- Home
- Entertainment
- TV Talk
- ಬಿಗ್‌ಬಾಸ್ ಮನೆ ಪುಟ್ಟಿಯ ಪ್ರಯತ್ನಕ್ಕೆ ವೀಕ್ಷಕರ ಮೆಚ್ಚುಗೆ; ಸುದೀಪ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ತಬ್ಬಿಬ್ಬು
ಬಿಗ್‌ಬಾಸ್ ಮನೆ ಪುಟ್ಟಿಯ ಪ್ರಯತ್ನಕ್ಕೆ ವೀಕ್ಷಕರ ಮೆಚ್ಚುಗೆ; ಸುದೀಪ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ತಬ್ಬಿಬ್ಬು
Sudeep questions Rakshitha Shetty: ಶನಿವಾರದ ಗಂಭೀರ ಸಂಚಿಕೆಯ ಬಳಿಕ, 'ಸೂಪರ್ ಸಂಡೇ ವಿತ್ ಬಾದ್‌ಷಾ' ಎಪಿಸೋಡ್ ತಮಾಷೆಯಾಗಿರಲಿದೆ. ಬಿಗ್‌ಬಾಸ್ ಎಂದರೇನು ಎಂಬ ಸುದೀಪ್ ಅವರ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಉತ್ತರಿಸಿದ್ದು ಹೀಗೆ.

ಸೂಪರ್ ಸಂಡೇ ವಿತ್ ಬಾದ್‌ಷಾ ಎಪಿಸೋಡ್
ಶನಿವಾರದ ಸಂಚಿಕೆಯಲ್ಲಿ ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮನೆಯ ಆಟದ ಗಂಭೀರತೆ ಕುರಿತು ಸುದೀಪ್ ಪಾಠ ಮಾಡಿದ್ದರು. ಮನೆಯಲ್ಲಿರಲು ಆಗಲ್ಲ ಎಂಬ ಭಾವನೆ ಬಂದಿದ್ದರೆ ಹೊರಗೆ ಬರಬಹುದು ಎಂದು ಬಾಗಿಲು ಸಹ ಓಪನ್ ಮಾಡಿಸಿದ್ದರು. ಇಂದಿನ ಸೂಪರ್ ಸಂಡೇ ವಿತ್ ಬಾದ್‌ಷಾ ಎಪಿಸೋಡ್ ಸ್ವಲ್ಪ ತಮಾಷೆಯಾಗಿರುತ್ತದೆ.
ಬಿಗ್‌ಬಾಸ್ ಎಂದರೇನು
ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಬಿಗ್‌ಬಾಸ್ ಎಂದರೇನು ಅಂತ ರಕ್ಷಿತಾ ಶೆಟ್ಟಿ ಅವರಿಗೆ ಸುದೀಪ್ ಪ್ರಶ್ನೆ ಮಾಡುತ್ತಾರೆ. ಬಿಗ್‌ಬಾಸ್ ಅಂದ್ರೆ ಲೈಪ್‌ನ ಚಾಲೆಂಜ್ ಅಂತಾ ಹೇಳುತ್ತಾರೆ. ಬಿಗ್‌ಬಾಸ್ ಪ್ರಮೋಟ್ ಮಾಡಿ ಅಂದ್ರೆ ಏನು ಮಾಡಿರುತ್ತೀರಿ ಎಂದು ಕೇಳುತ್ತಾರೆ. ಒಂದು ಸ್ಪರ್ಧಿಯಲ್ಲಿರೋದು ಮತ್ತೊಂದು ಸ್ಪರ್ಧಿಯಲ್ಲಿರಲ್ಲ. ರೀಸನ್ ಹೇಳೋಕೆ ಅದೇ ಇಲ್ಲ ಎಂದು ರಕ್ಷಿತಾ ಶೆಟ್ಟಿ ಬ್ಲಾಂಕ್ ಆಗುತ್ತಾರೆ.
ಹಾರ್ಟ್ ಎಮೋಜಿ
ಕಲರ್ಸ್ ಕನ್ನಡದ ಈ ಪ್ರೋಮೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಕನ್ನಡ ಕಲಿಯೋಕೆ ತುಂಬಾ ಇಷ್ಟಪಡುತ್ತಾರೆ. ವೆರಿ ಹಾರ್ಟ್ಲಿ ಇಷ್ಟ ಆದರು ಎಂದು ಬರೆದುಕೊಂಡು ಹಾರ್ಟ್ ಎಮೋಜಿ ಹಾಕಿದ್ದಾರೆ. ಪಾಪ ರಕ್ಷಿತಾ ಮಾತಾಡೋದಿಕ್ಕೆ ಟ್ರೈ ಮಾಡ್ತಾ ಇದ್ದಾಳೆ. ಆದರೆ ಅವಳಿಗೆ ಬರ್ತಾ ಇಲ್ಲ ಅಷ್ಟೇ. ಆದರೂ ಪರವಾಗಿಲ್ಲ ಕನ್ನಡ ಕಲಿಯೋಕೆ ಟ್ರೈ ಮಾಡ್ತಾ ಇದ್ದಾಳೆ ಎಂದು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಕಾಕ್ರೋಚ್ ಸುಧಿಗೆ ಕೇಳಿದ್ರೆ ಚಂದ್ರಪ್ರಭಾ I Love You ಅಂತ ಹೇಳೋದಾ?
ರಕ್ಷಿತಾ ಶೆಟ್ಟಿ ಸೇವ್
ಈ ವಾರ ಮನೆಯಿಂದ ಹೊರಗೆ ಹೋಗಲು ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿಯೇ ಅಶ್ವಿನಿ ಗೌಡ ಜೊತೆಯಲ್ಲಿ ರಕ್ಷಿತಾ ಶೆಟ್ಟಿ ಸೇವ್ ಆಗಿದ್ದಾರೆ.
ಇದನ್ನೂ ಓದಿ: BBK 12: ಸುದೀಪ್ ಬಂದು ಹೋದ್ಮೇಲೆ ಜಗಳ ಶುರು ಅಂತಾರೆ: ಸಿಡಿದೆದ್ದ ಮಲ್ಲಮ್ಮ, ದಿಗ್ಭ್ರಮೆಗೊಂಡ ಕಿಚ್ಚ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

