ಪತ್ನಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಟೆಕ್ಕಿ ಅತುಲ್‌ ಸುಭಾಷ್‌ ಸ್ಮರಣಾರ್ಥ ಬೆಂಗಳೂರಿನ ಫ್ರೀಡಮ್‌ ಪಾರ್ಕ್‌ನಲ್ಲಿ 'STOP killing Men' ಎಂಬ ಶೀರ್ಷಿಕೆಯಡಿ ಪ್ರತಿಭಟನೆ ನಡೆಯಿತು. ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ಈ ಪ್ರತಿಭಟನೆ ಆಯೋಜಿಸಿತ್ತು.

ಬೆಂಗಳೂರು (ಡಿ.6): ಪತ್ನಿ ಹಾಗೂ ಆಕೆಯ ಕುಟುಂಬದವರಿಂದ ಅತಿಯಾದ ಕಿರುಕುಳ ಎದುರಿಸಿ ಕಳೆದ ವರ್ಷದ ಡಿಸೆಂಬರ್‌ 9 ರಂದು ಮಾರತಹಳ್ಳಿಯ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ದಾರುಣವಾಗಿ ಸಾವಿಗೆ ಶರಣಾಗಿದ್ದ ಟೆಕ್ಕಿ ಅತುಲ್‌ ಸುಭಾಷ್‌ ಸ್ಮರಣಾರ್ಥ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಯಿತು. ಅತುಲ್‌ ಸುಭಾಷ್‌ ಸಾವಿಗೆ ಒಂದು ವರ್ಷವಾಗುತ್ತಿರುವ ಹೊತ್ತಿನಲ್ಲಿ ಫ್ರೀಡಮ್‌ ಪಾರ್ಕ್‌ನಲ್ಲಿ STOP killing Men ಎನ್ನುವ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಯಿತು

ಕೈಗೆ ಕೊಳ ಹಾಕಿಕೊಂಡು ಪುರುಷರು ಪ್ರತಿಭಟನೆ ನಡೆಸಿದ್ದರೆ. ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ವತಿಯಿಂದ ಈ ಪ್ರತಿಭಟನೆ ನಡೆಸಸಲಾಯಿತು. ಈ ವೇಳೆ ಪತ್ನಿಯರಿಂದ ನೊಂದ ಪುರುಷರು ಪ್ರತಿಭಟಯಲ್ಲಿ ಭಾಗವಹಿಸಿದ್ದರು. ಕಾನೂನಿನ ತಾರತಮ್ಯ ಕೊನೆಗೊಳಿಸಿ ಮಹಿಳಾ ಅಪರಾಧಿಗಳನ್ನ ಕೂಡ ಶಿಕ್ಷಿಸಿ ಎಂದು ಒತ್ತಾಯ ಮಾಡಲಾಗಿದೆ. ಮಹಿಳೆಯರಿಂದ ಪುರುಷರಿಗೆ ಮಾನಸಿಕ ಹಿಂಸೆ ಕೊಟ್ಟು ಆತ್ಮಹತ್ಯೆಗೆ ಪ್ರಚೋದನೆ ಮಾಡುತ್ತಿದ್ದಾರೆ. ಹೆಂಡತಿಯಿಂದ ಗಂಡ‌ನ ಕೊಲೆ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಇದನ್ನು ವಿರೋಧಿಸಿ ಪ್ರತಿಭಟನೆ ನಡೆದಿದೆ.

ಸುಳ್ಳು ವರದಕ್ಷಿಣೆ ಪ್ರಕರಣ ಹಾಗೂ ಪೋಷಕರಿಂದ ದೂರವಾಗುವಂತೆ ಒತ್ತಾಯ ಮಾಡಿದ್ದರಿಂದ ಅತುಲ್‌ ಸುಭಾಷ್‌ ಆ*ತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ನ್ಯಾಯ ಸಿಗದೇ ಇದ್ದಲ್ಲಿ, ಪತ್ನಿ ನಿಖಿತಾ ಸಿಂಘಾನಿಯಾಗೆ ಶಿಕ್ಷೆ ಆಗದೇ ಇದ್ದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಎನ್ನುವಂತೆ ತನ್ನ ಅಸ್ಥಿಯನ್ನು ಚರಂಡಿಗೆ ಎಸೆಯಿರಿ ಎಂದು ಅತುಲ್‌ ಸುಭಾಷ್‌ ತನ್ನ ವಿವರವಾದ ಡೆತ್‌ನೋಟ್‌ನಲ್ಲಿ ಬರೆದಿದ್ದರು. ಅವರ ಸಾವಿಗೆ ಗೌರವ ಸಲ್ಲಿಸುವ ಸಲುವಾಗಿ ನರೆದಿದ್ದ ಜನರು, 'ಅತುಲ್‌ ಸುಭಾಷ್‌ ಅಮರ್‌ ರಹೇ'. 'ಬೇಕೇ ಬೇಕು.. ನ್ಯಾಯ ಬೇಕು..'ಎಂದು ಕೂಗಿ ಪ್ರತಿಭಟಿಸಿದರು.

ಕಾನೂನು ಬಳಸಿಕೊಂಡು ಪುರುಷರ ಮೇಲೆ ದೌರ್ಜನ್ಯ

'ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡಿ, ಮಗುವನ್ನು ಅಸ್ತವನ್ನಾಗಿ ಬಳಸಿಕೊಂಡು, ಪುರುಷರ ಮೇಲೆ ಕಾನೂನಿನ ಮೂಲಕವೇ ದೌರ್ಜನ್ಯ ಮಾಡುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟು, ನ್ಯಾಯಬೇಕು ಅಂತಾ ಕೇಳಿ ಈ ಪ್ರತಿಭಟನೆ ಮಾಡುತ್ತಿದ್ದೇವೆ' ಎಂದು ನೊಂದ ಪುರುಷರೊಬ್ಬರು ಹೇಳಿದರು.

ಸ್ಟಾಪ್‌ ಕಿಲ್ಲಿಂಗ್‌ ಮೆನ್‌ ಎನ್ನುವ ಪೋಸ್ಟರ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಣ್ಣಿನಿಂದಲೇ ಅಮಾನುಷವಾಗಿ ಅಂತ್ಯಕಂಡ, ರಾಜಾ ರಘುವಂಶಿ, ಡಾ.ಸುಮಂತ್‌ ರೆಡ್ಡಿ, ಅತುಲ್‌ ಸುಭಾಷ್‌, ಡಿಜಿಪಿ ಓಂಪ್ರಕಾಶ್‌, ಸೌರಭ್‌ ರಜಪೂತ್‌, ತೇಜೇಶ್ವರ್‌, ಶರೋನ್‌ ರಾಜ್‌, ಶಂಕರಮೂರ್ತಿ ಹಾಗೂ ಲೋಕನಾಥ್‌ ಸಿಂಗ್‌' ಅವರ ಚಿತ್ರಗಳನ್ನು ಹಾಕಲಾಗಿತ್ತು.