- Home
- Entertainment
- TV Talk
- ಸೀರೆ ಏನೋ ಬದಲಾಯ್ತು, ಆ ಸಿಂಗಲ್ ಲೈನ್ ಕೂದ್ಲು ಬದಲಾಯಿಸಿ ಪ್ಲೀಸ್: Amruthadhaare ಫ್ಯಾನ್ಸ್ ಮನವಿ
ಸೀರೆ ಏನೋ ಬದಲಾಯ್ತು, ಆ ಸಿಂಗಲ್ ಲೈನ್ ಕೂದ್ಲು ಬದಲಾಯಿಸಿ ಪ್ಲೀಸ್: Amruthadhaare ಫ್ಯಾನ್ಸ್ ಮನವಿ
'ಅಮೃತಧಾರೆ' ಧಾರಾವಾಹಿಯಲ್ಲಿ ಜೈದೇವ್ ಬೀದಿಗೆ ಬಂದಿದ್ದು, ಶಕುಂತಲಾ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾಳೆ. ಈ ನಡುವೆ, ಶಕುಂತಲಾ ಪಾತ್ರದ ಸೀರೆ ಮತ್ತು ಬಿಳಿ ಕೂದಲಿನ ಬಗ್ಗೆ ನೆಟ್ಟಿಗರು ಮಾಡುತ್ತಿರುವ ತರ್ಲೆ ಕಾಮೆಂಟ್ಗಳು ಮತ್ತು ಟ್ರೋಲ್ಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.

ಅಮೃತಧಾರೆ ಸೀರಿಯಲ್
Amruthadhaare ಸೀರಿಯಲ್ನಲ್ಲಿ ಸದ್ಯ ಶಕುಂತಲಾ ಬೀದಿಪಾಲು ಮಾಡಿದ್ದ ಜೈದೇವ್ ಕೂಡ ಬೀದಿಗೆ ಬಂದಿದ್ದಾನೆ. ಕಟ್ಟುಕೊಂಡ ಪತ್ನಿಯನ್ನು ಬಿಟ್ಟು ದಿಯಾಳ ಮದುವೆಯಾಗಿದ್ದ ಜೈದೇವ್ ದಿಯಾ ತಕ್ಕ ಪಾಠ ಕಲಿಸಿ ಪರಾರಿಯಾಗಿದ್ದಾಳೆ.
ಶಕುಂತಲಾ ಕಣ್ಣೀರು
ಶಕುಂತಲಾ ಗೌತಮ್ ಮನೆ ಸೇರಿದ್ದಾಳೆ. ಅಲ್ಲಿ ಅವಳಿಗೆ ಭೂಮಿಕಾ, ಗೌತಮ್ ಅಮ್ಮ ಎಲ್ಲರೂ ಸಾಂತ್ವನ ಹೇಳುತ್ತಿದ್ದಾರೆ. ಮಾಡಿದ ತಪ್ಪಿಗೆ ಶಕುಂತಲಾ ಕಣ್ಣೀರು ಹಾಕುತ್ತಲೇ ಇದ್ದಾಳೆ.
ನೆಟ್ಟಿಗರ ಕಮೆಂಟ್ಸ್
ಇದು ಸದ್ಯ ಸೀರಿಯಲ್ ಸ್ಟೋರಿಯಾದ್ರೆ, ನೆಟ್ಟಿಗರ ಕಣ್ಣುಮಾತ್ರ ಶಕುಂತಲಾ ಪಾತ್ರಧಾರಿಯ ಸೀರೆ ಮತ್ತು ಬಿಳಿ ಕೂದಲ ಮೇಲೆ ನೆಟ್ಟಿದೆ. ಶಕುಂತಲಾ ಆಗರ್ಭ ಶ್ರೀಮಂತೆಯಾಗಿದ್ದಾಗ, ಪದೇ ಪದೇ ಒಂದೇ ಸೀರೆ ಉಡುತ್ತಿರುವುದು ಏಕೆ, ಪ್ಲೀಸ್ ಸೀರೆ ಬದಲಾಯಿಸಿ ಎಂದು ನೆಟ್ಟಿಗರು ಕಮೆಂಟ್ಸ್ನಲ್ಲಿ ಹೇಳುತ್ತಲೇ ಬಂದಿದ್ದರು.
