ಬಿಕ್ಲಾ ಶಿವನ ಮರ್ಡರ್ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಪ್ರಕರಣಧ ಮಾಸ್ಟರ್ ಮೈಂಡ್ ಜಗ್ಗ ಅರೆಸ್ಟ್ ಆಗಿದ್ದಾನೆ. ವಿದೇಶಕ್ಕೆ ಹಾರಿ ಎಸ್ಕೇಪ್ ಆಗಿದ್ದ ಜಗ್ಗನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಆ.26) ರೌಡಿ ಶೀಟರ್ ಬಿಕ್ಲಾ ಶಿವ ಹತ್ಯೆ ಪ್ರಕರಣ ಮೇಲ್ನೋಟಕ್ಕೆ ಸರಳವಾಗಿ ಕಂಡಿದ್ದರೂ ಇದರ ಹಿಂದೆ ಪ್ರಭಾವಿಗಳ ಕೈವಾಡ ತನಿಖೆಯಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಪ್ರಕರಣಗಳಲ್ಲಿ ಬಿಕ್ಲಾ ಶಿವ ಪ್ರಕರಣ ಕೂಡ ಒಂದು. ಇದೀಗ ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಬಿಕ್ಲಾ ಶಿವ ಹತ್ಯೆಯ ಮಾಸ್ಟರ್ ಮೈಂಡ್ ಜಗ್ಗನನ್ನು ಬಂಧಿಸಿದ್ದಾರೆ. ಬಿಕ್ಲಾ ಶಿವ ಹತ್ಯೆ ಬಳಿಕ ವಿದೇಶಕ್ಕೆ ಹಾರಿ ಎಸ್ಕೇಪ್ ಆಗಿದ್ದ ಜಗ್ಗ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಿಕ್ಲಾ ಶಿವ ಹತ್ಯೆಯ ಹಿಂದಿದ್ದ ಮಾಸ್ಟರ್ ಮೈಂಡ್ ಜಗ್ಗನನ್ನು ಪೊಲೀಸರು ಬಂಧಿಸಿ ಇದೀಗ ಬೆಂಗಳೂರಿಗೆ ಕರೆ ತರುತ್ತಿದ್ದಾರೆ.
ಜಗ್ಗನ ಬಂಧನಕ್ಕ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಡಿದ್ದ ಸಿಐಡಿ
ಬಿಕ್ಲಾ ಶಿವ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಾಸ್ಟರ್ ಮೈಂಡ್ ಜಗ್ಗ, ಚೆನ್ನೈ ಮೂಲಕ ದುಬೈಗೆ ಎಸ್ಕೇಪ್ ಆಗಿದ್ದ. ಬಳಿಕ ದುಬೈನಿಂದ ಇತರ ದೇಶಗಳಿಗೆ ಪ್ರಯಾಣ ಮಾಡಿದ್ದ. ಬಂಧನ ತಪ್ಪಿಸಿಕೊಳ್ಳಲು ಜಗ್ಗ ಇನ್ನಿಲ್ಲದ ಪ್ರಯತ್ನ ಮಾಡಿದ್ದ. ಆದರೆ ಸಿಐಡಿ ಅಧಿಕಾರಿಗಳು ಬ್ಲೂಕಾರ್ನರ್ ನೋಟಿಸ್ ದಾರಿ ಮಾಡಿದ್ದರು. ಇದೀಗ ಸಿಐಡಿ ಅಧಿಕಾರಿಗಳು ಜಗ್ಗನ ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಬಿಕ್ಲಾ ಶಿವ ಹಂತಕರ ಮೇಲೆ ರೌಡಿಶೀಟ್ ಪಟ್ಟಿ ತೆರೆದೆ ಪೊಲೀಸ್
ರೌಡಿ ಶೀಟರ್ ಬಿಕ್ಲಾ ಹತ್ಯೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ರೌಡಿಶೀಟರ್ ಪಟ್ಟಿ ತರೆದಿದ್ದಾರೆ. ಜಗ್ಗ ಸೇರಿದಂತೆ ಈ ಪ್ರಕರಣ ಸಂಬಂಧ 10 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಗಾಲೇ ಬಂಧಿತರಾಗಿದ್ದ 9 ಮಂದಿ ವಿರುದ್ದ ರೌಡಿಶೀಟರ್ ಪಟ್ಟಿ ತೆರೆಯಲಾಗಿತ್ತು.ಬಂಧಿತ ಆರೋಪಿಗಳಾದ ಕಿರಣ್ , ಮದನ್ , ವಿಮಲ್ , ಪ್ರದೀಪ್ , ಪ್ಯಾಟ್ರಿಕ್, ಸ್ಯಾಮ್ಯುಯೆಲ್, ಸೇರಿ 9 ಮಂದಿಯ ವಿರುದ್ಧ ಭಾರತಿನಗರ ಪೊಲೀಸರು ರೌಡಿ ಶೀಟರ್ ಪಟ್ಟಿ ತೆರೆದಿದ್ದರು.
