MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಧ್ರುವಂತ್ ಜೊತೆ ಅಪ್ಪೆ ಸಾರು ಸವಿದ ರಕ್ಷಿತಾ, ಜೋಡಿ ನೋಡಿ ವೀಕ್ಷಕರು ಖುಷ್

ಧ್ರುವಂತ್ ಜೊತೆ ಅಪ್ಪೆ ಸಾರು ಸವಿದ ರಕ್ಷಿತಾ, ಜೋಡಿ ನೋಡಿ ವೀಕ್ಷಕರು ಖುಷ್

Bigg Boss Rakshita Shetty  : ಬಿಗ್ ಬಾಸ್ 11ರ ನಂತ್ರ ಎಲ್ಲ ಮಾಜಿ ಸ್ಪರ್ಧಿಗಳು ತಮ್ಮ ತಮ್ಮ ಪ್ರಾಜೆಕ್ಟ್ ನಲ್ಲಿ ಬ್ಯುಸಿ ಇದ್ದಾರೆ. ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಕೂಡ ತಮ್ಮ ಕೆಲ್ಸದಲ್ಲಿ ಬ್ಯುಸಿ ಇದ್ದು, ಈಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

2 Min read
Author : Roopa Hegde
Published : Apr 27 2026, 11:04 AM IST
Share this Photo Gallery
  • FB
  • TW
  • Linkdin
  • Whatsapp
17
ಹಾವು ಮುಂಗುಸಿ
Image Credit : Asianet News

ಹಾವು ಮುಂಗುಸಿ

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾಗಿದ್ದ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಹಾವು ಮುಂಗುಸಿಯಂತೆ ಜಗಳ ಆಡ್ತಿದ್ದರು. ಇಬ್ಬರೂ ವೀಕ್ಷಕರಿಗೆ ಸಖತ್ ಎಂಟರ್ಟೈನ್ಮೆಂಟ್ ನೀಡಿದ್ದು ಸತ್ಯ. ಆದ್ರೆ ಇಬ್ಬರು ಒಟ್ಟಿಗೆ ಇದ್ದಾಗ ಮಾತ್ರ ಸಿಕ್ಕಾಪಟ್ಟೆ ಜಗಳ ಆಡಿದ್ದಾರೆ.

27
ಹೊರಗೂ ಸಿಗಲ್ಲ ಎಂದಿದ್ದ ರಕ್ಷಿತಾ
Image Credit : Asianet News

ಹೊರಗೂ ಸಿಗಲ್ಲ ಎಂದಿದ್ದ ರಕ್ಷಿತಾ

ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲಿ ರಕ್ಷಿತಾ ಹಾಗೂ ಧ್ರುವಂತ್ ಮಧ್ಯೆ ಒಳ್ಳೆ ಬಾಂಡಿಂಗ್ ಇತ್ತು. ಅಣ್ಣ – ತಂಗಿ ಅಂದ್ಕೊಂಡು ಆಟ ಮುಂದುವರೆಸಿದ್ರು. ಆದ್ರೆ ಕೆಲ ವಾರದ ನಂತ್ರ ಗೇಮ್ ಸಂಪೂರ್ಣ ಬದಲಾಗಿತ್ತು. ಧ್ರುವಂತ್ ಹಾಗೂ ರಕ್ಷಿತಾ ಮುಖ ನೋಡಿದ್ರೆ ಜಗಳ ಆಡ್ತಿದ್ರು. ಬಿಗ್ ಬಾಸ್ ಮುಗಿಯೋ ಟೈಂನಲ್ಲಿ ಕೂಡ ರಕ್ಷಿತಾ, ಬಿಗ್ ಬಾಸ್ ನಿಂದ ಹೊರಗೆ ಬಂದ್ಮೇಲೆ ಧ್ರುವಂತ್ ಭೇಟಿ ಆಗಲ್ಲ, ಧ್ರುವಂತ್ ಜೊತೆ ಫ್ರೆಂಡ್ಶಿಪ್ ಮುಂದುವರೆಸಲ್ಲ ಎಂದಿದ್ದರು.