ಸೇಮ್ ಸೇಮ್ ಸೀರೆ
ರೇಷ್ಮೆ ಸೀರೆಯ ಬಣ್ಣಗಳು ಬಹುತೇಕ ಒಂದೇ ರೀತಿ ಇರುತ್ತಿದ್ದುದರಿಂದ ಪದೇ ಪದೇ ಅದೇ ಸೀರೆ ಏಕೆ ಎಂದು ಪ್ರಶ್ನಿಸುತ್ತಿದ್ದರು. ಆದರೆ ಇದೀಗ ಯಾಕೋ ನೆಟ್ಟಿಗರಿಗೆ ಖುಷಿಯಾದಂತಿದೆ. ಶಕುಂತಲಾ ಬೀದಿಪಾಲಾದ ಮೇಲೆ ಬೇರೆ ಬೇರೆ ಸೀರೆ ಉಡ್ತಿರೋದು ಖುಷಿ ಕೊಡ್ತಿದೆ ಎಂದು ಕಾಲೆಳೆಯುತ್ತಿದ್ದಾರೆ.
ಸಿಂಗಲ್ ಬಿಳಿ ಕೂದಲು
ಆದರೆ ಅದೇ ಇನ್ನೊಂದೆಡೆ, ವಯಸ್ಸಾದಂತೆ ಕಾಣಿಸಲು ಸಿಂಗಲ್ ಲೈನ್ ಬಿಳಿಕೂದಲು ಹಾಕುವ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ವಯಸ್ಸಾಗಿದೆ ಎಂದು ಮುಖ ನೋಡಿದ್ರೆ ತಿಳಿಯತ್ತೆ. ಬಹುಶಃ ಒರಿಜಿನಲ್ ಕೂದಲಿಗೂ ಡೈ ಹಾಕಿಕೊಂಡಿರಬಹುದು. ಮತ್ಯಾಕೆ ಈ ಸಿಂಗಲ್ ಲೈನ್ ಬಿಳಿ ಕೂದಲು ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.
ತರ್ಲೆ ಕಮೆಂಟಿಗರು
ಒಟ್ಟಿನಲ್ಲಿ ಸೀರಿಯಲ್ ಪ್ರೇಮಿಗಳು ಸೀರಿಯಲ್ ನೋಡಿದ್ರೆ, ಕೆಲವು ತರ್ಲೆ ಕಮೆಂಟಿಗರು ಮಾತ್ರ ಕಾಲೆಳೆಯಲು ಏನು ಸಿಗುತ್ತದೆ ಎಂದು ಕಾಯುತ್ತಲೇ ಇರುತ್ತಾರೆ.
ಮಗಳು ಎಲ್ಲಿ?
ಇನ್ನು ಸೀರಿಯಲ್ ವಿಷ್ಯಕ್ಕೆ ಬರುವುದಾದರೆ, ಸೀರಿಯಲ್ ಬಹುತೇಕ ಅಂತಿಮ ಘಟ್ಟದಲ್ಲಿದೆ. ಗೌತಮ್ ದಿವಾನ್ ಮತ್ತೆ ಸಾಮ್ರಾಜ್ಯ ಕಟ್ಟಿದ್ದಾನೆ. ಜೈದೇವ ಜೈಲುಪಾಲಾಗ್ತಾನೆ. ಶಕುಂತಲಾಗೆ ಬುದ್ಧಿ ಬಂದಿದೆ. ಗೌತಮ್ ಮತ್ತು ಭೂಮಿಕಾ ಮಗಳು ಸಿಕ್ಕರೆ ಅಲ್ಲಿಗೆ ಸ್ಟೋರಿ ಮುಗಿದಂತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