ಸಚಿವ ಭೈರತಿ ಬಸವರಾಜು ಹುಟ್ಟುಹಬ್ಬದಲ್ಲಿ ಆರೋಪಿಗಳು
ಬಿಕ್ಲಾ ಶಿವ ಹತ್ಯೆ ಪ್ರಕರಣ ಭಾರಿ ಸದ್ದು ಮಾಡಲು, ಆರೋಪಿಗಳಿಗೂ ರಾಜಕಾರಣಿಗಳು ಇರುವ ಲಿಂಕ್. ಈ ಪೈಕಿ ಬಿಕ್ಲಾ ಶಿವನ ಹತ್ಯೆ ಪ್ರಕರಣದ ಆರೋಪಿಗಳು ಸಚಿವ ಭೈರತಿ ಬಸವರಾಜು ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. ಎರಡು ಬಾರಿ ಭೈರತಿ ಬಸವರಾಜು ಬರ್ತ್‌ಡೇಗೆ ಬಂದು ಹೋಗಿದ್ದರು. ಕಿರುಣ್ ಹಾಗೂ ವಿಮಲ್ ಇಬ್ಬರು ಭೈರತಿ ಬಸವರಾಜು ಅವರಿಗೆ ಆಪ್ತರಾಗಿದ್ದರು.ಈ ಇಬ್ಬರು ಬಿಕ್ಲಾ ಶಿವ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಬಿಕ್ಲಾ ಶಿವನ ಹತ್ಯೆಗೆ ಎರಡು ಬಾರಿ ಪ್ಲಾನ್ ಮಾಡಿ ವಿಫಲಗೊಂಡಿದ್ದರು. ರಾಮಮೂರ್ತಿ ನಗರದ ಬಾರ್ ಒಂದರಲ್ಲಿ ಸ್ಕೆಚ್ ಹಾಕಿದ್ದರು.
ಬಿಕ್ಲಾ ಶಿವ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾನೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಆರೋಪಿಗಳು ಅಲರ್ಟ್ ಆಗಿದ್ದಾರೆ. ಬಿಕ್ಲಾ ಶಿವನ ಪ್ರತಿ ಚಲನವಲನ ವೀಕ್ಷಿಸಲು ಕೆಲವರ ನಿಯೋಜನೆ ಮಾಡಲಾಗಿತ್ತು.ಬಿಕ್ಲಾ ಶಿವನ ಮನೆಯಲ್ಲಿನ ಸಿಸಿಟಿವಿ, ರಸ್ತೆಯಲ್ಲಿ ಎಷ್ಟು ಮಂದಿ ಓಡಾತ್ತಾರೆ. ಯಾವಾಗ ಜನ ಕಡಿಮೆ ಇರುತ್ತಾರೆ. ಬಿಕ್ಲಾ ಶಿವನ ಮನೆಗೆ ಬರುತ್ತಿದ್ದ ಅತಿಥಿಗಳು ಯಾರು, ಯಾವ ವಾಹನದಲ್ಲಿ ಬರುತ್ತಾರೆ, ಹತ್ಯೆ ಬಳಿಕ ಎಸ್ಕೇಪ್ ಆಗುವುದು ಹೇಗೆ, ಇದಕ್ಕಾಗಿ ಎಲ್ಲಿ ಹತ್ಯೆ ಮಾಡಬೇಕು ಇವೆಲ್ಲವನ್ನು ಪ್ಲಾನ್ ಮಾಡಿ ಕಾರ್ಯಗತಗೊಳಿಸಲಾಗಿತ್ತು.