Related Articles

Related image1
Bhagyalakshmi Serial‌:‌ ಧಾರಾವಾಹಿಯಲ್ಲಿ ಜೈಲಿಗೆ..., ರಿಯಲ್‌ ಲೈಫ್‌ನಲ್ಲಿ ಜಪಾನ್‌ಗೆ; ಸುದರ್ಶನ್‌ ರಂಗಪ್ರಸಾದ್‌ TRIP
Related image2
ಗ್ರೀಸ್ ನಲ್ಲಿ ಅಕ್ಕನ ಜೊತೆ ಕಾವ್ಯಾ ಗೌಡ… ಧರಿಸಿದ ಬಟ್ಟೆ, ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ
37
ಧ್ರುವಂತ್ ಗೆ ಫೋನ್ ನಂಬರ್ ನೀಡಿದ ರಕ್ಷಿತಾ
Image Credit : Asianet News

ಧ್ರುವಂತ್ ಗೆ ಫೋನ್ ನಂಬರ್ ನೀಡಿದ ರಕ್ಷಿತಾ

ಇವೆಂಟ್ ಒಂದರಲ್ಲಿ ರಕ್ಷಿತಾ ಹಾಗೂ ಧ್ರುವಂತ್ ಭೇಟಿಯಾಗಿದ್ದಾರೆ. ಬಹಳ ದಿನಗಳ ನಂತ್ರ ಧ್ರುವಂತ್ ಭೇಟಿಯಾದ ರಕ್ಷಿತಾ ಖುಷಿ ವ್ಯಕ್ತಪಡಿಸಿದ್ದಾರೆ. ಧ್ರುವಂತ್ ಅಣ್ಣ ಅಂತ ಹೇಳಿದ್ದಲ್ಲದೆ, ಧ್ರುವಂತ್ ಗೆ ತಮ್ಮ ಫೋನ್ ನಂಬರ್ ನೀಡಿದ್ದಾರೆ.

47
ಅಪರೂಪಕ್ಕೆ ಸಿಕ್ಕಿದ್ರೆ ಖುಷಿ
Image Credit : Asianet News

ಅಪರೂಪಕ್ಕೆ ಸಿಕ್ಕಿದ್ರೆ ಖುಷಿ

ಬಿಗ್ ಬಾಸ್ ಮನೆಯಲ್ಲಿ 24 ಗಂಟೆ ಒಟ್ಟಿಗಿದ್ರೆ ಹಿಂಸೆಯಾಗುತ್ತೆ. ಹೀಗೆ ಐದು, ಹತ್ತು ನಿಮಿಷಕ್ಕೆ ಸಿಕ್ಕಿದ್ರೆ ಎಷ್ಟು ಖುಷಿ ಅಲ್ವ ಅಂತ ಧ್ರುವಂತ್ ನೋಡ್ತಿದ್ದಂತೆ ರಕ್ಷಿತಾ ಹೇಳಿದ್ದಾರೆ. ಅಪ್ಪೆ ಸಾರನ್ನು ಕುಡಿದ ರಕ್ಷಿತಾ, ಅಪ್ಪೆ ಸಾರಿನ ಜೊತೆ ಧ್ರುವಂತ್ ಅಣ್ಣ, ಮೊದಲ ಬಾರಿ ಅಪ್ಪೆ ಸಾರು ಟ್ರೈ ಮಾಡಿದ್ದೇನೆ ಅಂತ ರಕ್ಷಿತಾ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ.

57
ಅಡುಗೆ ಮಾಡೋಕೆ ಮನೆ ಸಿದ್ಧ
Image Credit : Asianet News

ಅಡುಗೆ ಮಾಡೋಕೆ ಮನೆ ಸಿದ್ಧ

ಬಿಗ್ ಬಾಸ್ ಮುಗಿದ್ಮೇಲೆ ರಕ್ಷಿತಾ ಶೆಟ್ಟಿ ಇವೆಂಟ್, ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಿದ್ದಾರೆ. ಅವರು ಹೇಳಿದಂತೆ, ಆಸೆಯಂತೆ ಕಾಡಿನ ಮಧ್ಯೆ ಪಟಾಕಿ ಕಿಚನ್ ಸಿದ್ಧವಾಗಿದೆ. ಅದನ್ನು ರಕ್ಷಿತಾ ಶೆಟ್ಟಿ ಪ್ರೀತಿಯ ಅಣ್ಣ ರಘು ಉದ್ಘಾಟನೆ ಮಾಡಿದ್ದಾರೆ. ಇನ್ಮುಂದೆ ಕಾಡಿನ ಮಧ್ಯೆ ಇರುವ ಪಟಾಕಿ ಕಿಚನ್ ನಲ್ಲಿಯೇ ರಕ್ಷಿತಾ ಅಡುಗೆ ಮಾಡಿ ಅದನ್ನು ಯುಟ್ಯೂಬ್ ಗೆ ಪೋಸ್ಟ್ ಮಾಡಲಿದ್ದಾರೆ.

