MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸ್ಟಾರ್‌ ನಟಿಯಾಗಿ ಮಿಂಚುವ ಹೊತ್ತಲ್ಲೇ ವೈದ್ಯರ ನಿರ್ಲಕ್ಷ್ಯದಿಂದ ಪಾರ್ಶ್ವವಾಯು.. 34ನೇ ವರ್ಷದಲ್ಲೇ ಮುಗಿಯಿತು ಸುಂದರ ನಟಿಯ ಬಾಳು!

ಸ್ಟಾರ್‌ ನಟಿಯಾಗಿ ಮಿಂಚುವ ಹೊತ್ತಲ್ಲೇ ವೈದ್ಯರ ನಿರ್ಲಕ್ಷ್ಯದಿಂದ ಪಾರ್ಶ್ವವಾಯು.. 34ನೇ ವರ್ಷದಲ್ಲೇ ಮುಗಿಯಿತು ಸುಂದರ ನಟಿಯ ಬಾಳು!

Actress Viji Tragic Death at 34 'ಕೋಳಿ ಕೂವುದು' ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ ವಿಜಿ, ವೈದ್ಯಕೀಯ ಲೋಪದಿಂದ ಪಾರ್ಶ್ವವಾಯುವಿಗೆ ತುತ್ತಾದರು. ನಂತರ ಪ್ರೀತಿಯಲ್ಲಿ ಮೋಸಕ್ಕೊಳಗಾಗಿ, ತಮ್ಮ 34ನೇ ವಯಸ್ಸಿನಲ್ಲಿಯೇ ಆ*ತ್ಮಹ*ತ್ಯೆ ಮಾಡಿಕೊಂಡು ಜೀವನವನ್ನು ಅಂತ್ಯಗೊಳಿಸಿದರು.

2 Min read
Author : Santosh Naik
Published : Sep 24 2025, 01:25 PM IST
Share this Photo Gallery
  • FB
  • TW
  • Linkdin
  • Whatsapp
110
Image Credit : Social Media

ನಟಿಯರ ಜೀವನವು ಹೊರನೋಟಕ್ಕೆ ಆಕರ್ಷಕವಾಗಿ ಕಂಡರೂ, ತೆರೆಯ ಹಿಂದೆ ಅವರ ಕಷ್ಟಗಳು ಮತ್ತು ವೈಯಕ್ತಿಕ ನೋವುಗಳು ಅಡಗಿರುತ್ತವೆ.

210
Image Credit : Social Media

ಸಿನಿಮಾರಂಗದಲ್ಲಿ ಪ್ರಮುಖ ನಟಿಯಾಗಬೇಕೆಂಬ ಕನಸು ಕಂಡಿದ್ದ ನಟಿ ವಿಜಿ, ವೈದ್ಯಕೀಯ ಲೋಪ ಮತ್ತು ಪ್ರೀತಿಯಲ್ಲಿನ ವಂಚನೆಯಿಂದಾಗಿ ತಮ್ಮ 34ನೇ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡರು.

Related Articles

Related image1
ಫಸ್ಟ್‌ ನೈಟ್ ದಿನ ಮಂಚವೇರದ ಗಂಡನಿಂದ ₹2 ಕೋಟಿ ಹಣ ಕೇಳಿದ ಹೆಂಡತಿ!
Related image2
'ನನ್ನ ಪತಿ ಜೊತೆ ಬಿಗ್‌ಬಾಸ್‌ ಸ್ಪರ್ಧಿಯ ಅಕ್ರಮ ಸಂಬಂಧ..' ಸೆನ್ಸೇಷನಲ್‌ ವಿಡಿಯೋ ರಿಲೀಸ್‌ ಮಾಡಿದ ಹೀರೋ ಪತ್ನಿ!
310
Image Credit : Social Media

1982 ರಲ್ಲಿ 'ಕೋಳಿ ಕೂವುದು' ಚಿತ್ರದ ಮೂಲಕ ನಟನೆಗೆ ಕಾಲಿಟ್ಟ ವಿಜಿ, ಆ ಚಿತ್ರದ 'ಎಥೋ ಮೊಗಮ್ ಎಥೋ ಥಗಮ್' ಹಾಡಿನ ಮೂಲಕ ಭಾರೀ ಜನಪ್ರಿಯತೆ ಗಳಿಸಿದರು. ನಂತರ ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ದೊಡ್ಡ ನಟರ ಜೊತೆ ಕೆಲಸ ಮಾಡಿದರು.

410
Image Credit : Social Media

ಇಳಯ ದಳಪತಿ ವಿಜಯ್‌ ಅವರ ಜೊತೆಗಿನ'ಪೂವೆ ಉನಕ್ಕಾಗ' ಚಿತ್ರದ ಸಮಯದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ವಿಜಿ, ಈ ಹಂತದಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಚಿಕಿತ್ಸೆಯ ಸಮಯದಲ್ಲಿ ವೈದ್ಯಕೀಯ ಲೋಪದಿಂದಾಗಿ ಪಾರ್ಶ್ವವಾಯು ಪೀಡಿತರಾದರು. ಈ ಘಟನೆಯಿಂದಾಗಿ ಅವರು ವೀಲ್‌ಚೇರ್‌ಗೆ ಸೀಮಿತರಾಗಿ, ಚಿತ್ರರಂಗದಿಂದ ಬಹುಕಾಲ ದೂರ ಉಳಿಯಬೇಕಾಯಿತು.

