ರೈಲು ಟಿಕೆಟ್ ಬುಕಿಂಗ್‌ನಿಂದ ಪ್ರಯಾಣ , ಹಿರಿಯ ನಾಗರೀಕರಿಗಿದೆ ಭರ್ಜರಿ ವಿನಾಯಿತಿ
ರೈಲು ಟಿಕೆಟ್ ಬುಕಿಂಗ್‌ನಿಂದ ಪ್ರಯಾಣ , ಹಿರಿಯ ನಾಗರೀಕರಿಗಿದೆ ಭರ್ಜರಿ ವಿನಾಯಿತಿ ನೀಡಲಾಗಿದೆ. ಹಲವು ಪ್ರಯಾಣಿಕರು ಕನ್ಸೆಶನ್ ಮಾಹಿತಿ ಇಲ್ಲದೆ ಪ್ರಯಾಣ ಮಾಡುತ್ತಾರೆ. ಈ ಎಲ್ಲಾ ಸೇವೆ ಉಚಿತವಾಗಿ ಹಿರಿಯ ನಾಗರೀಕರಿಗೆ ನೀಡಲಾಗುತ್ತದೆ.

ಪ್ರಯಾಣಕರಿಗೆ ಸಿಗುವ ಸೇವೆ
ಆಧುನಿಕ ಭಾರತದಲ್ಲಿ ಭಾರತೀಯ ರೈಲ್ವೇ ಅತ್ಯಾಧುನಿಕ ಸೌಲಭ್ಯಗಳನ್ನು ನೀಡುತ್ತಾ ಸೇವೆ ನೀಡುತ್ತಿದೆ. ಭಾರತೀಯ ರೈಲ್ವೇ ಚಿತ್ರಣ ಬದಲಾಗಿದೆ. ಬಹುತೇಕ ರೈಲ್ವೇ ನಿಲ್ದಾಣಗಳು ಮೇಲ್ದರ್ಜೆಗೆ ಏರಿಸಲಾಗಿದೆ. ರೈಲುಗಳು ಅತ್ಯಾಧುನಿಕಗೊಂಡಿದೆ. ವಂದೇ ಭಾರತ್ ಸೇರಿದಂತೆ ಹಲವು ಹೊಸ ರೈಲುಗಳು ಸೇರ್ಪಡೆಯಾಗಿದೆ. ಇದೇ ವೇಳೆ ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಗೆ ಹಲವು ಸೇವೆಗಳನ್ನು ನೀಡಲಾಗುತ್ತದೆ.
ಟಿಕೆಟ್ ಬುಕಿಂಗ್‌ನಿಂದ ವಿನಾಯಿತಿ ಆರಂಭ
ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರೀಕರಿಗೆ ಹಲವು ವಿನಾಯಿತಿ ನೀಡಲಾಗಿದೆ. ಜೊತೆಗೆ ಕೆಲ ಉಚಿತ ಸೇವೆಗಳು ಲಭ್ಯವಿದೆ. ಟಿಕೆಟ್ ಬುಕಿಂಗ್ ಮಾಡುವ ವೇಳೆ ಹಿರಿಯ ನಾಗರೀಕರಿಗೆ ಲೋವರ್ ಬರ್ತ್ ಆಯ್ಕೆ ನೀಡಲಾಗುತ್ತದೆ. 60 ವರ್ಷ ಮೇಲ್ಪಟ್ಟ ಪುರುಷರು ಹಾಗೂ 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರಯಾಣಕ್ಕೆ ಅನೂಕಲವಾಗುವಂತೆ ಲೋವರ್ ಬರ್ತ್ ನೀಡಲಾಗುತ್ತದೆ. ಟಿಕೆಟ್ ಬುಕಿಂಗ್ ಮಾಡುವಾಗಲೇ ವಯಸ್ಸಿನ ಆಧಾರದಲ್ಲಿ ಲೋವರ್ ಬರ್ತ್ ವಿನಾಯಿತಿಯನ್ನು ಪಡೆದುಕೊಳ್ಳಬಹುದು.ಇದರಿಂದ ಬರ್ತ್ ಹತ್ತುವ ಸಾಹಸ ಮಾಡಬೇಕಿಲ್ಲ.