67
ರಕ್ಷಿತಾ – ರಾಘು ಡಾನ್ಸ್ ಹಿಟ್
Image Credit : Asianet News

ರಕ್ಷಿತಾ – ರಾಘು ಡಾನ್ಸ್ ಹಿಟ್

ರಕ್ಷಿತಾ, ಅಡುಗೆ ಮಾಡ್ತಾ, ರಘು ಜೊತೆ ಜಿಮ್ ಗೆ ಭೇಟಿ ನೀಡ್ತಾ, ಇವೆಂಟ್ ಮ್ಯಾನೇಜ್ ಮಾಡ್ತಾ, ರಾಘು ಜೊತೆ ಡಾನ್ಸ್ ಮಾಡ್ತಾ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಸದಾ ಹೆಣ್ಣು ವೇಷದಲ್ಲಿಯೇ ಕಾಣಿಸಿಕೊಳ್ಳುವ ಮಜಾ ಭಾರತ ಖ್ಯಾತಿಯ ರಾಘು, ರಕ್ಷಿತಾ ಜೊತೆ ಕನ್ನಡ ರೋಮ್ಯಾಂಟಿಕ್ ಹಾಡಿಗೆ ಡಾನ್ಸ್ ಮಾಡಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

77
ಬಳಕೆದಾರರು ಏನಂತಾರೆ?
Image Credit : Asianet News

ಬಳಕೆದಾರರು ಏನಂತಾರೆ?

ರಕ್ಷಿತಾ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಅಣ್ಣ ತಂಗಿ ಜೋಡಿ ಸೂಪರ್. ಹೀಗೆ ವಿಡಿಯೋ ಮಾಡ್ತಿರಿ ಅಂತ ವೀಕ್ಷಕರು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ರಕ್ಷಿತಾ

Latest Videos
Recommended Stories
Recommended image1
ಗ್ರೀಸ್ ನಲ್ಲಿ ಅಕ್ಕನ ಜೊತೆ ಕಾವ್ಯಾ ಗೌಡ… ಧರಿಸಿದ ಬಟ್ಟೆ, ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ
Recommended image2
Bhagyalakshmi Serial‌:‌ ಧಾರಾವಾಹಿಯಲ್ಲಿ ಜೈಲಿಗೆ..., ರಿಯಲ್‌ ಲೈಫ್‌ನಲ್ಲಿ ಜಪಾನ್‌ಗೆ; ಸುದರ್ಶನ್‌ ರಂಗಪ್ರಸಾದ್‌ TRIP
Recommended image3
Bhagyalakshmi Serial: ಮೊಂಡು ಹಠದಿಂದ ಮುಗ್ಧ ಹೆಣ್ಣು ಕಷ್ಟದಲ್ಲೇ ಕೈತೊಳೆಯೋ ಹಾಗೆ ಮಾಡಿದ ಕುಸುಮಾ!
Related Stories
Recommended image1
Bhagyalakshmi Serial‌:‌ ಧಾರಾವಾಹಿಯಲ್ಲಿ ಜೈಲಿಗೆ..., ರಿಯಲ್‌ ಲೈಫ್‌ನಲ್ಲಿ ಜಪಾನ್‌ಗೆ; ಸುದರ್ಶನ್‌ ರಂಗಪ್ರಸಾದ್‌ TRIP
Recommended image2
ಗ್ರೀಸ್ ನಲ್ಲಿ ಅಕ್ಕನ ಜೊತೆ ಕಾವ್ಯಾ ಗೌಡ… ಧರಿಸಿದ ಬಟ್ಟೆ, ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved