ರೈಲ್ವೆ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕಿಂಗ್ ನ್ಯೂಸ್; ಡಿ.26ರಿಂದಲೇ ಹೊಸ ದರಗಳು ಅನ್ವಯ
Indian Railways Price: ಭಾರತೀಯ ರೈಲ್ವೆಯು ಡಿಸೆಂಬರ್ 26 ರಿಂದ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಹೆಚ್ಚಿಸಿದೆ.. ಈ ದರ ಏರಿಕೆಯು ಲೋಕಲ್ ರೈಲು ಮತ್ತು ಮಾಸಿಕ ಸೀಸನ್ ಟಿಕೆಟ್‌ಗಳಿಗೆ ಅನ್ವಯಿಸುವುದಿಲ್ಲ.

ಬೆಲೆ ಏರಿಕೆಯ ಶಾಕಿಂಗ್ ನ್ಯೂಸ್
ಭಾರತೀಯ ರೈಲ್ವೆ ತನ್ನ ಪ್ರಯಾಣಿಕೆರಿಗೆ ಬೆಲೆ ಏರಿಕೆಯ ಶಾಕಿಂಗ್ ನ್ಯೂಸ್ ನೀಡಿದೆ. ಡಿಸೆಂಬರ್ 26ರಿಂದಲೇ ಹೊಸ ದರಗಳು ಅನ್ವಯವಾಗಲಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. ಇದೀಗ ಪ್ರಯಾಣಿಕರು ಹೆಚ್ಚುವರಿಯಾಗಿ ಎಷ್ಟು ದರ ಪಾವತಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
ಹೆಚ್ಚು ದುಬಾರಿ
ಭಾರತೀಯ ರೈಲ್ವೆ ತನ್ನ ದರ ರಚನೆಯನ್ನು ಪರಿಷ್ಕರಿಸಲು ನಿರ್ಧರಿಸಿದ್ದು, ಸಾಮಾನ್ಯ, ಮೇಲ್/ಎಕ್ಸ್‌ಪ್ರೆಸ್ ಮತ್ತು ಎಸಿ ಕ್ಲಾಸ್ ಟಿಕೆಟ್‌ಗಳು ಹೆಚ್ಚು ದುಬಾರಿಯಾಗಲಿವೆ. ಪರಿಷ್ಕೃತ ದರಗಳು ಡಿಸೆಂಬರ್ 26, 2025 ರಿಂದ ಜಾರಿಗೆ ಬರಲಿದ್ದು, ಲೋಕಲ್ ರೈಲು ಮತ್ತು ಮಾಸಿಕ ಸೀಸನ್ ಟಿಕೆಟ್‌ಗಳ (MST) ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಎಷ್ಟು ದರ ಏರಿಕೆ?
215 ಕಿ.ಮೀ.ಗಿಂತ ಕಡಿಮೆಯ ಸಾಮಾನ್ಯ ದರ್ಜೆ (Ordinary Class) ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಇಲ್ಲ. Ordinary Classನ 215 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಳವಾಗಲಿದೆ.
ನಿರೀಕ್ಷಿತ ಆದಾಯ 600 ಕೋಟಿ
ಮೇಲ್/ಎಕ್ಸ್‌ಪ್ರೆಸ್ ನಾನ್-ಎಸಿ ಮತ್ತು ಎಸಿ ಕ್ಲಾಸ್ ಪ್ರಯಾಣಕ್ಕೆ ಪ್ರತಿ ಕಿ.ಮೀ.ಗೆ 2 ಪೈಸೆ ದರ ಏರಿಕೆಯಾಗಲಿದೆ ಎಂದು ಇಂಡಿಯನ್ಸ್ ರೈಲ್ವೇಸ್ ಮಾಹಿತಿ ನೀಡಿದೆ. ಈ ಬದಲಾವಣೆಯಿಂದ ನಿರೀಕ್ಷಿತ ಆದಾಯ 600 ಕೋಟಿ ರೂ.ಗಳಾಗಿದ್ದು, 500 ಕಿ.ಮೀ. ನಾನ್-ಎಸಿ ಪ್ರಯಾಣದ ಪ್ರಯಾಣಿಕರು ಹೆಚ್ಚುವರಿಯಾಗಿ 10 ರೂ.ಗಳನ್ನು ಪಾವತಿಸಬೇಕಾಗುತ್ತದೆ.
The Railway has announced a new fare structure effective from December 26, 2025, with no fare increase for journeys under 215 km in Ordinary Class. For journeys beyond 215 km, there will be a fare hike of 1 paise per km in Ordinary Class, and 2 paise per km for Mail/Express… pic.twitter.com/lD4fUQ8eeK
— ANI (@ANI) December 21, 2025
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

