಕ್ಕಾಗಿಯೇ ಗಿಲ್ಲಿ ನಟ ಮತ್ತೊಮ್ಮೆ ಆಯ್ತಣ್ಣ ಎಂದು ಕೇಳಿದಾಗ ಆಗ ರಘು ಸ್ವಲ್ಪ ಗರಂ ಆದರು. ಆದರೂ ಸುಮ್ಮನೇ ಬಿಡದ ಗಿಲ್ಲಿ ನಟ ಮತ್ತೊಮ್ಮೆ ಅದೇ ಕೇಳಿದಾಗ, ರಘು ಬಿಪಿ ಹೆಚ್ಚಾಯ್ತು.
ಗಿಲ್ಲಿ ರಿಪ್ಲೈ
ತಗೋ ತಿನ್ನು ಎಂದು ಹೇಳಿದ್ರು. ಅದಕ್ಕೆ ಗಿಲ್ಲಿ ನಟ ನಾನೇನು ಕೇಳಿದೆ, ಆಯ್ತಾ ಅಂತ ಅಷ್ಟೇ ಕೇಳಿದೆ, ಸಿಟ್ಟು ಯಾಕೆ ಆಗ್ತಿಯಾ ಎಂದು ಕೇಳಿದಾಗ ಮೊದಲೇ ಏರಿಕೊಂಡಿದ್ದ ರಘು ಮತ್ತಷ್ಟು ರೇಗಾಡಿದರು.
ರಘು ಬ್ಲಾಸ್ಟ್
ಅವನನ್ನು ಆಚೆ ಕರೆದುಕೊಂಡು ಹೋಗು ಎಂದು ಅಲ್ಲಿಯೇ ಇದ್ದ ರಜತ್ಗೆ ಹೇಳಿದ್ರು. ಆಗಲೂ ಸುಮ್ಮನೇ ಇರದ ಗಿಲ್ಲಿ, ಎಷ್ಟು ಹೊತ್ತು ಆಗತ್ತೆ ಹೇಳು ಎಂದಾಗ ರಘು ಬ್ಲಾಸ್ಟ್ ಆಗಿ ಹೋದ್ರು.
ರೇಗಿದ ರಘು
ಹತ್ತಿರ ಬಂದ ರಘು ಒಂದು ಸಲ ಓಕೆ, ಎರಡು ಸಲ ಓಕೆ ಅತಿಯಾಗಿ ಮಾತಾಡ್ಬೇಡ ಎಂದು ರೇಗಿದರು. ಅದಕ್ಕೆ ಗಿಲ್ಲಿ ನಟ ನಾನೇನು ಮಾಡಿದೆ ಎಂದು ಕೇಳಿದ್ರು. ಬಾಯಿ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತಾಡ್ತಿಯಾ ಎಂದು ಸಿಕ್ಕಾಪಟ್ಟೆ ಗರಂ ಆದ್ರು ರಘು.
ರಜತ್ ವ್ಯಂಗ್ಯ
ಅವರು ಇಷ್ಟು ಹೇಳಿದ್ರೂ, ಗಿಲ್ಲಿ ಎಷ್ಟು ಹೊತ್ತು ಆಗ್ತದಣ್ಣ ಎಂದು ಕೇಳಿದಾಗ ಅರೆಕ್ಷಣ ರಘು ಸೈಲೆಂಟ್ ಆದ್ರು. ಆಗ ಗಿಲ್ಲಿ ರಜತ್ ಕಡೆ ತಿರುಗಿದಾಗ ರಜತ್ ವ್ಯಂಗ್ಯವಾಗಿ ನೋಟ ಬೀರಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

