- Home
- Entertainment
- TV Talk
- ತಲೆ ಮೇಲೆ ಕೈ ಹೊತ್ತು ಮಲಗಿದ ಬಿಗ್‌ಬಾಸ್ ಸ್ಪರ್ಧಿ; ಏನಮ್ಮಾ ನಿನ್ನ ಚಿಂತೆ ಎಂದ ಫ್ಯಾನ್ಸ್!
ತಲೆ ಮೇಲೆ ಕೈ ಹೊತ್ತು ಮಲಗಿದ ಬಿಗ್‌ಬಾಸ್ ಸ್ಪರ್ಧಿ; ಏನಮ್ಮಾ ನಿನ್ನ ಚಿಂತೆ ಎಂದ ಫ್ಯಾನ್ಸ್!
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕನ್ನಡ ಬಿಗ್‌ಬಾಸ್ ಒಟಿಟಿ ಸ್ಪರ್ಧಿ ನಟಿ ತಲೆ ಮೇಲೆ ಕೈ ಹೊತ್ತು ಮಲಗಿರುವ ಫೋಟೋ ವೈರಲ್ ಆಗಿದೆ.

ಕನ್ನಡ ಬಿಗ್‌ಬಾಸ್ ಒಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಸೋನು ಹಂಚಿಕೊಂಡ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಎರಡು ದಿನಗಳ ಹಿಂದೆ ತಲೆ ಮೇಲೆ ಕೈ ಹೊತ್ತು ಮಲಗಿದ ಪೋಸ್‌ನಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸೋನು ಶ್ರೀನಿವಾಸ್ ಗೌಡ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ತರೇಹವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.
ಇತ್ತೀಚೆಗಷ್ಟೇ ಶ್ರೀಲಂಕಾಗೆ ಭೇಟಿ ನೀಡಿದ್ದ ಸೋನು ಶ್ರೀನಿವಾಸ್ ಗೌಡ ಕಡಲತೀರದಲ್ಲಿ ಟೀ ಪೀಸ್ ಡ್ರೆಸ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಹಾಗೆ ಶ್ರೀಲಂಕಾ ಪ್ರವಾಸಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋ ಶೇರ್ ಮಾಡಿಕೊಂಡಿದ್ದರು. ಆಟೋದಲ್ಲಿ ಚಿಲ್ಲರೆ ಸಮಸ್ಯೆ ಎದುರಿಸಿದರ ಬಗ್ಗೆ ತಿಳಿಸಿದ್ದರು.
ಇದನ್ನೂ ಓದಿ: ನಾವು ದುಬಾರಿ ಕಾರಿನಲ್ಲಿ ಓಡಾಡಬೇಕು ದೊಡ್ಡ ಶ್ರೀಮಂತರು ಅಂತ ತೋರಿಸಿಕೊಳ್ಳುವುದು ನಿಲ್ಲಿಸಬೇಕು: ನಟಿ ಸೋನು ಗೌಡ
ತಲೆ ಮೇಲೆ ಕೈ ಹೊತ್ತು ಮಲಗಿದ ಫೋಟೋಗೆ ನಿದ್ದೆ ಮಾಡ್ತಾ ಇದ್ದೀಯ? Nice body language. ನಿನ್ನ ಸ್ವಾತಂತ್ರ್ಯ ನೀನು ಹೇಗ್ ಬೇಕಾದ್ರು ಇರಬಹುದು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಒಂದು ಯುಟ್ಯೂಬ್ ಶಾರ್ಟ್‌ಸ್ 2.5 ಲಕ್ಷ ರೂಪಾಯಿ ಚಾರ್ಜ್ ಮಾಡೋದಾಗಿ ಸೋನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 'ಯುಟ್ಯೂಬ್ ಪ್ರಮೋಶನ್‌ಗೆ ಇಷ್ಟು ಚಾರ್ಜ್ ಮಾಡ್ತೀನಿ'- Sonu Gowda ಆದಾಯ ಕೇಳಿದ್ರೆ ಹೌಹಾರೋದು ಪಕ್ಕಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