510
Image Credit : Social Media

ಆ ಬಳಿಕ ಅಪೋಲೋ ಆಸ್ಪತ್ರೆಯ ವಿರುದ್ಧ ಕೇಸ್‌ ಹಾಕಿದ ವಿಜಿ, ಆಸ್ಪತ್ರೆಯ ಕಡೆಯಿಂದ 30 ಸಾವಿರ ರೂಪಾಯಿ ಪರಿಹಾರ ಹಣವನ್ನು ಪಡೆದುಕೊಂಡಿದ್ದರು.

610
Image Credit : Social Media

1996ರಲ್ಲಿ ಪೂವೆ ಉನಕ್ಕಾಗ ಸಿನಿಮಾದ ಬಳಿಕ ಆದ ಶಸ್ತ್ರಚಿಕಿತ್ಸೆಯಿಂದ ಪಾರ್ಶ್ವವಾಯು ಪೀಡಿತರಾದ ವಿಜಿ ಹಲವು ಸಿನಿಮಾಗಳನ್ನು ಕಳೆದುಕೊಂಡರು. 2000 ಇಸವಿಯಲ್ಲಿ ಸಿಮ್ಮಾಸನಂ ಚಿತ್ರದ ಮೂಲಕ ಬೆಳ್ಳಿತೆರೆಗೆ ವಾಪಸಾಗಿದ್ದರು. ವಿಜಯಕಾಂತ್‌, ವಿಜಿಗೆ ಸಿನಿಮಾ ಅವಕಾಶ ನೀಡಿದ್ದರು. ತಮ್ಮ ಮುಂದಿನ ಚಿತ್ರ ವಾನ್‌ಚಿಂಥನಮ್‌ನಲ್ಲೂ ನೀವು ಇರುತ್ತೀರಿ ಎಂದು ವಿಜಿಗೆ ಆಶ್ವಾಸನೆ ನೀಡಿದ್ದರು.

710
Image Credit : Social Media

ಆದರೆ, ಸಿಮ್ಮಾಸನಂ ಸಿನಿಮಾವೇ ವಿಜಿ ಅವರ ಕೊನೆಯ ಚಿತ್ರವಾಯಿತು.ನಿರ್ದೇಶಕ ಎ.ಆರ್. ರಮೇಶ್ ಅವರು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದು ವಿಜಿಯವರ ನೋವನ್ನು ಮತ್ತಷ್ಟು ಹೆಚ್ಚಿಸಿತು.

810
Image Credit : Social Media

ವರ್ಷಗಳ ನೋವು ಮತ್ತು ವೈಯಕ್ತಿಕ ವಂಚನೆಯಿಂದಾಗಿ ಹತಾಶರಾದ ವಿಜಿ, 2000ನೇ ಇಸವಿಯಲ್ಲಿ ತಮ್ಮ ಮನೆಯಲ್ಲಿ ಆ*ತ್ಮಹ*ತ್ಯೆ ಮಾಡಿಕೊಂಡರು. 

910
Image Credit : Social Media

ಅವರ ಆತ್ಮಹತ್ಯಾ ಪತ್ರದಲ್ಲಿ ರಮೇಶ್‌ರ ವಂಚನೆಯ ಬಗ್ಗೆ ಸ್ಪಷ್ಟವಾಗಿ ಬರೆದಿದ್ದು, ಈ ಘಟನೆ ಚಿತ್ರರಂಗವನ್ನು ಬೆಚ್ಚಿಬೀಳಿಸಿತ್ತು. ಪೊಲೀಸರು ರಮೇಶ್ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದರು.

1010
Image Credit : Social Media

16ನೇ ವಯಸ್ಸಿನಲ್ಲಿ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದ ವಿಜಿ, ಕೇವಲ 34ರ ಹರೆಯದಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿದರು. ಅವರ ದುರಂತಮಯ ಕಥೆಯು ಇಂದಿಗೂ ಅನೇಕರಿಗೆ ನೋವುಂಟು ಮಾಡುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಮನರಂಜನಾ ಸುದ್ದಿ
ಸುದ್ದಿ
ನಟಿ
ತಮಿಳು

Latest Videos
Recommended Stories
Recommended image1
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Recommended image2
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Recommended image3
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Related Stories
Recommended image1
ಫಸ್ಟ್‌ ನೈಟ್ ದಿನ ಮಂಚವೇರದ ಗಂಡನಿಂದ ₹2 ಕೋಟಿ ಹಣ ಕೇಳಿದ ಹೆಂಡತಿ!
Recommended image2
'ನನ್ನ ಪತಿ ಜೊತೆ ಬಿಗ್‌ಬಾಸ್‌ ಸ್ಪರ್ಧಿಯ ಅಕ್ರಮ ಸಂಬಂಧ..' ಸೆನ್ಸೇಷನಲ್‌ ವಿಡಿಯೋ ರಿಲೀಸ್‌ ಮಾಡಿದ ಹೀರೋ ಪತ್ನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved