ಲಂಡನ್ನಲ್ಲಿರುವ ಭಾರತೀಯ ಯುವತಿಯೊಬ್ಬರು 100 ರೂಪಾಯಿ ಬಜೆಟ್ನಲ್ಲಿ ದಿನಸಿ ಅಂಗಡಿಯಲ್ಲಿ ಶಾಪಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಸ್ಯಾಂಡ್ವಿಚ್, ನೀರಿನ ಬಾಟಲಿಯಂತಹ ಹೆಚ್ಚಿನ ವಸ್ತುಗಳು ದುಬಾರಿಯಾಗಿದ್ದರಿಂದ, ಕೊನೆಗೆ ಅವರು ಸುಮಾರು 75 ರೂಪಾಯಿಗೆ ವಸ್ತುವೊಂದನ್ನು ಖರೀದಿಸಿದ್ದಾರೆ.
ಲಂಡನ್: ಭಾರತದಲ್ಲಿ 100 ರೂಪಾಯಿ ತಗೊಂಡು ಅಂಗಡಿಗೆ ಹೋದ್ರೆ ಏನೆಲ್ಲಾ ತರಬಹುದು? ಒಂದಷ್ಟು ಬೇಕಾದ ಸಾಮಾನುಗಳನ್ನಂತೂ ಖಂಡಿತಾ ತರಬಹುದು ಅಲ್ವಾ? ಆದ್ರೆ, ಇದೇ 100 ರೂಪಾಯಿನ ಇಂಗ್ಲೆಂಡ್ನಲ್ಲಿ (UK) ಖರ್ಚು ಮಾಡಿದ್ರೆ? ಲಂಡನ್ನಲ್ಲಿರುವ ಭಾರತೀಯ ಯುವತಿ ಇದೇ ರೀತಿ ಒಂದು ಪ್ರಯೋಗ ಮಾಡಿದ್ದಾರೆ. @veggiwander ಅನ್ನೋ ಟ್ರಾವೆಲ್ ಕ್ರಿಯೇಟರ್ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 100 ರೂಪಾಯಿ ಬಜೆಟ್ನಲ್ಲಿ ಲಂಡನ್ನ ದಿನಸಿ ಅಂಗಡಿಯಲ್ಲಿ ಏನೆಲ್ಲಾ ಸಿಗುತ್ತೆ ಅಂತ ನೋಡಲು ಹೋಗಿದ್ದಾರೆ.
ಅರ್ಧ ಲೀಟರ್ ನೀರಿನ ಬೆಲೆ 100 ರೂ.ಗಿಂತಲೂ ಅಧಿಕ
ಅಂಗಡಿ ಒಳಗೆ ಹೋದ ಯುವತಿ, ಮೊದಲು ಸ್ಯಾಂಡ್ವಿಚ್ ಸೆಕ್ಷನ್ಗೆ ಹೋಗಿದ್ದಾರೆ. ಅಲ್ಲಿ ಒಂದು ಚೀಸ್ ಮತ್ತು ಆನಿಯನ್ ಸ್ಯಾಂಡ್ವಿಚ್ ಆಯ್ಕೆ ಮಾಡಿಕೊಂಡರು. ಆದರೆ ಅದರ ಬೆಲೆ ನೋಡಿದಾಗ 1.50 ಪೌಂಡ್ (ಸುಮಾರು 190 ರೂಪಾಯಿ) ಇತ್ತು. ಇದು ಅವರ ಬಜೆಟ್ಗಿಂತ ಹೆಚ್ಚಾಗಿತ್ತು. ನಂತರ, ಬೇರೆ ವಸ್ತುಗಳಿಗಾಗಿ ಹುಡುಕಾಡಿದರು. 500ml ನೀರಿನ ಬಾಟಲಿಯನ್ನು ಕೈಗೆತ್ತಿಕೊಂಡರು. ಅದರ ಬೆಲೆ 1.15 ಪೌಂಡ್ (ಸುಮಾರು 145 ರೂಪಾಯಿ) ಆಗಿತ್ತು. ಇದೂ ಕೂಡ ಬಜೆಟ್ ಮೀರಿತ್ತು.
ಕೊನೆಗೆ 100 ರೂ.ಗೆ ಸಿಕ್ಕಿದ್ದೇನು?
ನಂತರ ಅವರು 0.89 ಪೌಂಡ್ (ಸುಮಾರು 113 ರೂಪಾಯಿ) ಬೆಲೆಯ ಒಂದು ಎಲೆಕೋಸು (ಕ್ಯಾಬೇಜ್) ನೋಡಿದರು. ಇದು ಅವರ ಬಜೆಟ್ಗೆ ಹೆಚ್ಚುಕಡಿಮೆ ಹತ್ತಿರದಲ್ಲಿತ್ತು. ಒಂದು ಓರಿಯೋ ಬಿಸ್ಕೆಟ್ ಪ್ಯಾಕೆಟ್ ನೋಡಿದಾಗ, ಅದರ ಬೆಲೆ 1.65 ಪೌಂಡ್ (ಸುಮಾರು 209 ರೂಪಾಯಿ) ಇದ್ದಿದ್ದರಿಂದ ಅದನ್ನೂ ಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೂ, ತಮ್ಮ ಬಜೆಟ್ಗೆ ಸರಿಹೊಂದುವ ಒಂದು ವಸ್ತುವನ್ನು ಅವರು ಪತ್ತೆ ಹಚ್ಚಿದರು. ಅದು 0.60 ಪೌಂಡ್, ಅಂದರೆ ಸುಮಾರು 75 ರೂಪಾಯಿ ಬೆಲೆಯ ಒಂದು ಸಣ್ಣ ಕ್ಯಾರೆಟ್ ಪ್ಯಾಕೆಟ್. ಕೊನೆಗೆ, ನನ್ನ ಬಜೆಟ್ನಲ್ಲಿ ಇದೊಂದನ್ನು ಮಾತ್ರ ಕೊಳ್ಳಲು ಸಾಧ್ಯವಾಯಿತು ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Viral Video: ರಾತ್ರಿ 11 ಗಂಟೆಗೆ 4 ಕಿ.ಮೀ. ಒಂಟಿ ನಡಿಗೆ! ಹೈದರಾಬಾದ್ ಸೇಫ್ ಎಂದ ಯುವತಿ, ವಿಡಿಯೋ ವೈರಲ್
ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಯುಕೆಯ ಬೆಲೆಯನ್ನು ಭಾರತದ ಬೆಲೆಗೆ ಹೋಲಿಸುವುದು ಸರಿ ಅಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಬರೀ ಬೆಲೆಗಳನ್ನು ಹೋಲಿಸಿದರೆ ಸಾಲದು, ಯುಕೆ ಮತ್ತು ಭಾರತದ ಸಂಬಳದಲ್ಲಿ ಎಷ್ಟು ವ್ಯತ್ಯಾಸವಿದೆ ಎಂಬುದನ್ನೂ ನೋಡಬೇಕು ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಕಾಲೇಜಿಗೆ ಹೋಗೋದಾಗಿ ಸುಳ್ಳಿ ಹೇಳಿ ಓಯೋ ರೂಮಿಗೆ ಹೋದ ಮಗಳು; ಬಾಯ್ಫ್ರೆಂಡ್ ಸಮೇತ ತಾಯಿಗೆ ಸಿಕ್ಕಿಬಿದ್ದ ವಿಡಿಯೋ ವೈರಲ್


