
50 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲವೇಕೆ?
ಅಲಿ ಖಮೇನಿ ಕೊಲೆಯಾಗಿ ಇಂದಿಗೆ 50 ದಿನ.. ಶೋಖಾಚರಣೆ ಮುಗಿದ್ರೂ ಧಫನ್ ಮಾಡಿಲ್ಲ ಏಕೆ ? - ಸರ್ವೋಚ್ಛ ನಾಯಕನ ಖಬರ್ಸ್ತಾನ್ ಯಾವುದು ? ಯಾವಾಗ ? - ಖಮೇನಿ ಜನಜಾ ಬಗ್ಗೆ ಮಾತಿಲ್ಲ.. ಮಾಹಿತಿಯಿಲ್ಲ.
ಅಲಿ ಖಮೇನಿ ಕೊಲೆಯಾಗಿ ಇಂದಿಗೆ 50 ದಿನ.. ಶೋಖಾಚರಣೆ ಮುಗಿದ್ರೂ ಧಫನ್ ಮಾಡಿಲ್ಲ ಏಕೆ ? - ಸರ್ವೋಚ್ಛ ನಾಯಕನ ಖಬರ್ಸ್ತಾನ್ ಯಾವುದು ? ಯಾವಾಗ ? - ಖಮೇನಿ ಜನಜಾ ಬಗ್ಗೆ ಮಾತಿಲ್ಲ.. ಮಾಹಿತಿಯಿಲ್ಲ.. ಇದೇ ಈ ಹೊತ್ತಿನ ವಿಶೇಷ, ಖಮೇನಿಗಿಲ್ಲ ಸತ್ತರೂ ಮುಕ್ತಿ. ಜಗತ್ತು ಅದೊಂದು ಸುದ್ದಿಯನ್ನ ಮರೆತೋಗಿದೆ.. ಆದ್ರೆ, ಇರಾನ್ ನಲ್ಲಿ ಮಾತ್ರ ಆ ಸುದ್ದಿ ಬಾರೀ ಚರ್ಚೆಯಾಗ್ತಿದೆ. ಹೌದು, ಇರಾನ್ ಸರ್ವೋಚ್ಛ ನಾಯಕನ ಕೊಲೆಯಾಗಿ 50 ದಿನಗಳು ಕಳೆದಿವೆ.
40 ದಿನಗಳ ಶೋಕಾಚರಣೆಯೂ ಮುಗಿದಾಯ್ತು... ಇಷ್ಟಾದ್ರೂ ಅಲಿ ಖಮೇನಿ ಧಫನ್ ಯಾವಾಗ..? ಎಲ್ಲಿ ಅನ್ನೋದು ಮಾತ್ರ ಇನ್ನು ಘೋಷಣೆಯಾಗಿಲ್ಲ. ನೋಡಿದ್ರಲ್ಲ ಅಲಿ ಖಮೇನಿಯ ಅಂತ್ಯ ಸಂಸ್ಕಾರ 50 ದಿನವಾದ್ರು ಏಕೆ ನಡೆದಿಲ್ಲ ಅನ್ನೋದನ್ನ.. ಹಾಗದ್ರೆ, ಅಲಿ ಖಮೇನಿ ದಫನ್ ಅಗೋದು ಯಾವಾಗ ಹಾಗೂ ಎಲ್ಲಿ? ಅಲಿ ಖಮೇನಿಯ ಅಂತ್ಯ ಸಂಸ್ಕಾರವನ್ನು ಮಾಡೋದಕ್ಕೆ ಇರಾನ್ ತುಂಬಾನೇ ತಡ ಮಾಡಿದೆ.. ಆದ್ರೆ, ಇನ್ನು ಹೆಚ್ಚಿನ ವಿಳಂಬ ಮಾಡೋದಿಲ್ಲ ಅಂತ ವರದಿಗಳು ಹೇಳ್ತಿವೆ. ಈಗಾಗ್ಲೇ ಖಮೇನಿಯ ಅಂತ್ಯಸಂಸ್ಕಾರದ ಖಬರ್ಸ್ತಾನ್ ಯಾವುದು ಅಂತ ನಿಗಧಿಯಾಗಿದ್ದು, ಹೇಗೆ ಮಾಡಲಾಗುತ್ತದೆ.
ಐವತ್ತು ದಿನವಾದ್ರೂ ಅಲಿ ಖಮೇನಿ ಅಂತ್ಯ ಸಂಸ್ಕಾರ ಸಾಧ್ಯವಾಗಿಲ್ಲ.. ಆದ್ರೆ, ಹೇಗೆ ಮಾಡ್ಬೇಕು ಹಾಗೂ ಎಲ್ಲಿ ಮಾಡ್ಬೇಕು ಅನ್ನೋದು ಮಾತ್ರ ಬಹುತೇಕ ಫಿಕ್ಸ್ ಆಗಿದೆ.. ಆದ್ರೆ, ಸಮಯ ನಿಗದಿ ಮಾತ್ರವೇ ಬಾಕಿಯಿದೆ. ಅಷ್ಟಕ್ಕೂ ಈ ಸರ್ವೋಚ್ಛ ನಾಯಕನನ್ನು ಅಮೆರಿಕ ಹಾಗೂ ಇಸ್ರೇಲ್ ಹೇಗೆ ಹೊಡೆದಾಕಿತು. ಅಲಿ ಖಮೇನಿಯ ಅಂತ್ಯ ಸಂಸ್ಕಾರದ ಬಗ್ಗೆ ಚರ್ಚೆಯಾಗೋದಕ್ಕೆ ಕಾರಣ ಆತನ ಸಾವು ಮಾಮೂಲಿಯದ್ದಲ್ಲ. ಹೌದು, ಇಸ್ರೇಲ್ ಮಾಡಿದ ರಹಸ್ಯ ಕಾರ್ಯಾಚರಣೆಯ ಪ್ರತಿಫಲವಾಗಿತ್ತು. ಒಂದು ದೇಶಕ್ಕೆ ನುಗ್ಗಿ ಅಲ್ಲಿನ ಸರ್ವೋಚ್ಛ ನಾಯಕನನ್ನು ಕೊಲೆ ಮಾಡುವುದು ಅಂದ್ರೆ ಅದು ಸಾಮಾನ್ಯವಾದುದಲ್ಲ.