
'ಧಮ್' ಹೊಡದೇ ಇಲ್ವಾ ರಶ್ಮಿಕಾ..? ಹೊಗೆ ವಿಷ್ಯ ಹೊರಗೆ ಬಂತು.. ಸಿಕ್ಕಿ ಬಿದ್ದು ಟ್ರೋಲ್ ಆದ ಸುಂದರಿ..!
ಯೆಸ್ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಆಗ್ತಾ ಇದ್ದಾರೆ. ಕಿರಿಕ್ ಬ್ಯೂಟಿಗೆ ಈ ಟ್ರೋಲ್ಗಳು, ಕಿರಿಕ್ಗಳು ಹೊಸತೇನಲ್ಲ. ರಶ್ಮಿಕಾ ಬಾಯಿಬಿಟ್ರೆ ಒಂದು ವಿವಾದ ಹುಟ್ಟಿಕೊಳ್ಳುತ್ತೆ. ಸದ್ಯ ಕುಬೇರ ಸಿನಿಮಾದ ಸಕ್ಸಸ್ ಖುಷಿಯಲ್ಲಿರೋ ರಶ್ಮಿಕಾ ಲಂಡನ್ಗೆ ತೆರಳಿದ್ದಾರೆ.
ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಮಾತನಾಡಿ ಟ್ರೋಲ್ ಆಗ್ತಾರೋ ಇಲ್ಲಾ ಟ್ರೋಲ್ ಆಗ್ಲಿಕ್ಕೆ ಅಂತಾನೆ ಮಾತನಾಡ್ತಾರೋ ಗೊತ್ತಿಲ್ಲ. ಸದ್ಯ ಲಂಡನ್ನಲ್ಲಿ ‘ವಿ ದ ವುಮೆನ್’ ಅನ್ನೋ ಕಾರ್ಯಕ್ರದಲ್ಲಿ ಭಾಗಿಯಾಗಿರೋ ರಶ್ಮಿಕಾ, ತನಗೆ ಸಮಾಜದ ಬಗ್ಗೆ ಎಷ್ಟು ಕಾಳಜಿ, ಕಳಕಳಿ ಇದೆ ಅಂತೆಲ್ಲಾ ಮಾತನಾಡಿದ್ದಾರೆ. ಆದ್ರೆ ರಶ್ಮಿಕಾ ಹೇಳೊದೇ ಒಂದು ಮಾಡೋದೇ ಒಂದು ಅಂತ ಸಾಕ್ಷಿ ಸಮೇತ ಕುಟುಕಿದ್ದಾರೆ ನೆಟ್ಟಿಗರು.
ಯೆಸ್ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಆಗ್ತಾ ಇದ್ದಾರೆ. ಕಿರಿಕ್ ಬ್ಯೂಟಿಗೆ ಈ ಟ್ರೋಲ್ಗಳು, ಕಿರಿಕ್ಗಳು ಹೊಸತೇನಲ್ಲ. ರಶ್ಮಿಕಾ ಬಾಯಿಬಿಟ್ರೆ ಒಂದು ವಿವಾದ ಹುಟ್ಟಿಕೊಳ್ಳುತ್ತೆ. ಸದ್ಯ ಕುಬೇರ ಸಿನಿಮಾದ ಸಕ್ಸಸ್ ಖುಷಿಯಲ್ಲಿರೋ ರಶ್ಮಿಕಾ ಲಂಡನ್ಗೆ ತೆರಳಿದ್ದಾರೆ. ಅಲ್ಲಿ ‘ವಿ ದ ವುಮೆನ್’ ಅನ್ನೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಬಹುಶಃ ರಶ್ಮಿಕಾಗೆ ಈಗ ಮಹಿಳಾವಾದಿ ಅನ್ನಿಸಿಕೊಳ್ಳುವ ಶೋಕಿ ಬಂದಂತಿದೆ. ಸೋ ಈ ಕಾರ್ಯಕ್ರಮದಲ್ಲಿ ಸಿನಿರಂಗದಲ್ಲಿ ಮಹಿಳೆಯರ ಸವಾಲುಗಳು ಏನೆಲ್ಲಾ ಇರ್ತಾವೆ ಅಂತ ಪುಂಖಾನುಪುಂಖವಾಗಿ ಮತನಾಡಿದ್ದಾರೆ. ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವ ಪಾತ್ರಗಳಲ್ಲಿ ನಾನು ನಟಿಸಲ್ಲ ಅಂದಿದ್ದಾರೆ. ಸಾಲದ್ದಕ್ಕೆ ನಾನು ಯಾವತ್ತೂ ತೆರೆ ಮೇಲೆ ಧೂಮಪಾನ ಮಾಡಿಲ್ಲ.. ತೆರೆ ಮೇಲೆ ಸ್ಮೋಕ್ ಮಾಡಿ ಯುವಜನರನ್ನ ದಾರಿ ತಪ್ಪಿಸಿಲ್ಲ ಅಂದಿದ್ದಾರೆ.