ವ್ಹೀಲ್‌ಚೇರ್ ಸೌಲಭ್ಯ
ಭಾರತದ ಹಲವು ರೈಲು ನಿಲ್ದಾಣಗಳಲ್ಲಿ ವ್ಹೀಲ್‌ಚೇರ್ (ಗಾಲಿ ಕುರ್ಚಿ) ಲಭ್ಯವಿದೆ. ಹಿರಿಯ ನಾಗರೀಕರು, ವಿಶೇಷ ಚೇತನರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ವ್ಹೀಲ್‌ಚೇರ್ ಸೌಲಭ್ಯವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಇಷ್ಟೇ ಅಲ್ಲ ಇದೇ ವೇಳೆ ಲಗೇಜ್ ಬ್ಯಾಗ್‌ಗಳನ್ನು ಒಯ್ಯಲು ಪೋರ್ಟರ್ ಸೌಲಭ್ಯವೂ ಲಭ್ಯವಿದೆ.
ಗಾಲ್ಫ್ ವಾಹನ (ಬ್ಯಾಟರಿ ವಾಹನ)
ಹಿರಿಯ ನಾಗರೀಕರು ರೈಲು ಹತ್ತಲು ಪ್ಲಾಟ್‌ಫಾರ್ಮ್‌ನಲ್ಲೂ ದೂರ ಸಾಗಬೇಕು ಎಂದಿದ್ದರೆ, ಎಲೆಕ್ಟ್ರಿಕ್ ವಾಹನ ಸೌಲಭ್ಯವೂ ಲಭ್ಯವಿದೆ. ಇದು ಕೂಡ ಹಿರಿಯ ನಾಗರೀಕರು, ವಿಶೇಷ ಚೇತನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಉಚಿತವಾಗಿ ಭಾರತೀಯ ರೈಲ್ವೇ ಈ ಸೌಲಭ್ಯ ನೀಡುತ್ತಿದೆ.
ಹಿರಿಯ ನಾಗರೀಕರಿಗೆ ವಿಶೇಷ ಟಿಕೆಟ್ ಕೌಂಟರ್
ಹಿರಿಯ ನಾಗರೀಕರಿಗಾಗಿ ರೈಲು ನಿಲ್ದಾಣಗಳಲ್ಲಿ ವಿಶೇಷ ರೈಲು ಕೌಂಟರ್ ಸೌಲಭ್ಯ ಇಡಲಾಗಿದೆ. ಇಲ್ಲಿ ಹಿರಿಯ ನಾಗರೀಕರು ಕ್ಯೂನಲ್ಲಿ ನಿಲ್ಲಬೇಕಿಲ್ಲ. ಕಾಯಬೇಕಿಲ್ಲ, ನೇರವಾಗಿ ಕೌಂಟರ್‌ಗೆ ತೆರಲಿ ಟಿಕೆಟ್ ಬುಕಿಂಗ್ ಅಥವಾ ಇತರ ಬುಕಿಂಗ್ ಸಂಬಂಧಪಟ್ಟ ಕೆಲಸ ಕಾರ್ಯ ಮುಗಿಸಿಕೊಳ್ಳಲು ಅವಕಾಶ ನೀಡಾಗಿದೆ.
ಹಿರಿಯ ನಾಗರೀಕರಿಗೆ ವಿಶೇಷ ಟಿಕೆಟ್ ಕೌಂಟರ್
ಲೋಕಲ್ ರೈಲಿನಲ್ಲಿ ವಿಶೇಷ ಆಸನ ವ್ಯವಸ್ಥೆ
ಸಬರ್‌ಬನ್ ರೈಲುಗಳಲ್ಲಿ ಅಂದರೆ ನಗರ ಪ್ರದೇಶಗಳಾದ ಮುಂಬೈ, ಕೋಲ್ಕತಾ, ದೆಹಲಿ, ಚೆನ್ನೇ ಸೇರಿದಂತೆ ಹಲೆವೆಡೆ ಲೋಕಲ್ ಟ್ರೈನ್‌ನಲ್ಲಿ ಹಿರಿಯ ನಾಗರೀಕರಿಗೆ ವಿಶೇಷ ಆಸನ ವ್ಯವಸ್ಥೆ ಇದೆ. ಹಿರಿಯ ನಾಗರೀಕರಿಗಾಗಿ ಆಸನಗಳನ್ನು ಕಾಯ್ದಿರಿಸಲಾಗಿದೆ. ಈ ಮೂಲಕ ಹಿರಿಯ ನಾಗರೀಕರು ನಿಂತುಕೊಂಡು ಪ್ರಯಾಣ ಮಾಡಬೇಕಿಲ್ಲ.
ಲೋಕಲ್ ರೈಲಿನಲ್ಲಿ ವಿಶೇಷ ಆಸನ ವ್ಯವಸ್ಥೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