"ನಾನು ವೈಯಕ್ತಿಕ ಜೀವನದಲ್ಲಿ ಅಥವಾ ತೆರೆಮೇಲೆ ಸ್ಮೋಕಿಂಗ್ ಮಾಡುವುದಿಲ್ಲ. ಕಾರಣ ನನಗೆ ಸ್ಮೋಕಿಂಗ್ ಎನ್ನುವ ಕಾನ್ಸೆಪ್ಟ್ ಇಷ್ಟವಾಗುವುದಿಲ್ಲ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಒಂದು ವೇಳೆ ಫಿಲ್ಮ್ ಮೇಕರ್ಸ್ ಬಂದು ಚಿತ್ರದಲ್ಲಿ ಇಂತಹ ಪಾತ್ರದಲ್ಲಿ ನಟಿಸಬೇಕು ಎಂದು ಹೇಳಿದರೆ ಅದು ಎಂತಹ ದೊಡ್ಡ ಸಿನಿಮಾ ಆಗಿದ್ದರೂ ಬಿಟ್ಟುಬಿಡುತ್ತೇನೆ"
ಇದನ್ನ ಕೇಳಿದ ಫ್ಯಾನ್ಸ್ ಅರೇರೇರೆ ನಮ್ಮ ರಶ್ಮಿಕಾ ಎಂತಾ ದೊಡ್ಡ ಜನ ಮಾರಾರ್ಯೆ ಅಂತ ಮಾತನಾಡ್ತಾ ಇದ್ದಾರೆ. ಆದ್ರೆ ರಶ್ಮಿಕಾರ ಈ ಹೇಳಿಕೆ ಪ್ರಕಟ ಆಗೋ ಮೊದಲೇ ನೆಟ್ಟಿಗರು ಒಂದು ವಿಡಿಯೋ ಹುಡುಕಿ ವೈರಲ್ ಮಾಡಿದ್ದಾರೆ. ಅದ್ಯಾವುದು ಅಂತ ನೀವೇ ನೋಡಿ.
ಯೆಸ್ ರಶ್ಮಿಕಾ ನಾನು ತೆರೆ ಮೇಲೆ ಆಗಲಿ, ರಿಯಲ್ ಲೈಫ್ನಲ್ಲಾಗಲಿ ಸ್ಮೋಕ್ ಮಾಡಲ್ಲ. ಸ್ಮೋಕ್ ಮಾಡುವ ಪಾತ್ರ ಇದ್ರೆ ಅದೆಷ್ಟೇ ದೊಡ್ಡ ಸಿನಿಮಾ ಇದ್ರೂ ಬಿಟ್ಟು ಬಿಡ್ತಿನಿ ಅಂದಿದ್ದಾರೆ. ಆದ್ರೆ ಪಾಪ ನಮ್ಮ ಕಿರಿಕ್ ಬ್ಯೂಟಿ ಹಿಂದೆ ಒಂದು ಸಿನಿಮಾದಲ್ಲಿ ಗುಂಡು ಹಾಕ್ತಾ ಧಮ್ ಮಾರೋ ಧಮ್ ಅಂತ ಹೊಗೆ ಎಳೆದಿದ್ದು ಮರೆತೇ ಹೋಗಿದೆ.
ಇದು ತೆಲುಗಿನ ಭೀಷ್ಮ ಸಿನಿಮಾದ ದೃಶ್ಯ. 2020ರಲ್ಲಿ ಬಂದ ಈ ಸಿನಿಮಾದ ಹಾಡೊಂದರಲ್ಲಿ ನಾಯಕ ನಿತಿನ್ ಜೊತೆಗೆ ರಶ್ಮಿಕಾ ವೈನ್ ಕುಡೀತಾ, ಧಂ ಎಳೆಯುತ್ತಾ ಎಂಜಾಯ್ ಮಾಡೋ ದೃಶ್ಯಗಳಿವೆ. ಅದನ್ನ ಹುಡುಕಿ ತೆಗೆದು ‘ ಅಕ್ಕಾ ಇದು ನೀವೇ ತಾನೇ’ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ ಜನ.
ಹೌದು ರಶ್ಮಿಕಾ ಕೈಗೆ ಮೈಕ್ ಸಿಕ್ರೆ ದೊಡ್ಡ ದೊಡ್ಡ ಡೈಲಾಗ್ ಹೊಡೀತಾರೆ. ಅದ್ರೆ ಈ ಚೆಲುವೆ ಹೇಳೊದೇ ಒಂದು.. ಮಾಡೋದೇ ಇನ್ನೊಂದು. ಅದಕ್ಕೆ ಒಂದಲ್ಲ ಎರಡಲ್ಲ ಹಲವು ಸಾಕ್ಷಿಗಳಿವೆ. ಸದ್ಯ ವಿ ದಿ ವುವೆಮ್ ಕಾರ್ಯಕ್ರಮದಲ್ಲೇ ರಶ್ಮಿಕಾ, ನಾನು ಸಮಾಜಕ್ಕೆ ತಪ್ಪು ಸಂದೇಶ ಕೊಡುವಂಥ ಚಿತ್ರಗಳಲ್ಲಿ ನಟಿಸಿಲ್ಲ ಅಂದಿದ್ದಾರೆ. ಆದ್ರೆ ರಶ್ಮಿಕಾ ನಟಸಿದ ಅನಿಮಲ್ ಸಿನಿಮಾ ಬಗ್ಗೆ ಅಲ್ಲೇ ಪ್ರಶ್ನೆ ತೂರಿಬಂದಿದೆ.
ಸಾವಿರಾರು ಜನರನ್ನ ಬರ್ಬರವಾಗಿ ಸಾಯಿಸೋ ಅನಿಮಲ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇದ್ರಲ್ಲಿ ರಶ್ಮಿಕಾನೇ ನಾಯಕಿ. ಅಷ್ಟೆಲ್ಲಾ ಯಾಕೆ ಹೆಣ್ಣು ಮಕ್ಕಳ ಋತುಚಕ್ರದ ಬಗ್ಗೆಯೇ ಅವಮಾನ ಮಾಡುವಂಥಾ ದೃಶ್ಯ ಇದ್ರಲ್ಲಿತ್ತು. ಅದ್ರಲ್ಲಿ ಖದ್ದು ನಮ್ಮ ರಶ್ಮಿಕಾನೇ ಮುಜುಗರ ಇಲ್ಲದೇ ನಟಿಸಿದ್ರು.
ಇಂಥಾ ಕೀಳು ಧರ್ಜೆಯ ಸಿನಿಮಾ ಮಾಡಿ, ಹಣ ಗಳಿಸಿ.. ಆ ಬಳಿಕ ಫ್ರೀ ಟೈಂನಲ್ಲಿ ಇವರೆಲ್ಲಾ ಮಾನವತಾವಾದಿ, ಮಹಿಳಾವಾದಿಯಾಗಿ ಬದಲಾಗಿಬಿಡ್ತಾರೆ. ಸದ್ಯ ರಶ್ಮಿಕಾ ಕೂಡ ಸಮಾಜಕ್ಕೆ ಒಳ್ಳೆ ಸಂದೇಶ ಕೊಡ್ತಿನಿ ಅಂತಿದ್ದಾರೆ. ಆದ್ರೆ ಇದೂವರೆಗೂ ನೀವು ಕೊಟ್ಟ ಸಂದೇಶಗಳೇ ಬೇಕಾದಷ್ಟಿವೆ.. ಹೊಸ ಸಂದೇಶ ಏನ್ ಬೇಡ ಬಿಡಿ ಅಂತಿದ್ದಾರೆ ಜನ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...